ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾ ರಾಜ್ಯದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಮೂವರು ಮೈಮೇಲೆ ಬಟ್ಟೆ ಹಾಕಿಕೊಳ್ಳದ ಯುವತಿಯರು ಸೇರಿ ಕಾರಿನಲ್ಲಿ ಸವಾರಿ ಹೊರಟಿದ್ದರು. ಪೊಲೀಸರದು ಅದೇನ್ ಕರ್ಮವೋ ನೋಡಿ. ಎಂತೆಂಥಾ ಘಟನೆಗಳನ್ನ ಕಣ್ಣಾರೆ ನೋಡಬೇಕಾಗುತ್ತೆ. ಹೀಗೆ ಹೆದ್ದಾರಿ ಮೇಲೆ ಹರೆಯಕ್ಕೆ ಬಂದ ಹೆಣ್ಣುಮಕ್ಕಳು ಹೊರಟ್ರೇ ಪೊಲೀಸ್ ಅಧಿಕಾಗಳಾದರೂ ಹೇಗೆ ಸುಮ್ನಿರ್ತಾರೆ. ಯುವತಿಯರಿದ್ದ ಕಾರನ್ನ ಚೇಸ್ ಮಾಡಿ ಮೂವರನ್ನೂ ಬಂಧಿಸಿದ್ದಾರೆ.
ಅಚ್ಚರಿ ಏನ್ ಗೊತ್ತಾ, ಮೊದಲು ಯುವತಿಯರು ಕೈಗೆ ಸಿಗದಷ್ಟು ಸ್ಪೀಡ್‌ನಲ್ಲಿ ಕಾರು ಓಡಿಸಿದ್ದಾರೆ. ಆದರೆ, 33 ಕಿ.ಮೀ ಬಳಿಕ ಹೈವೇ ಪಕ್ಕದಲ್ಲಿ ಯುವತಿಯರು ಕಾರನ್ನ ನಿಲ್ಲಿಸಿದ್ದಾರೆ. ಆಗ ಪೊಲೀಸರು ಮೂವರ ಕೈಗೂ ಕೋಳ ತೊಡಿಸಿದ್ದಾರೆ.
ಬೆತ್ತಲಾಗಿದ್ದ ಬಾಲೆಯರು ಪೊಲೀಸರಿಗೆ ಸುಮ್ನೇ ಸಿಗಲು ಸಾಧ್ಯವೇ ಇರಲಿಲ್ಲ. ಬಿಸಿಲಿನಲ್ಲಿ ಮೈಕಪ್ಪಾಗದಿರಲಿ ಅಂತಾ ಸನ್‌ಲೋಷನ್‌ನ ಮೈಗೆ ಮೆತ್ತಿಕೊಳ್ಳಲು ಕಾರು ನಿಲ್ಲಿಸಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯಾಕ್ರಮ್ಮಾ ಹೀಗೆ ಇಂಥ ಖಯಾಲಿ ಅಂತಾ ಬಾಲೆಯರನ್ನ ಕೇಳಿದ್ದಾರೆ. ಅದಕ್ಕೆ ಏನೂ ಇಲ್ಲ ಸಾರ್, ಸ್ನಾನ ಮಾಡಿದ್ದೆವು. ಸುಮ್ನೇ ಯಾಕೆ ಟವಲ್‌ನಲ್ಲಿ ಮೈಯನ್ನ ಒರೆಸಿಕೊಳ್ಳಬೇಕು. ಗಾಳಿಯಲ್ಲಿ ಒಣಗಿಸಿಕೊಂಡರಾಯಿತು ಅಂತಾ ಮೂವರೂ ಮಾತಾಡಿಕೊಂಡೆವು. ಅದಕ್ಕಾಗಿ ಮೈಮೇಲೆ ಬಟ್ಟೆ ಇರದೇ ಕಾರು ಓಡಿಸಿಕೊಂಡು ಬಂದೆವು ಅಂತಾ ನಾಚಿಕೆ ಬಿಟ್ಟೇ ಪೊಲೀಸ್ ಆಫೀಸರ್‌ಗಳ ಎದುರಿಗೆ ತಪ್ಪೊಪ್ಪಿಕೊಂಡಿದ್ದರು ಬಾಲೆಯರು.
ಅಷ್ಟೇ ಅಲ್ಲ, ಅಶ್ವದಳದ ಪೊಲೀಸನ ಮೇಲೂ ಕಾರು ಹಾಯಿಸಲು ಬೆತ್ತಲೆ ಬಾಲೆಯರು ಯತ್ನಿಸಿದ್ದರಂತೆ. ಕಾರು ಓಡಿಸ್ತಿದ್ದ ಯುವತಿಯನ್ನ 18 ವರ್ಷದ ಒಯಾಸಿಸ್ ಶಕೀರಾ ಮೆಕ್‌ಲಿಯೋಡ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಳಿದ ಇನ್ನಿಬ್ಬರನ್ನ 19 ವರ್ಷದ ಜೆನಿಯಾಹ್ ಮೆಕ್‌ಲಿಯೋಡ್ ಮತ್ತು ಸಿಸಿಲಿಯಾ ಯುನಿಕ್ಯೂ ಯಂಗ್ ಎಂದು ಪೊಲೀಸರು ಗುರುತಿಸಿದ್ದಾರೆ. ಈ ಮೂವರೂ ಯುವತಿಯರ ವಿರುದ್ಧ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ ಮತ್ತು ಹದ್ದು ಮೀರಿ ವರ್ತಿಸಿದ್ದಾರೆಂದು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಜತೆಗೆ ಹಾಕಿಕೊಳ್ಳೋದಕ್ಕೂ ಪೊಲೀಸರೇ ಪಾಪ ಬಟ್ಟೆಯನ್ನೂ ಕೊಟ್ಟಿದ್ದಾರಂತೆ.