ETV Bharat / bharat

ಈ ಸಾಫ್ಟ್​ವೇರ್​ ಎಂಜಿನಿಯರ್​​ಗೆ ಪ್ಲಾಸ್ಟಿಕ್​ ಕೊಟ್ರೆ ಸಸಿ ನೀಡ್ತಾರೆ.. - 'Tiffin Box Challenge'

ಪರಿಸರದ ಮಹಾಶತ್ರು ಪ್ಲಾಸ್ಟಿಕ್​ ವಿರುದ್ಧ 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ವಿಶಿಷ್ಟ ಕಾರ್ಯಕ್ರಮ ಮತ್ತು 'ಟಿಫಿನ್​ ಬಾಕ್ಸ್​ ಚಾಲೆಂಜ್'​ ಎಂಬ ಸವಾಲು ಆರಂಭಿಸಿದ್ದಾರೆ. ಹೈದರಾಬಾದ್​ನ ಸಾಫ್ಟ್​ವೇರ್​ ಇಂಜಿನಿಯರ್​ ದೋಸಪಾಟಿ ರಾಮು.

This Hyderabad engineer gives a sapling in exchange for plastic
ಸಾಫ್ಟ್​ವೇರ್​ ಇಂಜಿನಿಯರ್​​ ಸಾಧನೆ
author img

By

Published : Feb 4, 2020, 6:02 AM IST

ಹೈದರಾಬಾದ್​: ಪರಿಸರದ ಮಹಾಶತ್ರು ಪ್ಲಾಸ್ಟಿಕ್​ ವಿರುದ್ಧ 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ವಿಶಿಷ್ಟ ಕಾರ್ಯಕ್ರಮ ಮತ್ತು 'ಟಿಫಿನ್​ ಬಾಕ್ಸ್​ ಚಾಲೆಂಜ್'​ ಎಂಬ ಸವಾಲು ಆರಂಭಿಸಿದ್ದಾರೆ ಹೈದರಾಬಾದ್​ನ ಸಾಫ್ಟ್​ವೇರ್​ ಇಂಜಿನಿಯರ್​ ದೋಸಪಾಟಿ ರಾಮು. ಸದ್ಯಕ್ಕೆ ರಾಮು ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್​ ಅನ್ನು ಬಳಸದಿರಲು ಮತ್ತು ನಿಷೇಧಿಸಲು ದೇಶಾದ್ಯಂತ ಜಾಗೃತಿ, ಅಭಿಯಾನಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಕೆಲವರು ಎಲೆಮರಿಕಾಯಿಯಂತೆ ಸದ್ದಿಲ್ಲದೆ ಈ ಮಹಾಮಾರಿ ಪ್ಲಾಸ್ಟಿಕ್​ ವಿರುದ್ಧ ಹೋರಾಡುತ್ತಾ, ಅದನ್ನು ಬಳಸದಂತೆ ಜಾಗೃತಿ ಮೂಡಿಸುತ್ತಿದ್ದಾರೆೆ. ಹೈದರಾಬಾದ್​ನ ಸಾಫ್ಟ್​ವೇರ್​ ಇಂಜಿನಿಯರ್ ದೋಸಪಾಟಿ ರಾಮು ಈ ಕೆಲಸ ಮಾಡುತ್ತಿರುವ ವ್ಯಕ್ತಿ. ರಾಮು ಮಹಾಮಾರಿ ಪ್ಲಾಸ್ಟಿಕ್​ ವಿರುದ್ಧ 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, 'ಟಿಫಿನ್​ ಬಾಕ್ಸ್​ ಚಾಲೆಂಜ್'​ ಎಂಬ ಸವಾಲನ್ನೂ ಕೈಗೆತ್ತಿಕೊಂಡಿದ್ದಾರೆ.

ಏಕ ಬಳಕೆ ಪ್ಲಾಸ್ಟಿಕ್‌ನಿಂದ ನಗರವನ್ನು ಮುಕ್ತವಾಗಿಸಬೇಕೆಂಬ ಪಣ ತೊಟ್ಟಿರುವ ರಾಮು ಅವರು, ಪರಿಸರ ರಕ್ಷಣೆಗೆ ಸಸಿ ವಿತರಿಸುತ್ತಿದ್ದಾರೆ. ಯಾವುದೇ ಸಣ್ಣ ಪ್ರಮಾಣದ ಪ್ಲಾಸ್ಟಿಕ್​ ತರುವವರಿಗೆ ಮಾತ್ರ ಸಸಿ ನೀಡುತ್ತಿದ್ದಾರೆ. 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ಈ ಕಾರ್ಯಕ್ರಮಕ್ಕಾಗಿ ಪೂರ್ವ ಗೋದಾವರಿ ಕಡಿಯಾದಿಂದ ಸಾವಿರಾರು ಸಸ್ಯಗಳನ್ನು ಕೊಂಡುತಂದಿದ್ದಾರೆ. ಯಾವುದೇ ನಿರ್ದಿಷ್ಟ ಪ್ರಮಾಣದ ಪ್ಲಾಸ್ಟಿಕ್ ತರಬೇಕೆಂದು ನಿರ್ಧರಿಸಿಲ್ಲ. ಚಿಪ್ಸ್​​ ಪ್ಯಾಕೆಟ್​ ತಂದರೂ ಸಹ ಅದಕ್ಕೆ ಪ್ರತಿಯಾಗಿ ಸಸಿಗಳನ್ನು ಒದಗಿಸುತ್ತಿದ್ದಾರೆ. ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಮರುಬಳಕೆ ಮತ್ತು ಹೆಚ್ಚಿನ ಸಂಸ್ಕರಣೆಗಾಗಿ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​​​(ಜಿಹೆಚ್‌ಎಂಸಿ)ಗೆ ಉಚಿತವಾಗಿ ತಲುಪಿಸುತ್ತಿದ್ದಾರೆ.

ಸಾಫ್ಟ್​ವೇರ್​ ಇಂಜಿನಿಯರ್​​ ಸಾಧನೆ

'ಮಾಂಸಕ್ಕೆ ಟಿಫಿನ್​ ಬಾಕ್ಸ್​ ಒಯ್ಯಿರಿ'

ರಾಮು ಅವರ ಮತ್ತೊಂದು ಸವಾಲು 'ಟಿಫಿನ್ ಬಾಕ್ಸ್ ಚಾಲೆಂಜ್'. ಮಾಂಸ ಖರೀದಿಸಲು ಕಪ್ಪು-ಬಿಳಿ ಬಣ್ಣದ ಪ್ಲಾಸ್ಟಿಕ್​ ಕವರ್​ಗಳನ್ನು ಜನ ತೆಗೆದುಕೊಂಡು ಹೋಗುತ್ತಾರೆ. ಇದರಿಂದಾಗಿ ವಿಶೇಷವಾಗಿ ಭಾನುವಾರ ಒಂದೇ ದಿನಕ್ಕೆ 20,000 ಪ್ಲಾಸ್ಟಿಕ್​ ಕವರ್​​ಗಳು ಚರಂಡಿಗಳನ್ನು ಸೇರುತ್ತಿವೆ. ಇದನ್ನು ತಡೆಯಲು ಪ್ಲಾಸ್ಟಿಕ್​ ಕವರ್​ಗಳ ಬದಲಿಗೆ ಟಿಫಿನ್ ಬಾಕ್ಸ್​​ ಒಯ್ಯಬೇಕು. ಈ ಮೂಲಕ ಪ್ಲಾಸ್ಟಿಕ್​ ಕವರ್​ಗಳಲ್ಲಿ ಮಾಂಸ ಒಯ್ಯುವುದನ್ನು ತಪ್ಪಿಸಬಹುದು. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಲಹೆ ನೀಡ್ತಾರೆ ರಾಮು.

ಮಾಂಸ ತಿನ್ನುವುದನ್ನು ನಿಲ್ಲಿಸಿ ಎಂದು ಹೇಳುತ್ತಿಲ್ಲ. ಪರಿಸರ ಸಂರಕ್ಷಿಸುವ ಉದ್ದೇಶದಿಂದ ಹೀಗೆ ಹೇಳುತ್ತಿದ್ದೇನೆ. ಆರಂಭದಲ್ಲಿ ತಮ್ಮ ಸ್ನೇಹಿತರಿಗೆ ಈ ಸವಾಲು ಹಾಕಿದ್ದೆ. ಈಗ ಅವರಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾಂಸದ ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸಲು ನಗರದ ಸ್ಥಳೀಯ ಮಾಂಸದ ಮಳಿಗೆಗಳಿಗೆ ಭೇಟಿ ನೀಡಿ ಈ ಸವಾಲು ಹಾಕುತ್ತಿದ್ದೇನೆ ಎಂದಿದ್ದಾರೆ. ಸದ್ಯಕ್ಕೆ ರಾಮು ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಾರ್ವಜನಿಕರು ಮನೆಯಲ್ಲಿರುವ ಪ್ಲಾಸ್ಟಿಕ್​ ಕೊಟ್ಟು ಸಸಿ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.