ಕೊಲ್ಲಂ: ಕೇರಳದ ಕೊಟ್ಟಾರಕ್ಕರ ಮೂಲದ ಇಂಜಿನಿಯರ್ ಒಬ್ಬರು ತಮ್ಮ ಕೌಶಲ್ಯ ಮತ್ತು ಅನುಭವವನ್ನು ಬಳಸಿ ಎತ್ತರವಾದ ಮರದಿಂದ ಹಲಸಿನ ಹಣ್ಣು ಕಿತ್ತು ತರಲು ಹೊಸ ಉಪಾಯವೊಂದನ್ನು ಮಾಡಿದ್ದಾರೆ.
ಜಾನಿ ಚೆಕ್ಕಲಾ ಎಂಬ ಇಂಜಿನಿಯರ್ ತಮ್ಮ ತೋಟದಲ್ಲಿರುವ 50 ಅಡಿ ಎತ್ತರದ ಹಲಸಿನ ಮರದಿಂದ ಹಣ್ಣು ಕಿತ್ತು ತರಲೆಂದು ಕಾಲ್ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಕಾಲ್ಸೇತುವೆಯು ಐದು ಹಲಸಿನ ಮರಗಳಿಗೆ ಸಂಪರ್ಕ ಕಲ್ಪಿಸಿದ್ದು, ಇದರ ಮೇಲೆ ನಡೆದುಕೊಂಡು ಹೋಗಿ ಸುಲಭವಾಗಿ ಹಣ್ಣುಗಳನ್ನು ಕಿತ್ತು ತರಬಹುದಾಗಿದೆ.
ಬೇರೆಯವರ ಮೇಲೆ ಅವಲಂಬಿತರಾಗದೆ ಹಲಸಿನ ಹಣ್ಣನ್ನು ಕೀಳಲು ಪರ್ಯಾಯ ವಿಧಾನವನ್ನು ಯೋಚಿಸಲು ಆರಂಭಿಸಿದೆ. ಇದರ ಪರಿಣಾಮ ಇದೀಗ ಕಾಲ್ಸೇತುವೆ ನಿರ್ಮಾಣವಾಗಿದೆ. ಇತರ ಮರಗಳನ್ನು ತಲುಪಲು ಸೇತುವೆಯನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯಿದೆ ಎಂದು ಜಾನಿ ಹೇಳಿದ್ದಾರೆ.
ಸೇತುವೆಯ ರೇಲಿಂಗ್‌ಗಳನ್ನು ಕಬ್ಬಿಣದ ಪೈಪ್ಗಳಿಂದ ಮಾಡಲಾಗಿದ್ದು, ಮರದ ಕೊಂಬೆಗಳಿಗೆ ಕೊಕ್ಕೆಗಳನ್ನು ಜೋಡಿಸಲಾಗಿದೆ. ಅಲ್ಲದೇ ಸೇತುವೆಯ ಕೊನೆಯಲ್ಲಿ ವಿಶ್ರಾಂತಿ ಸ್ಥಳವನ್ನೂ ಸಹ ನಿರ್ಮಿಸಲಾಗಿದೆ.