ETV Bharat / bharat

ನನ್ನ ಹೆಸರಿನ ರಾಜಕೀಯ ಪಕ್ಷಕ್ಕೂ ನನಗೂ ಸಂಬಂಧವಿಲ್ಲ: ನಟ ಜೋಸೆಫ್ ವಿಜಯ್​

author img

By

Published : Nov 5, 2020, 9:21 PM IST

ನಟ ವಿಜಯ್​​ ಪ್ರತಿಕ್ರಿಯಿಸಿ, ನನ್ನ ಹೆಸರಿನಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ಅಭಿಮಾನಿಗಳು ಈ ಪಕ್ಷಕ್ಕೆ ಸೇರುವುದು ಅಥವಾ ಸೇವೆ ಸಲ್ಲಿಸುವುದಾಗಲಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Actor Vijay
ನಟ ವಿಜಯ್​

ತಮಿಳುನಾಡು: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ತಮಿಳು ನಟ ವಿಜಯ್​​ ರಾಜಕೀಯ ಪ್ರವೇಶ ಕುರಿತು ಅವರು ಪ್ರತಿಕ್ರಿಯಿಸಿದ್ದು, ತಮ್ಮ ಹೆಸರಿನಲ್ಲಿ ನೋಂದಾಯಿತವಾಗಿರುವ ರಾಜಕೀಯ ಪಕ್ಷದೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ನಟ ವಿಜಯ್ ಅವರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ನೋಂದಾಯಿಸಲಾಗಿದೆ. ಅವರ ತಂದೆ, ನಟ ಮತ್ತು ನಿರ್ದೇಶಕ ಎಸ್​.ಎ. ಚಂದ್ರಶೇಖರ್ ತಮ್ಮ ಅಭಿಮಾನಿಗಳ ಕ್ಲಬ್ ಅನ್ನು ‘ಅಖಿಲ ಭಾರತ ತಲಪತಿ ವಿಜಯ್ ಮಕ್ಕಲ್ ಇಯಕ್ಕಂ’ ಎಂದು ನೋಂದಾಯಿಸಲು ಭಾರತ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ಈ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ಈ ಕುರಿತು ವಿಜಯ್ ಅವರ ನೇರ ಸೂಚನೆಯ ಮೇರೆಗೆ ಪಕ್ಷವನ್ನು ನೋಂದಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ.

ಬಳಿಕ ಈ ಕುರಿತು ಹೇಳಿಕೆ ನೀಡಿರುವ ವಿಜಯ್​​ ತಂದೆ, ನಾನು ಅಖಿಲ ಭಾರತ ತಲಪತಿ ವಿಜಯ್ ಮಕ್ಕಲ್ ಇಯಕ್ಕಂ ಹೆಸರಿನಲ್ಲಿ ರಾಜಕೀಯ ಪಕ್ಷದ ನೋಂದಣಿಗೆ ಅರ್ಜಿ ಸಲ್ಲಿಸಿದ್ದೇನೆ. ಇದು ನನ್ನ ಉಪಕ್ರಮ. ಇದು ವಿಜಯ್ ಅವರ ರಾಜಕೀಯ ಪಕ್ಷವಲ್ಲ. ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೆಯೇ ಎಂಬುದರ ಕುರಿತು ನಾನು ಹೇಳಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.