ETV Bharat / bharat

ನೀವೂ ನೋಡಿ: ಆಲ್ಬಂ ಸಾಂಗ್​ ಮೂಲಕ ಪೊಲೀಸ್ರಿಂದ ಕೊರೊನಾ ಜಾಗೃತಿ

ಲಾಕ್​ಡೌನ್​ ನಿಭಾಯಿಸಲು ಕೆಲವೆಡೆ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಈ ವೇಳೆ ಕೇರಳ ಪೊಲೀಸರು ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಲು ಆಲ್ಬಂ ಹಾಡೋಂದನ್ನು ಹೊರತಂದಿದ್ದಾರೆ.

Thottilpalam police raise awareness against COVID-19 through album song
ಕೇರಳ ಪೊಲೀಸರಿಂದ ಹಾಡಿನ ಮೂಡಿನ ಕೊರೊನಾ ಜಾಗೃತಿ
author img

By

Published : Apr 1, 2020, 8:08 PM IST

ಕೋಯಿಕ್ಕೋಡ್​ (ಕೇರಳ)​: ದೇಶದಲ್ಲಿ ಲಾಕ್​ಡೌನ್​ ನಿಭಾಯಿಸೋದು ಪೊಲೀಸರಿಗೆ ಸಾಹಸದ ಕೆಲಸವಾಗುತ್ತಿದೆ. ಈ ವೇಳೆ ಕೇರಳದ ಕೋಯಿಕ್ಕೋಡ್​ ಜಿಲ್ಲೆಯ ತೊಟ್ಟಿಲ್​ಪಾಲಂ ಪೊಲೀಸ್​ ಠಾಣೆಯ ಸಿಬ್ಬಂದಿ ವಿನೂತನವಾಗಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತ ಲಾಕ್​ಡೌನ್​ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ತೊಟ್ಟಿಪಾಲಂ ಜನಮೈತ್ರಿ ಪೊಲೀಸ್​​ ಠಾಣೆಯ ಸಿಬ್ಬಂದಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಆಲ್ಬಂ ಸಾಂಗ್​ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ತೊಟ್ಟಿಪಾಲಂ ಠಾಣೆಯ ಹೌಸ್​ ಆಫೀಸರ್​ ಜಾಕೋಬ್​.ಎಂ.ಟಿ, ಸಬ್​ ಇನ್ಸ್​ಪೆಕ್ಟರ್​ಗಳಾದ ಪಿ.ಕೆ.ಜಿತೇಶ್​​ ಹಾಗೂ ರಾಧಾಕೃಷ್ಣನ್​ ನೇತೃತ್ವ ವಹಿಸಿದ್ದಾರೆ.

ಕೇರಳ ಪೊಲೀಸರಿಂದ ಹಾಡಿನ ಮೂಡಿನ ಕೊರೊನಾ ಜಾಗೃತಿ

ಹಾಡಿನಲ್ಲಿ ಕೊರೊನಾ ಹರಡದಂತೆ ಜಾಗೃತಿ ವಹಿಸಿ ಕೊರೊನಾ ವಿರುದ್ಧ ಹೋರಾಡಲು ಜನರಿಗೆ ಪ್ರೇರಣೆ ನೀಡಲಾಗಿದೆ. ಹಾಡಿನಲ್ಲಿ ಲಾಕ್​ಡೌನ್ ವೇಳೆ ಮನೆಗಳಲ್ಲಿಯೇ ಇರುವುದು, ಕೈ ತೊಳೆಯುವುದರ ಮಹತ್ವ ವಿವರಿಸಲಾಗಿದೆ.

ಈ ಹಾಡನ್ನು ಸಂಪೂರ್ಣವಾಗಿ ಸಿವಿಲ್​ ಪೊಲೀಸ್ ಸಿಬ್ಬಂದಿ ದೀಪಾ ಕಾಯಕೋಡ್ ಹಾಡಿದ್ದು, ಮತ್ತೊಬ್ಬ ಸಿಬ್ಬಂದಿ ಅಬ್ದುಲ್​ಕುಟ್ಟಿ ಸಾಹಿತ್ಯ ಬರೆದಿದ್ದಾರೆ. ಮಾಧ್ಯಮ ಪ್ರತಿನಿಧಿಯೊಬ್ಬರು ಹಾಡಿನ ರೆಕಾರ್ಡಿಂಗ್​​ ಮುಗಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಬಾಬು ಪೆರಂಬ್ರಾ, ಬಿನಿಲಾ ದಿನೇಶನ್​, ಅಘಿಲಾ ಕುಟ್ಯಾಡಿ ಹಾಡಿನ ಭಾಗವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.