ರಾಜಕೀಯ ಕುರಿತು ಗಾಂಧಿವಾದಿ ಚಿಂತನೆಗಳು, ಆಲೋಚನೆಗಳು ವ್ಯಾಪಕವಾಗಿ ಚರ್ಚಿಸಲ್ಪಟ್ಟಿವೆ. ಆದರೆ, ಆಧುನಿಕ ಔಷಧ, ಮಾನವ ದೇಹ ಮತ್ತು ಆರೋಗ್ಯದ ಬಗ್ಗೆ (ವಿಶೇಷವಾಗಿ ಸಾರ್ವಜನಿಕ ಆರೋಗ್ಯ) ಕುರಿತು ಗಾಂಧಿಜೀಯವರ ಗ್ರಹಿಕೆ ಹಾಗೂ ಚಿಂತನೆಗಳು ಇಲ್ಲಿಯವರೆಗೆ ಚರ್ಚಿಸಲ್ಪಟ್ಟಿಲ್ಲ.
ಗಾಂಧೀಜಿ ಅವರ ಆತ್ಮಚರಿತ್ರೆ 'ದಿ ಸ್ಟೋರಿ ಆಫ್ ಮೈ ಎಕ್ಸ್ಪಿರಿಮೆಂಟ್ ವಿತ್ ಟ್ರುತ್' (The Story of My Experiments with Truth)ನಲ್ಲಿ ಅವರು ಓದುಗರಿಗೆ ಈ ರೀತಿ ಹೇಳುತ್ತಾರೆ. ನನ್ನ ತಂದೆ ಫಿಸ್ಟುಲಾ ಕಾಯಿಲೆಯಿಂದ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ರು. ಆಗ ನನಗೆ ಹದಿನಾರು ವರ್ಷ, ನನ್ನ ತಾಯಿ ಮನೆಯ ಹಳೆಯ ಸೇವಕಿಯಾಗಿದ್ದರು. ನಾನು ಅವರ ಪ್ರಧಾನ ಸೇವಕನಾಗಿದ್ದೆ. ನಾನು ದಾದಿಯರು ಮಾಡುತ್ತಿದ್ದ ಕೆಲಸ ಮಾಡುತ್ತಿದ್ದೆ. ಪ್ರತಿ ರಾತ್ರಿ ನಾನು ನನ್ನ ತಂದೆಯ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದೆ, ಅವರು ನಿದ್ರೆಗೆ ಜಾರಿದ ಬಳಿಕ ನನ್ನ ಕೆಲಸ ಮುಗಿಯುತ್ತಿತ್ತು. ನಾನು ಈ ಸೇವೆಯನ್ನು ಮಾಡಲು ಇಷ್ಟಪಡುತ್ತಿದ್ದೆ ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಗಾಂಧೀಜಿ ಅವರು ದಕ್ಷಿಣ ಸೈನ್ಯದ ಒಂದು ಸಣ್ಣ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ರೋಗಿಗಳ ಕಾಯಿಲೆ ಬಗ್ಗೆ ವಿಚಾರಿಸಿ, ಅದನ್ನು ವೈದ್ಯರಿಗೆ ತಿಳಿಸಿ ಅದಕ್ಕೆ ಔಷಧ ನೀಡುವುದು ಅವರ ಕೆಲಸವಾಗಿತ್ತು. ಇದರ ಮೂಲಕ ಅವರು ರೋಗಗಳಿಂದ ಬಳಲುತ್ತಿರುವ ಭಾರತೀಯರೊಂದಿಗೆ ನಿಕಟ ಸಂಪರ್ಕವನ್ನು ಹೊಂದಲು ಸಾಧ್ಯವಾಯಿತು. ಅವರಲ್ಲಿ ಹೆಚ್ಚಿನವರು ತಮಿಳು, ತೆಲುಗು ಅಥವಾ ಉತ್ತರ ಭಾರತದ ಪುರುಷರಾಗಿದ್ದರು.
ಗಾಂಧೀಜಿಯ ಮತ್ತೊಂದು ಬರಹವಾದ “ಮನೆಮದ್ದು” ಕಲ್ಪನೆಯು ಎಲ್ಲರ ಗಮನವನ್ನು ಮತ್ತಷ್ಟು ಸೆಳೆಯಲಿದೆ. ಇದರ ಪ್ರಕಾರ ಗಾಂಧೀಜಿ ಮೊದಲು ತಮ್ಮ ತಂದೆಯವರಿಗೆ ಆಯುರ್ವೇದ, ಹಕೀಮ್, ಜಾನಪದ ಚಿಕಿತ್ಸೆಯನ್ನು ಮಾಡಿಸಿದ್ರು. ಇವೆಲ್ಲಾ ವಿಫಲವಾದಾಗ ಆಧುನಿಕ ಚಿಕಿತ್ಸೆಯನ್ನು ಕೊಡಿಸಲು ಮುಂದಾದ್ರು. ಆದ್ರೆ ಇದನ್ನು ಅವರ ತಂದೆ ನಿರಾಕರಿಸಿದ್ರು. ದೇಹ, ಆರೋಗ್ಯ ಮತ್ತು ಔಷಧಗಳ ಕುರಿತು ಗಾಂಧೀಜಿಯವರ ಆಲೋಚನೆಗಳು ಯಾವ ರೀತಿ ಇತ್ತು, ಎಂಬುದನ್ನು ಈ ಘಟನೆಗಳು ತೋರಿಸುತ್ತವೆ. ಸಾಂಪ್ರದಾಯಿಕ ಚಿಕಿತ್ಸೆಗಿಂತ ಗಾಂಧೀಜಿಯ ಒಲವು ಹೆಚ್ಚು ಆಧುನಿಕ ಶಸ್ತ್ರಚಿಕಿತ್ಸೆಯತ್ತಾ ಇತ್ತು. ಆರೋಗ್ಯ ದೃಷ್ಟಿಯಿಂದ ಗಾಂಧೀಜಿ ಹೆಚ್ಚು ಸ್ವಚ್ಛತೆಗೆ ಒತ್ತು ನೀಡುತ್ತಿದ್ದರು.
ಗಾಂಧೀಜಿಯವರು ಪುಸ್ತಕದ ಒಂದು ಅಧ್ಯಾಯದಲ್ಲಿ ಕುತೂಹಲಕಾರಿ ಎಂಬಂತೆ “ನನ್ನ ತಂದೆಯ ಸಾವು ಮತ್ತು ನನ್ನ ಡಬಲ್ ನಾಚಿಕೆ” ಎಂದು ಶೀರ್ಷಿಕೆ ನೀಡಿದ್ದಾರೆ. ಈ ರೀತಿ ಯಾಕೆ ನೀಡಿದ್ದಾರೆ ಎಂದು ನೋಡೊದಾದ್ರೆ. ಗಾಂಧೀಜಿ ವಿದ್ಯಾರ್ಥಿಯಾಗಿದ್ದಾಗ ತಂದೆ -ತಾಯಿಗೆ ಸೇವೆ ಮಾಡುವುದೇ ದೊಡ್ಡ ಕರ್ತವ್ಯ ಎಂದಿದ್ದರು. ಅಷ್ಟೇ ಅಲ್ಲದೇ ಧರ್ಮ, ವೈದ್ಯಕೀಯ ವಿಜ್ಞಾನ ಮತ್ತು ಕಾಮನ್ಸೆನ್ಸ್ ಎಲ್ಲ ಒಂದೇ ಹಾಗೂ ಲೈಂಗಿಕ ಸಂಭೋಗವನ್ನು ನಿಷೇಧಿಸಬೇಕೆಂದು ಹೇಳಿದ್ರು. ಆದ್ರೆ ಮದುವೆ ಬಳಿಕ ಅವರು ಯಾವಾಗಲೂ ರೋಗ ಪೀಡಿತ ಅವರ ತಂದೆಯ ಸೇವೆ ಮಾಡುವುದ್ರಲ್ಲೇ ನಿರತರಾಗಿರುತ್ತಿದ್ದರು. ಈ ವೇಳೆ, ಅವರ ಹೆಂಡತಿ ಮಗುವಿನ ನೀರಿಕ್ಷೆಯಲ್ಲಿದ್ದರು. ಅವರ ಮನಸ್ಸು ಕೂಡ ಹೆಂಡತಿ ಸುತ್ತಾ ಸುತ್ತುತಿತ್ತು. ಇದರಿಂದ ಅವರಿಗೆ ಅವಮಾನ ಆದಂತಾಗಿ ಅವರು ಈ ರೀತಿ ಶೀರ್ಷಿಕೆ ನೀಡಿದ್ದಾರಂತೆ.
ಬ್ಯಾರಿಸ್ಟರ್ ಆಗಲು 1888ರಲ್ಲಿ ಗಾಂಧೀಜಿ ಲಂಡನ್ ತಲುಪಿದಾಗ ದೇಹ ಮತ್ತು ಸಸ್ಯಹಾರ ಅವರ ಚಿಂತನೆಯ ಪ್ರಮುಖ ಭಾಗಗಳಾದವು. ಈ ಕುರಿತು ಅವರು ಅವರದೇ ಆದ ಕೆಲವು ವಿಚಾರಗಳನ್ನು ಹೊಂದಿದ್ದರು. ರಸ್ಕಿನ್ ಅವರ 'ಅನ್ಟು ದಿ ಲಾಸ್ಟ್', ಜೆರೆಮಿ ಬೆಂಥಮ್‌ರ 'ಯುಟಿಲೆಟೆರಿಯನ್', ರಾಬರ್ಟ್ ಓವನ್‌ರ 'ಯುಟೋಪಿಯನಿಸಂ', ಟಾಲ್‌ಸ್ಟಾಯ್‌ರ 'ದಿ ಕಿಂಗ್‌ಡಮ್ ಈಸ್ ವಿಥ್ ಯು', ಇವರೆಲ್ಲರ ಆದರ್ಶಗಳು ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ್ದವು. ಲೂಯಿಸ್ ಕುಹ್ನೆ ಅವರ ದಿ ನ್ಯೂ ಸೈನ್ಸ್ ಆಫ್ ಹೀಲಿಂಗ್ ಅಥವಾ ಎಲ್ಲಾ ರೋಗಗಳ ಏಕತೆ ಮತ್ತು ನವ-ಪ್ರಕೃತಿಚಿಕಿತ್ಸೆಯ ಸಿದ್ಧಾಂತ, ಅಡಾಲ್ಫ್ ಜಸ್ಟ್ಸ್ ರಿಟರ್ನ್ ಟು ನೇಚರ್ ( ಸ್ವರ್ಗ ಮರಳಿ ಪಡೆಯಿತು) ಎಂಬ ಮತ್ತೆರಡು ಪುಸ್ತಕಗಳಿಂದ ಅವರು ಪ್ರಭಾವಿತರಾಗಿದ್ದರು.
ಜಲಚಿಕಿತ್ಸೆ (water-cure), ಫೈಟೊಥೆರಪಿ (ಸಸ್ಯಗಳಿಂದ ಚಿಕಿತ್ಸೆ), ಮಣ್ಣು ಮತ್ತು ಮಣ್ಣಿನಿಂದ ಚಿಕಿತ್ಸೆ, ಸ್ವಯಂ ನಿಯಂತ್ರಣ ಮತ್ತು ಆಹಾರ, ಜೀವನ ಶೈಲಿ ಮತ್ತು ಅಸ್ತಿತ್ವದಲ್ಲಿ ಸಮತೋಲನ ಎಂಬ ಪುಸ್ತಕಗಳನ್ನು ಗಾಂಧೀಜಿ ಅನುಸರಿಸುವಂತೆ ಹೇಳಿದ್ದಾರೆ. ಹಿಂದ್ ಸ್ವರಾಜ್ ಪುಸ್ತಕದ ಬಗ್ಗೆ ಅವರು ಮಾತನಾಡುತ್ತಾ, “ನಾನು ಒಂದು ಕಾಲದಲ್ಲಿ ವೈದ್ಯಕೀಯ ವೃತ್ತಿಯ ದೊಡ್ಡ ಪ್ರೇಮಿಯಾಗಿದ್ದೆ. ದೇಶದ ಹಿತದೃಷ್ಟಿಯಿಂದ ವೈದ್ಯರಾಗಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದ್ರೆ ಆಗಲು ಸಾಧ್ಯವಾಗಿಲ್ಲ, ಮತ್ತೊಂದು ವಿಷಯವೆಂದರೇ ಇಂಗ್ಲಿಷ್ ಮೆಡಿಸಿನ್ ಪ್ರಭಾವದಿಂದ ನಮ್ಮಲ್ಲಿರುವ ವೈದ್ಯರು ಗೌರವಾನ್ವಿತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗಾಂಧೀಜಿ ಹೇಳಿದ್ದಾರೆ.
ಸ್ಮಾಲ್ ಫಾಕ್ಸ್ ಕಾಯಿಲೆ ಬಗ್ಗೆ ಎಲ್ಲರೂ ಒಂದು ಅಭಿಪ್ರಾಯವನ್ನು ಹೊಂದಿದ್ರೆ, ಗಾಂಧೀಜಿಯವರ ಅಭಿಪ್ರಾಯವೇ ಬೇರೆಯಾಗಿತ್ತು. ನಾವೆಲ್ಲರೂ ಈ ಕಾಯಿಲೆ ಬಗ್ಗೆ ಭಯಭೀತರಾಗಿದ್ದೇವೆ. ಆದ್ರೆ ಗಾಂಧೀಜಿ ಹೇಳುವುದೇನಂದ್ರೆ ಇದು ಇತರ ಕಾಯಿಲೆಗಳಂತೆ ಒಂದು ಕಾಯಿಲೆ. ಕರುಳಿನ ಕೆಲವು ಅಸ್ವಸ್ಥತೆ ಮತ್ತು ರಕ್ತದ ಅಶುದ್ಧತೆಯಿಂದ ಬರುತ್ತದೆ. ನಮ್ಮ ದೇಹದಲ್ಲಿ ಸಂಗ್ರಹವಾಗುವ ವಿಷವನ್ನು ಸಣ್ಣ- ಪೋಕ್ಸ್ ರೂಪದಲ್ಲಿ ಹೊರಹಾಕಲಾಗುತ್ತದೆ. ಹಾಗಾಗಿ ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಇದೊಂದು ಸಾಂಕ್ರಾಮಿಕ ರೋಗವಲ್ಲ, ಒಬ್ಬ ರೋಗಿ ಮತ್ತೊಬ್ಬನನ್ನು ಸ್ಪರ್ಶಿಸುವ ಮೂಲಕ ಈ ರೋಗ ಬರುವುದಿಲ್ಲ. ಇದಕ್ಕೆ ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೇ ಸಾಕು ಎಂದು ಗಾಂಧೀಜಿ ಹೇಳುತ್ತಾರೆ.
ಯಾವುದೇ ರೋಗ ದೈವಿಕ ಕಾರಣಗಳಿಂದ ಬರುವುದಿಲ್ಲ. ರೋಗ ಬರಲು ಪ್ರಮುಖ ಕಾರಣವೆಂದರೇ ನಮ್ಮ ದೇಹದ ಅಂಗರಚನೆ, ಶಾರೀರಿಕ ಅಥವಾ ಜೀವರಾಸಾಯನಿಕ ಬದಲಾವಣೆ ಎಂದು ಗಾಂಧೀಜಿ ಹೇಳುತ್ತಾರೆ. ದೈವಿಕ ಕಾರಣದಿಂದ ರೋಗ ಬರುತ್ತದೆ ಎಂಬುದು ನಮ್ಮ ಮೂಢ ನಂಬಿಕೆ. ಇದನ್ನು ನಂಬ ಬೇಡಿ, ಕೆಲವರು ಹಣ ಗಳಿಸುವ ಉದ್ದೇಶದಿಂದ ಈ ಇವನೆಲ್ಲಾ ಹುಟ್ಟಾಕಿದ್ದಾರೆಂಬುದು ಗಾಂಧೀಜಿ ಅಭಿಪ್ರಾಯವಾಗಿದೆ.
ನಾವು ಆರೋಗ್ಯವನ್ನು ಕಪಾಡಿಕೊಳ್ಳಲು ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಚೆನ್ನಾಗಿಟ್ಟು ಕೊಳ್ಳಬೇಕೆಂಬುದು ಗಾಂಧೀಜಿ ಅವರ ವಾದವಾಗಿದೆ. ಹಾಗಾಗಿ ಅವರು ನೈರ್ಮಲ್ಯತೆಗೆ ಹೆಚ್ಚು ಒತ್ತನ್ನು ನೀಡುತ್ತಾರೆ. ಮೆಡಿಸಿನ್ ಒಂದು ಸಾಮಾಜ ವಿಜ್ಞಾನ ಎಂದು ಜರ್ಮನ್ ರೋಗಶಾಸ್ತ್ರಜ್ಞ ರುಡಾಲ್ಫ್ ವಿರ್ಚೋವ್ ಹೇಳುತ್ತಾರೆ. ಅಲ್ಲದೇ ಮೆಡಿಸಿನ್ನನ್ನು ರಾಜಕೀಯಕ್ಕೂ ಹೋಲಿಸಿದ್ದಾರೆ. ಪ್ರಕೃತಿ ಚಿಕಿತ್ಸೆ, ವೈಯಕ್ತಿಕ ನೈರ್ಮಲ್ಯದ ಬಗ್ಗೆ ಗಾಂಧೀಜಿ ತಮ್ಮದೇ ಆದ ಕಲ್ಪನೆಯನ್ನು ಹೊಂದಿದ್ದರು. ಅವರ ಚಿಂತನೆಗಳು ಇಂದಿನವರಿಗೆ ಹೆಚ್ಚು ಉಪಯುಕ್ತವಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಕಾರಿಯಾಗಿವೆ.
ಡಾ.ಜಯಂತ ಭಟ್ಟಾಚಾರ್ಯ