ಹೈದರಾಬಾದ್: ನಗರ ಮೂಲದ ಲೈಫ್ ಸೈನ್ಸಸ್ ಕಂಪನಿಯು ಕ್ವಾಂಟಿಪ್ಲಸ್ ಸಿಒವಿ(Quantiplus COV) ಹೆಸರಿನ ಕೊರೊನಾ ವೈರಸ್ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದೆ. ಈ ಪರೀಕ್ಷಾ ಕಿಟ್ ಕೇವಲ 2 ಗಂಟೆಗಳಲ್ಲಿ ಫಲಿತಾಂಶವನ್ನು ನೀಡುತ್ತದೆ.
ಈ ಟೆಸ್ಟ್ ಕಿಟ್ ಪ್ರಯೋಗಿಸಲು 'ಹುವೆಲ್ ಲೈಫ್ ಸೈನ್ಸಸ್' ಸಂಸ್ಥೆಯು ಕಳೆದ ಶುಕ್ರವಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯಿಂದ ಅನುಮೋದನೆ ಪಡೆದಿದೆ. ಇದರ ಉತ್ಪಾದನೆಯು ಕಂಪನಿಯ ನರಸಿಂಗಿ ಮತ್ತು ಕೊಕಾಪೆಟ್ ಬ್ರಾಂಚ್ನಲ್ಲಿ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ಹುವೆಲ್ ಲೈಫ್ ಸೈನ್ಸಸ್ ಸಂಸ್ಥೆಯ ನಿರ್ದೇಶಕ ಶಶೀರ್ ಕುಮಾರ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.
-
My compliments to Sishir & Rachna the founders of Huwel Lifesciences, Hyderabad based company that developed testing kits for #CoronaVirus detection
— KTR (@KTRTRS) April 11, 2020 " class="align-text-top noRightClick twitterSection" data="
Their kits can give results in 2 hours & the mode is scalable. Look forward to working with them pic.twitter.com/SKwdmZpzhu
">My compliments to Sishir & Rachna the founders of Huwel Lifesciences, Hyderabad based company that developed testing kits for #CoronaVirus detection
— KTR (@KTRTRS) April 11, 2020
Their kits can give results in 2 hours & the mode is scalable. Look forward to working with them pic.twitter.com/SKwdmZpzhuMy compliments to Sishir & Rachna the founders of Huwel Lifesciences, Hyderabad based company that developed testing kits for #CoronaVirus detection
— KTR (@KTRTRS) April 11, 2020
Their kits can give results in 2 hours & the mode is scalable. Look forward to working with them pic.twitter.com/SKwdmZpzhu
ಕ್ವಾಂಟಿಪ್ಲಸ್ ಕೋವಿಡ್ -19 ಕಿಟ್ ಅಮೆರಿಕಾದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ಸಿಡಿಸಿ)ನಿಂದ ಪ್ರಕಟಿತ ಪ್ರೋಟೋಕಾಲ್ ಆಧರಿಸಿ ತಯಾರಿಸಲಾಗಿದೆ. ಇದು ಕೇವಲ ಎರಡು ಗಂಟೆಯೊಳಗೆ ಕೊರೊನಾ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಿದೆ.