ತಿರುಪತಿ: ಸದಾ ಭಕ್ತಾದಿಗಳಿಂದ ತುಂಬಿರುವ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ವರದಿಯಾಗಿದೆ.
ಐದು ಕೆಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಎರಡು ಚಿನ್ನದ ಉಂಗುರ ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಖಜಾನೆಯಿಂದ ನಾಪತ್ತೆಯಾಗಿದೆ. ಪ್ರಕರಣ ಸಂಬಂಧ ಟಿಟಿಡಿಯ ಉಪಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸಂಬಳವನ್ನೂ ಹಿಂಪಡೆಯಲಾಗಿದೆ.