ಸೀತಾಪುರ (ಉತ್ತರ ಪ್ರದೇಶ): ಸದಾರ್ಪುರ ಪೊಲೀಸ್ ಠಾಣಾ ಪ್ರದೇಶದ ಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ಹಾವು ಮಲಗಿದ್ದ ಮಕ್ಕಳಿಗೆ ಕಚ್ಚಿರುವ ಪರಿಣಾಮ, ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಸ್ಥಳೀಯ ಪೊಲೀಸರು ಮತ್ತು ಪ್ರಾದೇಶಿಕ ಅಕೌಂಟೆಂಟ್ ಸ್ಥಳಕ್ಕೆ ತಲುಪಿ ಘಟನೆಯ ಮಾಹಿತಿ ಪಡೆದಿದ್ದಾರೆ.
ಸದಾರ್ಪುರ ಪೊಲೀಸ್ ಠಾಣಾ ಪ್ರದೇಶದ ಪಿಪ್ರಿ ಮಜ್ರಾ ಪಿಪ್ರಕಲಾ ಗ್ರಾಮದ ನಿವಾಸಿ ಸುನೀಲ್ ಕುಮಾರ್ ಅವರ ಮೂವರು ಮಕ್ಕಳು ಮನೆಯ ಕೋಣೆಯ ನೆಲದಲ್ಲಿ ಮಲಗಿದ್ದರು. ರಾತ್ರಿ ಹೊತ್ತಿಗೆ ಮನೆಗೆ ಬಂದ ಹಾವು ಮಕ್ಕಳಿಗೆ ಕಚ್ಚಿದೆ. ಶಾಲು (12), ಪವನ್ (10), ಅನ್ಶ್ (07) ಮೃತಪಟ್ಟ ಮಕ್ಕಳಾಗಿದ್ದಾರೆ.
ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಘೋಷಿಸಿದ್ದಾರೆ. ಮಕ್ಕಳ ಅಕಾಲಿಕ ಮರಣ ಕುಟುಂಬದ ಆಕ್ರಂದನ ಮುಗಿಲುಮುಟ್ಟುವಂತೆ ಮಾಡಿದೆ.