ETV Bharat / bharat

ಕೆಲವೇ ಬಲಿಷ್ಠರ ಹಿಡಿತದಲ್ಲಿ ವಿಶ್ವ ಸಂಸ್ಥೆ.. ಮೂಲಭೂತ ಗುರಿ ಸಾಧನೆ ಕಷ್ಟಸಾಧ್ಯ - ವಿಶ್ವಶಾಂತಿಗಾಗಿ ವಿಶ್ವ ಸಂಸ್ಥೆ

ಇಂದು ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ ಗತಕಾಲದ ವೈಭವದ ಸಂಕೇತಗಳಾಗಿ ಮಾತ್ರ ಉಳಿದುಕೊಂಡಿವೆ. ತನ್ನ ಮನಸ್ಸಿಗೆ ಬಂದಂತೆ ತನ್ನ ಹಿತಾಸಕ್ತಿಗೆ ಅನುಗುಣವಾಗಿ ವಿಶ‍್ವಸಂಸ್ಥೆಯನ್ನು ಆಳಿಕೊಂಡು ಬಂದಂತಹ ಅಮೆರಿಕವು ಟ್ರಂಪ್‍ ಪ್ರವೇಶದ ನಂತರದಲ್ಲಿ ವಿಶ್ವಸಂಸ್ಥೆಯ ಗೌರವವನ್ನು ಮಣ್ಣುಪಾಲು ಮಾಡುತ್ತಾ ಅನೇಕ ಇಕ್ಕಟ್ಟುಗಳಿಗೆ ಗುರಿ ಮಾಡುತ್ತಿರುವುದು ಸಹ ಎಲ್ಲರೂ ಬಲ್ಲ ವಿಷಯವಾಗಿದೆ.

ವಿಶ್ವ ಸಂಸ್ಥೆ
ವಿಶ್ವ ಸಂಸ್ಥೆ
author img

By

Published : Oct 2, 2020, 5:01 PM IST

ಎರಡನೇ ವಿಶ್ವ ಮಹಾಯುದ್ಧದ ಭೀಕರತೆಯಿಂದ ತತ್ತರಿಸಿ ಹೋಗಿದ್ದ ಜಗತ್ತು ವಿಶ್ವಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ಮನುಕುಲದ ಪ್ರತಿನಿಧಿಯನ್ನಾಗಿ ವಿಶ್ವಸಂಸ್ಥೆಯನ್ನು ಹುಟ್ಟು ಹಾಕಿ 75 ಸಂವತ್ಸರಗಳು ಸಂದವು. ಈ ಚಾರಿತ್ರಿಕ ಘಟನೆಯ ಗೌರವಾರ್ಥವಾಗಿ ಆಚರಿಸುವ ವಾರ್ಷಿಕ ಸಮಾರಂಭದಲ್ಲಿ ಆಂತರಿಕ ‘ಸುಧಾರಣೆಗಳು’ ಎಂಬ ಬೇಡಿಕೆ ಜೋರಾಗಿ ಕೇಳಿ ಬಂದಿದೆ. ಇಪ್ಪತ್ತೈದು ವರ್ಷದ ಹಿಂದೆ ವಿಶ್ವಸಂಸ್ಥೆ ಸ್ಥಾಪನೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಪ್ರಿಟಸ್ ಡು ಅಮಾರಾಲ್ ಅವರು ಸಹ ಇದೇ ವಿಷಯವನ್ನು ಚರ್ಚೆಗೆ ತಂದಿದ್ದರು. ಐದು ವರ್ಷಗಳ ಹಿಂದೆ, ಎಪ್ಪತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕೇವಲ ಐದು ಪ್ರಮುಖ ದೇಶಗಳು ‘ವಿಟೋ’ ಅಧಿಕಾರ ಹೊಂದಿರುವ ಔಚಿತ್ಯವೇನು ಎಂದು ಪ್ರಶ‍್ನಿಸಿ 104 ದೇಶಗಳು ಒಕ್ಕೊರಲಿನಿಂದ ನಿರ್ಣಯ ಹೊರಡಿಸಿದ್ದು ಒಂದು ಸಂಚಲನವನ್ನೇ ಉಂಟು ಮಾಡಿತ್ತು. ಇದೀಗ ವಿಶ್ವಸಂಸ್ಥೆ ಮತ್ತೊಂದು ಮೈಲುಗಲ್ಲು ತಲುಪಿರುವ ಸುಸಂದರ್ಭದಲ್ಲಿ ತನ್ನೊಳಗೆ ಸುಧಾರಣೆಗೆ ಮುಂದಾಗದೇ ಇರುವ ನಡವಳಿಕೆ ಸಂಸ್ಥೆಯ ವಿಶ‍್ವಾಸಾರ್ಹತೆಯನ್ನೇ ಪ್ರಶ‍್ನಿಸುವಂತೆ ಮಾಡುತ್ತಿದೆ ಎಂಬ ಪ್ರಧಾನಿ ಮೋದಿಯವರ ಟೀಕೆ ಅಕ್ಷರಶಃ ನಿಜವಾಗಿದೆ.

ವಿಶ್ವಸಂಸ್ಥೆ ಸ್ಥಾಪನೆಯಾದ ಸುದೀರ್ಘ ಅವಧಿಯನ್ನು ಕ್ರಮಿಸಿ ಹತ್ತು ಹಲವು ಮೈಲಿಗಲ್ಲುಗಳನ್ನು ಹಾದು ಬಂದ ನಂತರವೂ ಅದು ತನ್ನ ಮೂಲಭೂತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದು ಶೀಘ್ರವಾಗಿ ಸಂಸ್ಥೆಯೊಳಗೆ ಆಗಬೇಕಿರುವ ಆಂತರಿಕ ಸುಧಾರಣೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಭದ್ರತಾ ಮಂಡಳಿಯನ್ನು ವಿಸ್ತರಿಸಲು ಕರಡು ಪ್ರಸ್ತಾವನೆಯನ್ನು ಸುವರ್ಣ ಮಹೋತ್ಸವದ ಸಭೆಗಳಲ್ಲಿ ಮಂಡಿಸಲು ಪ್ರಯತ್ನಗಳು ನಡೆದಿದ್ದವು. ಆದರೆ ಆ ಪ್ರಯತ್ನಗಳು ಸಫಲವಾಗಿರಲಿಲ್ಲ. ಇದೀಗ ಜಗತ್ತಿನ ಎರಡು ಪ್ರಬಲ ಆರ್ಥಿಕತೆಗಳ ನಡುವಿನ ಶೀತಲ ಸಮರವನ್ನು ಕೊನೆಗೊಳಿಸಬೇಕು ಎಂದು ವಿಶ್ವಸಂಸ್ಥೆಯು ಕರೆ ನೀಡಿದೆ. ತನ್ನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಭಾವನೆ ಮತ್ತು ಸ್ನೇಹಪೂರ್ವಕ ಬ್ರಾತೃತ್ವದ ಭಾವನೆಗಳನ್ನು ನೆಲೆಗೊಳಿಸಲು ನಡೆಸಿದ ಪ್ರಯತ್ನಗಳಲ್ಲಿ ವಿಶ್ವ ಸಂಸ್ಥೆ ಹೀನಾಯ ಸೋಲು ಕಂಡಿದೆ ಎನ್ನಲು ಇದಕ್ಕಿಂದ ಹೆಚ್ಚಿನ ಪುರಾವೆ ಬೇಕಾಗಿಲ್ಲ. ಇಂದಿನ ಬದಲಾವಣೆ ಸನ್ನಿವೇಶಕ್ಕೆ ತಕ್ಕಂತೆ ಭದ್ರತಾ ಮಂಡಳಿಯನ್ನು ಪ್ರಜಾತಾಂತ್ರಿಕಗೊಳಿಸಿ, ಸಾರ್ವತ್ರಿಕಗೊಳಿಸದಿದ್ದರೆ ವಿಶ್ವಸಂಸ್ಥೆಯ ಅಸ್ತಿತ್ವಕ್ಕೆ ಅರ್ಥ ಉಳಿಯುವುದಾದರೂ ಎಂತು?

ಕಳೆದ ಏಳೂವರೆ ದಶಕಗಳಲ್ಲಿ ಜಗತ್ತಿನ ಚಹರೆ ಬಹಳಷ್ಟು ಬದಲಾಗಿದೆ. ಎರಡನೇ ಮಹಾಯುದ್ಧದ “ವಿಜೇತ” ಶಕ್ತಿಗಳಾಗಿದ್ದ ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ರಷ್ಯಾ ಹಾಗೂ ತದನಂತರದಲ್ಲಿ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆದಿದ್ದವು. ಇದಾದ ನಂತರದ ಅವಧಿಯಲ್ಲಿ ಅನೇಕಾನೇಕ ಪ್ರಮಾಣಾತ್ಮಕ ಬದಲಾವಣೆಗಳು ಜಗತ್ತಿನಲ್ಲಿ ಸಂಭವಿಸಿವೆ. ಕೆಲವು ದೇಶಗಳು ಪ್ರಬಲಗೊಂಡಿವೆ ಮತ್ತೆ ಕೆಲವು ದುರ್ಬಲಗೊಂಡಿವೆ. ಇಂದು ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ ಗತಕಾಲದ ವೈಭವದ ಸಂಕೇತಗಳಾಗಿ ಮಾತ್ರ ಉಳಿದುಕೊಂಡಿವೆ. ತನ್ನ ಮನಸ್ಸಿಗೆ ಬಂದಂತೆ ತನ್ನ ಹಿತಾಸಕ್ತಿಗೆ ಅನುಗುಣವಾಗಿ ವಿಶ‍್ವಸಂಸ್ಥೆಯನ್ನು ಆಳಿಕೊಂಡು ಬಂದಂತಹ ಅಮೆರಿಕವು ಟ್ರಂಪ್‍ ಪ್ರವೇಶದ ನಂತರದಲ್ಲಿ ವಿಶ್ವಸಂಸ್ಥೆಯ ಗೌರವವನ್ನು ಮಣ್ಣುಪಾಲು ಮಾಡುತ್ತಾ ಅನೇಕ ಇಕ್ಕಟ್ಟುಗಳಿಗೆ ಗುರಿ ಮಾಡುತ್ತಿರುವುದು ಸಹ ಎಲ್ಲರೂ ಬಲ್ಲ ವಿಷಯವಾಗಿದೆ.

ವಿಟೋ ಅಧಿಕಾರದ ದುರ್ಬಳಕೆ ವಿಷಯದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧಿಗಳೇ ಇಲ್ಲವಾಗಿದೆ! ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ರಷ್ಯಾದಂತ ಸೂಪರ್​ ಪವರ್​ ರಾಷ್ಟ್ರಗಳು ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ಒಪ್ಪಿಕೊಂಡಿದ್ದರೂ ಚೀನಾ ಮಾತ್ರ ಇದನ್ನು ವಿರೋಧಿಸುತ್ತಾ ಅಡ್ಡಗಾಲು ಹಾಕುತ್ತಲೇ ಬಂದಿದೆ. ಭಾರತ ಮತ್ತು ಜಪಾನ್ ದೇಶಗಳು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯರಾಗಿ ಆಯ್ಕೆಯಾಗಿ ಜೊತೆಜೊತೆಯಾಗಿ ಕುಳಿತುಕೊಳ್ಳಬಾರದು ಎಂಬುದೇ ಚೀನಾದ ಏಕಮಾತ್ರ ಹುನ್ನಾರ. ಭದ್ರತಾ ಮಂಡಳಿಯಲ್ಲಿ ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಗಳೆಲ್ಲವನ್ನೂ ಚೀನಾ ತಾನೊಂದೇ ಪ್ರತಿನಿಧಿಸುತ್ತಿರುವುದು ಸಂಪೂರ್ಣವಾಗಿ ಅತಾರ್ಕಿಕವಾಗಿದೆಯಲ್ಲದೇ ಅಸಂಬದ್ಧವಾಗಿದೆ. ಬ್ರೆಜಿಲ್, ಭಾರತ, ಜರ್ಮನಿ ಮತ್ತು ಜಪಾನ್ ದೇಶಗಳಿಗೆ ಶಾಶ್ವತ ಸದಸ್ಯತ್ವ ನೀಡುವ ಬೇಡಿಕೆಗಳನ್ನು ಕಡೆಗಣಿಸಿಕೊಂಡೇ ಬರಲಾಗಿದೆ. ಇದೀಗ ಕೊವಿಡ್ ಬಿಕ್ಕಟ್ಟು ಜಗತ್ತಿನ ದೇಶಗಳನ್ನು ವಿವಿಧ ಗುಂಪುಗಳಾಗಿ ವಿಭಜಿಸುತ್ತಿರುವಾಗ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಒಂದು ಸೌಹಾರ್ದಯುತ ವಾತಾವರಣವನ್ನು ಕೂಡಲೇ ನಿರ್ಮಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರ್ ಅವರು ಕರೆ ನೀಡಿರುವುದು ಔಚಿತ್ಯಪೂರ್ಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.