ಬಂಡಾ (ಉತ್ತರ ಪ್ರದೇಶ): ಬಂಡಾ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಮ್ರೌಡಿ ಪ್ರದೇಶದಲ್ಲಿ ಪೊಲೀಸ್, ಅವರ ತಾಯಿ ಮತ್ತು ಸಹೋದರಿಯನ್ನು ಕೊಂದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಅಭಿಜಿತ್, ಅವರ ಸಹೋದರಿ ಮತ್ತು ತಾಯಿಯನ್ನು ಅವರ ಸಂಬಂಧಿಕರು ಕೊಲೆ ಮಾಡಿದ್ದರು. ಈ ಸಂಬಂಧ ಒಂದೇ ಕುಟುಂಬದ ಮೂವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಬಂಡಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಶಂಕರ್ ಮೀನಾ ಹೇಳಿದ್ದಾರೆ.
ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಅಭಿಜಿತ್ ಅವರ ಸ್ನೇಹಿತ ದಿಲೀಪ್, ಅಭಿಜಿತ್ ಅವರ ಸಹೋದರಿ ಉಳಿದ ಆಹಾರವನ್ನು ನಮ್ಮ ಮನೆ ಬಳಿ ಎಸೆಯಬೇಡಿ ಎಂದು ಹೇಳಿದರು. ಅದಕ್ಕೆ ಅವರು ಅಭಿಜಿತ್ನ ಸಹೋದರಿಯನ್ನು ನಿಂದಿಸಿದರು. ಈ ಕುರಿತು ನಾವು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದೆವು. ನಾವು ಪೊಲೀಸ್ ಠಾಣೆಯಿಂದ ಬಂದಾಗ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು. ನನಗೆ ಗಾಯವಾಯಿತು. ಅಭಿಜಿತ್, ಸಹೋದರಿ ಮತ್ತು ತಾಯಿಯನ್ನು ಕೊಲೆ ಮಾಡಿದರು ಎಂದು ಹೇಳಿಕೆ ನೀಡಿದ್ದಾರೆ.