ವಾರಣಾಸಿ: ಉತ್ತರ ಪ್ರದೇಶದ ಬಾದಗಾಂವ್ ಪೊಲೀಸ್ ವ್ಯಾಪ್ತಿಯ ಬಾಬತ್‌ಪುರ-ವಾರಣಾಸಿ ರಸ್ತೆಯಲ್ಲಿ ಪಿಕಪ್ ವ್ಯಾನ್ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಲಖನೌದ ಗೋಸೈಗಂಜ್ ಪೊಲೀಸ್ ವ್ಯಾಪ್ತಿಯ ಕೇಸ್ರಾ ಗ್ರಾಮದ ನನ್ಹು (22), ಸತ್ಯನಂ (30), ರೌಶನ್ ಲಾಲ್ (45) ಎಂದು ಗುರುತಿಸಲಾಗಿದೆ.
ಇವರು ವ್ಯಾಪಾರಕ್ಕಾಗಿ ಬೆಳಗ್ಗೆ ವಾರಣಾಸಿಗೆ ಪಿಕಪ್ ವ್ಯಾನ್ನಲ್ಲಿ ಬರುತ್ತಿದ್ದರು. ಇದ್ದಕ್ಕಿದ್ದಂತೆ ವ್ಯಾನ್ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಎಂದು ತಿಳಿದುಬಂದಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸ್ಥಳದಿಂದಲೇ ಮ್ಯಾಂಗಲ್ಡ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಯಾಳುಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.