ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ವಿಶ್ವದಾದ್ಯಂತ ಎಲ್ಲಾ ದೇಶಗಳು ಲಾಕ್‌ಡೌನ್ ನಿಯಮಗಳನ್ನು ಜಾರಿಗೆ ತಂದಿವೆ. ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಹೊರಬರಲು ಸಾಧ್ಯವಾಗದ ಬಹುಪಾಲು ಜನರಿಗೆ ಕೋವಿಡ್ ಕುರಿತಾದ ಆಳವಾದ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು ಸಹಜವಾಗಿ ಆಸಕ್ತಿ ಹುಟ್ಟಿಸುತ್ತಿದೆ. ಆದರೆ ಮೋಸದಿಂದ ಹಣಗಳಿಸುವವರ ಚಟುವಟಿಕೆ ಹೆಚ್ಚಾಗುತ್ತಿದೆ. ದೇಶಾದ್ಯಂತದ ಸೈಬರ್ ಗ್ಯಾಂಗ್‌ಗಳು ಸಮಾಜದ ದಯೆ-ಹೃದಯವಂತಿಕೆಯ ದುರುಪಯೋಗ ಪಡಿಸಿಕೊಂಡು ಹಣ ಗಳಿಸಲು ಪ್ರಾರಂಭ ಮಾಡಿವೆ. ಭೀಕರ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿರುವ ಭಯದ ಲಾಭವನ್ನು ಪಡೆದುಕೊಳ್ಳಲು ಮುಂದಾಗಿವೆ. ಮೂರು ವಾರಗಳ ಹಿಂದೆ, ಕೇಂದ್ರ ಗೃಹ ಸಚಿವಾಲಯವು ಪ್ರಸ್ತುತ ಶೋಧ ತಾಣಗಳಲ್ಲಿ ಜನಪ್ರಿಯಗೊಂಡಿರುವ ಪದವಾದ ಕೊರೋನಾ ವೈರಸ್ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ -ಮ್ಯಾಪ್, -ರಿಯಲ್ ಟೈಮ್, -ಸ್ಟೇಟಸ್, ಇತ್ಯಾದಿ ಪದಗಳನ್ನು ಸೇರಿಸುವ ಮೂಲಕ ಬಂದಿರುವ ನಕಲಿ ವೆಬ್‌ಸೈಟ್‌ಗಳ ವಿವರವಾದ ಪಟ್ಟಿಯನ್ನು ಬಿಡುಗಡೆ ಮಾಡಿತು.
ಭಾರತೀಯ ರಾಷ್ಟ್ರೀಯ ಸೈಬರ್ ಭದ್ರತಾ ಅಧಿಕಾರಿ, ಲೆಫ್ಟಿನೆಂಟ್ ಜನರಲ್ ರಾಜೇಶ್ ಪಂತ್ ಅವರ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಕರೋನಾ ವೈರಸ್ ಹೆಸರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಕಲಿ ವೆಬ್ ಪೋರ್ಟಲ್‌ಗಳು ಹೊರಬಂದಿವೆ. ಕೊರೋನಾ ಆರೈಕೆ ಮತ್ತು ನಕಲಿ ಚಿಕಿತ್ಸೆಗಳ ಬಗ್ಗೆ ಸೈಬರ್ ಅಪರಾಧಿಗಳಿಂದ ಪ್ರತಿದಿನ ಲಕ್ಷಾಂತರ ನಾಗರಿಕರಿಗೆ ಇ-ಮೇಲ್ ಳು ಕಳುಹಿಸಲ್ಟಡುತ್ತಿವೆ. ಈ ಹಿನ್ನೆಲೆಯಲ್ಲಿ ಅಮೇರಿಕಾ ಮತ್ತು ಬ್ರಿಟನ್ ಸರ್ಕಾರಗಳು ತಮ್ಮ ನಾಗರಿಕರಿಗೆ ನಕಲಿ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಿವೆ ಮತ್ತು ಅವರ ಬಗ್ಗೆ ಜಾಗರೂಕರಾಗಿರಿ ಎಂದು ಅರಿವು ಮೂಡಿಸುತ್ತಿವೆ. ಅಮೇರಿಕಾದ ಗುಪ್ತಚರ ಸಂಸ್ಥೆ ಎಫ್‌ಬಿಐ ಕೋವಿಡ್‌ನ ಹರಡುವಿಕೆಯ ನಂತರ, ಸೈಬರ್ ಅಪರಾಧಗಳು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ಸೈಬರ್ ಅಪರಾಧಿಗಳು ಲಾಕ್ ಡೌನ್ ಇಂದಾಗಿ ಹೊರಬರಲಾರದೆ ಮನೆಗಳಲ್ಲಿ ಇರುವ ನಾಗರಿಕರ ಭಯವನ್ನು ಲಾಭದಾಯಕ ಅವಕಾಶ ಚಾಕಚಕ್ಯತೆಯಿಂದ ನಿರ್ವಹಿಸಲು ಸೈಬರ್ ಅಪರಾಧಿಗಳು ಹೆಚ್ಚು ಪ್ರಯತ್ನಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಯುರೋಪಿಯನ್ ಯೂನಿಯನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ಲೀನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ 35 ದೇಶಗಳ ಮುನ್ನೂರಕ್ಕೂ ಹೆಚ್ಚು ಭದ್ರತಾ ವೃತ್ತಿಪರರು ಈ ಹಿನ್ನೆಲೆಯಲ್ಲಿ ಸೈಬರ್ ಅಪರಾಧಿಗಳ ವಿರುದ್ಧ ಜಂಟಿ ಹೋರಾಟವನ್ನು ಪ್ರಾರಂಭಿಸಿದ್ದಾರೆ. ವ್ಯಾಪಕವಾದ ನಾಗರಿಕ-ಜಾಗೃತಿ ತಂತ್ರಗಳನ್ನು ಮನೆಯಲ್ಲಿಯೇ ಉಳಿದಿರುವ ನಾಗರೀಕರಿಗೆ ತಿಳಿಸುವ ಕಾರ್ಯವನ್ನು ದೇಶೀಯವಾಗಿ ತೀಕ್ಷ್ಣಗೊಳಿಸಬೇಕು. ಮೂರು ವರ್ಷಗಳ ಹಿಂದೆ, 'ವನ್ನಾ ಕ್ರೈ' ಹೆಸರಿನಲ್ಲಿ ಸೈಬರ್ ಅಪರಾಧಿಗಳು ನಡೆಸಿದ ಭಯೋತ್ಪಾದಕ ದಾಳಿಯು 175 ದೇಶಗಳಲ್ಲಿ ವ್ಯಾಪಿಸಿ ತೊಂದರೆಗೀಡು ಮಾಡಿದೆ. ತರುವಾಯ, ರಷ್ಯಾ, ಉಕ್ರೇನ್, ಅಮೇರಿಕಾ, ಜರ್ಮನಿ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಸೈಬರ್ ಅಪರಾಧಿಗಳು ಲಕ್ಷಾಂತರ ಡೆಬಿಟ್ ಕಾರ್ಡ್ ದತ್ತಾಂಶವನ್ನು ಕಳ್ಳತನ ಮಾಡಿದ್ದಾರೆ ಎಂಬ ವರದಿಗಳು ಬೆಳಕಿಗೆ ಬಂದಿವೆ. ಆಗ ಕೇಂದ್ರದ ಅನೇಕ ವೆಬ್‌ಸೈಟ್‌ಗಳನ್ನು ಸೈಬರ್ ದಾಳಿಗೆ ಒಳಪಟ್ಟಿದ್ದವು. ಲಾಕ್ ಡೌನ್ ಕಾರಣದಿಂದಾಗಿ, ವಿವಿಧ ಕಂಪನಿಗಳ ನೌಕರರು ತಮ್ಮ ಕರ್ತವ್ಯವನ್ನು ಮನೆಯಿಂದಲೇ ನಿರ್ವಹಿಸಬೇಕಾಗುತ್ತದೆ.
ಮನೆಯಲ್ಲಿರುವ ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ತಮ್ಮ ಕೆಲಸದ ಸ್ಥಳಗಳಲ್ಲಿರುವಂತೆ ಮಾಹಿತಿ ಸುರಕ್ಷತೆ ವ್ಯವಸ್ಥೆ ಹೊಂದಿರುವುದಿಲ್ಲ ಎಂಬುದು ನಿಜ. ಅಪ್ಲಿಕೇಶನ್‌ಗಳ ಬಳಕೆಯಲ್ಲಿನ ಯಾವುದೇ ಸಡಿಲತೆ ಅಥವಾ ಅಜ್ಞಾನ ಅಥವಾ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ಪ್ರಮುಖ ಮಾಹಿತಿಯನ್ನು ಕಳ್ಳತನ ಮಾಡಲು ಅವಕಾಶ ನೀಡುತ್ತದೆ. ಇತ್ತೀಚೆಗೆ ನಡೆದಿರುವ ಸೈಬರ್ ಅಪರಾದಗಳನ್ನು ಗಮನಿಸಿದರೆ, ಸೈಬರ್ ಅಪರಾಧಿಗಳು ಜೂಮ್ ವಿಡಿಯೋ ಅಪ್ಲಿಕೇಶನ್ ಬಳಸುವ ಇಬ್ಬರು ಕಂಪ್ಯೂಟರ್ ವೃತ್ತಿಪರರ ಕಂಪ್ಯೂಟರ್‌ಗಳಿಗೆ ಅಕ್ರಮವಾಗಿ ಹ್ಯಾಕ್ ಮಾಡುವ ಮತ್ತು ಬಿಟ್ ಕ್ವಾಯಿನ್ ಗಳ ಮೂಲಕ ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿರುವ ಘಟನೆಗಳು ಬೆಳಕಿಗೆ ಬಂದಿವೆ.
ಕೊರೊನಾ ವೈರಸ್ ಮಾಲ್ ವೇರ್ ಸಹಾಯದಿಂದ, ಸೈಬರ್ ಅಪರಾಧಿಗಳು ಸಂತ್ರಸ್ತರ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಗಳಿಂದ ಪ್ರಮುಖ ಮಾಹಿತಿಗಳನ್ನು ಹೊರತೆಗೆಯುತ್ತಿದ್ದಾರೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಖಾಲಿ ಮಾಡಲಾಗುತ್ತಿದೆ. ಇತ್ತೀಚೆಗೆ ಪ್ರವಾಹೋಪಾದಿಯಲ್ಲಿ ಸೃಷ್ಠಿಯಾಗಿರುವ ಪ್ರಧಾನ ಮಂತ್ರಿ ಪರಿಹಾರ ನಿಧಿ ಎಂಬ ಹೆಸರಿನ ಸ್ವಲ್ಪ ಬದಲಾವಣೆ ಇದ್ದು ಹೆಚ್ಚಾಗಿ ಅದರಂತೆಯೇ ಕಾಣುವ 'ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ ' (ಪಿಎಂ ಕೇರ್ಸ್ ಫಂಡ್) ವೆಬ್ ಸೈಟ್ ಗಳು ಸೈಬರ್ ಗ್ಯಾಂಗ್‌ಗಳ ಕಲಾತ್ಮಕತೆಗೆ ಸ್ಪಷ್ಟ ಪುರಾವೆಯಾಗಿದೆ.
ಇತ್ತೀಚೆಗೆ, ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಆನ್‌ಲೈನ್‌ನಲ್ಲಿ 400 ಮಿಲಿಯನ್ ಹಣಕ್ಕೆ ಮಾರಾಟ ಮಾಡಿ, ಆದಾಯವನ್ನು ಗುಜರಾತ್ ಸರ್ಕಾರದ ಕೋವಿಡ್ ವಿರುದ್ಧ ಯುದ್ಧ ನಿಧಿಗೆ ಜಮಾ ಮಾಡಲಾಗಿದೆ ಎಂಬ ಸುದ್ಧಿಯನ್ನು ಹಬ್ಬಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಸೈಬರ್ ಅಪರಾಧಿಗಳ ಗಾಳಕ್ಕೆ ಆಕರ್ಷಿತರಾದ ಮತ್ತು ಲಾಕ್‌ಡೌನ್ ಮುಗಿಯುವವರೆಗೂ ಚಲನಚಿತ್ರಗಳನ್ನು ಉಚಿತವಾಗಿ ನೋಡುವ ಅಥವಾ ಮೊಬೈಲ್ ಫೋನ್‌ನ ಉಚಿತ ರೀಚಾರ್ಜ್ ಪಡೆಯುವ ಭರವಸೆಯಿಂದ ಅವರು ಒದಗಿಸಿದ ಲಿಂಕ್ ಅನ್ನು ಫಾರ್ವರ್ಡ್ ಮಾಡುವ ಮುಗ್ಧ ಜನರು ಇನ್ನೂ ಅನೇಕ ಅಮಾಯಕರನ್ನು ಈ ಬಲೆಗೆ ಸಿಲುಕಿಸುತ್ತಿದ್ದಾರೆ. ಸರ್ಕಾರವು ಸೈಬರ್-ರಕ್ಷಣಾ ಕಾರ್ಯವಿಧಾನವನ್ನು ಬಲಪಡಿಸುವ ಮೂಲಕ ಮಾತ್ರ ಈ ಸೈಬರ್ ಭಯೋತ್ಪಾದನೆಯನ್ನು ನಿಲ್ಲಿಸಲು ಸಾಧ್ಯ. ಈ ಮಧ್ಯೆ, ಸೈಬರ್ ಕಳ್ಳತನದ ಹಾನಿಯನ್ನು ಕಡಿಮೆ ಮಾಡಲು ವೈಯಕ್ತಿಕ ಸುರಕ್ಷತೆಗಳನ್ನು ನೆಟ್ಟಿಗರು ಪ್ರತ್ಯೇಕವಾಗಿ ಅನುಸರಿಸಬೇಕು.