ETV Bharat / bharat

ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ, ಕರ್ಫ್ಯೂ ಜಾರಿ... ಇಲ್ಲಿದೆ ಕ್ಷಣಕ್ಷಣದ ಮಾಹಿತಿ - ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ

The Violence of Delhi : Live news
ದೆಹಲಿ ಹಿಂಸಾಚಾರ
author img

By

Published : Feb 26, 2020, 12:38 PM IST

Updated : Feb 26, 2020, 6:59 PM IST

18:39 February 26

  • ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗಲಭೆ ಪೀಡಿತ ಪ್ರದೇಶಗಳ ಪರಿಶೀಲನೆ ಮುಗಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಗೃಹ ಸಚಿವಾಲಯಕ್ಕೆ ತೆರಳಿದ್ದಾರೆ.

18:36 February 26

  • ವಿಧಾನಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಅವರು ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ. 
  • ಹಿಂಸಾಚಾರದಲ್ಲಿ ಸಾವಿಗೀಡಾದ ಪೇದೆ ರತನ್ ಲಾಲ್ ಜಿ ಅವರ ಕುಟುಂಬದ ಬಗ್ಗೆ ಮಾತನಾಡಿದ ಅವರು, ಆ ಕುಟುಂಬಕ್ಕೆ 1 ಕೋಟಿ ರೂ.ಗಳ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದಾರೆ. 
  • ದೆಹಲಿಯ ಜನರು ಹಿಂಸಾಚಾರವನ್ನು ಬಯಸುವುದಿಲ್ಲ. ಇದೆಲ್ಲವನ್ನು ಕೆಲವು ಸಾಮಾಜದ ಕೇಡು ಬಯಸುವವರು ಇಂತಹ ಕೃತ್ಯ ಎಸಗಿದ್ದಾರೆ: ಸಿಎಂ 

17:39 February 26

  • ಡ್ರೋನ್ ಸಹಾಯದಿಂದ ಗಲಭೆ ಪೀಡಿತ ಪ್ರದೇಶ ಪರಿಶೀಲನೆ
  • ಜನರಲ್ಲಿ ಐಕ್ಯತೆಯ ಭಾವನೆ ಇದೆೆ, ದ್ವೇಷವಿಲ್ಲ. ಕೆಲವು ಕಿಡಿಗೇಡಿಗಳು ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಪಿಎಂ ಅದೇಶದಂತೆ ನಾವೂ ಕೂಡ ಸ್ಥಳ ಪರಿಶೀಲನೆ ನಡೆಸುತ್ತಿದ್ದೇವೆ: ಅಜಿತ್ ದೋವಲ್
  • ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ಸಮಾಜವನ್ನು, ತಮ್ಮ ನೆರೆಹೊರೆಯವರನ್ನು ಸಹ ಪ್ರೀತಿಸುತ್ತಾರೆ. ಪ್ರತಿಯೊಬ್ಬರೂ ಇತರರೊಂದಿಗೆ ಪ್ರೀತಿ ಮತ್ತು ಸಾಮರಸ್ಯದಿಂದ ಬದುಕಬೇಕು. ಜನರು ಪರಸ್ಪರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆ ವಿನಃ ಅವುಗಳನ್ನು ಹೆಚ್ಚಿಸಬಾರದು

17:16 February 26

  • ದೆಹಲಿಯ ಈಶಾನ್ಯ ಭಾಗದಲ್ಲಿ ನಾಳೆ ನಿಗದಿಯಾಗಿದ್ದ ಸಿಬಿಎಸ್‌ಇ  ಪರೀಕ್ಷೆಗಳನ್ನು ಮುಂದೂಡಲಾಗಿದೆ.
  • ದೆಹಲಿಯ ಉಳಿದ ಭಾಗಗಳಲ್ಲಿ ನಿಗದಿಯಂತೆ  ಪರೀಕ್ಷೆ ನಡೆಸಲಾಗುತ್ತದೆ.
  • ಗಲಭೆ ಪೀಡಿತ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಪ್ರಕಟಣೆ

17:12 February 26

  • JP Nadda, BJP President: It is upsetting that Delhi Police's head constable Rattan Lal ji had to lose his life while maintaining law & order. He has been given the honour of martyr and Rs 1 crore will be given to his family. We will also provide a job to one of his family member. pic.twitter.com/1wbVeIV6xE

    — ANI (@ANI) February 26, 2020 " class="align-text-top noRightClick twitterSection" data=" ">
  • ದೆಹಲಿ ಹಿಂಸಾಚಾರದಲ್ಲಿ ಬಲಿಯಾದ ಪೇದೆಗೆ ಹುತಾತ್ಮರ ಗೌರವನ್ನು ನೀಡಲಾಗಿದೆ ಎಂದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
  • ಪೇದೆ ಕುಟುಂಬಕ್ಕೆ ಕುಟುಂಬಕ್ಕೆ 1 ಕೋಟಿ ರೂ. ಹಾಗೂ ಕುಟುಂಬದ ಸದಸ್ಯರೋರ್ವರಿಗೆ ಕೆಲಸ ನೀಡುತ್ತೇವೆಂದು ಭರವಸೆ

17:11 February 26

  • ಅಜಿತ್ ದೋವಲ್ ಇಲ್ಲಿನ ಸ್ಥಳೀಯರ ಜೊತೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿನ ಮಹಿಳಾ ನಿವಾಸಿಯೊಬ್ಬರ ಜೊತೆ ಮಾತನಾಡಿದ ಅವರು, ಪ್ರೀತಿಯ ಭಾವನೆಯನ್ನು ಇಟ್ಟುಕೊಳ್ಳಿ, ನಾವೆಲ್ಲರೂ ಒಟ್ಟಾಗಿ ಬದುಕಬೇಕು. ದೇಶ ಒಟ್ಟಾಗಿ ಮುಂದುವರಿಯಬೇಕಾಗಿದೆ ಎಂದಿದ್ದಾರೆ.

17:04 February 26

  • ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗಲಭೆೆ ಪೀಡಿತ ಮೌಜ್‌ಪುರ ಪ್ರದೇಶಕ್ಕೆ ತಲುಪಿದ್ದು, ಅಲ್ಲನ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ.
  • ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.  ಪೊಲೀಸರು  ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ:  ಅಜಿತ್ ದೋವಲ್

16:41 February 26

  • ದೆಹಲಿಯ ಹಿಂಸಾಚಾರ ಹಿನ್ನೆಲೆ  ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು  ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದಾರೆ

16:27 February 26

  • ನ್ಯಾಯಾಲಯವು ದೆಹಲಿ ಹಿಂಸಾಚಾರ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
  • ಅಧಿಕಾರಿಗಳು ಕಾನೂನಿನ ಆದೇಶದಂತೆ ಕಟ್ಟುನಿಟ್ಟಿನ ಕೆಲಸ ಮಾಡಬೇಕು ಎಂದು ಸೂಚಿಸಿದೆ.
  • ಎಫ್‌ಐಆರ್‌ ದಾಖಲು ಮಾಡುವ ಸಂಬಂಧ ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡು ನಾಳೆ ವರದಿ ಸಲ್ಲಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ತಿಳಿಸಿದೆ.

16:26 February 26

  • ಹಿಂಸಾಚಾರದಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ನಿನ್ನೆವರೆಗೂ ಮರಣೋತ್ತರ ಪರೀಕ್ಷೆ ನಡೆಸಿರಲಿಲ್ಲ. ಈಗ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಶವಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.

16:09 February 26

  • ಇಲ್ಲಿಯವರೆಗೆ ನಾವು 200 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ, 22 ಜನರು ಸಾವಿಗೀಡಾಗಿದ್ದಾರೆ. ಬಹುಪಾಲು ಗಾಯಾಳುಗಳನ್ನು ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್​ ಮಾಡಲಾಗಿದೆ.  35  ಗಾಯಾಳುಗಳಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.  ಬೆಳಿಗ್ಗೆಯಿಂದ 16 ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಜಿಟಿಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

16:07 February 26

  • ಹಿಂಸಾಚಾರದಲ್ಲಿ ಇದುವರೆಗೆ ಸತ್ತವರ ಸಂಖ್ಯೆ 24
  • ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

15:54 February 26

  • ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೈನ್ಯ ನಿಯೋಜಿಸುವುದು ನಂತರದ ಕೆಲಸ. ಈಗ ಎಫ್‌ಐಆರ್ ನೋಂದಣಿ ಮಾಡುವ ಬಗ್ಗೆ ಗಮನ ಹರಿಸಬೇಕು: ನ್ಯಾಯಾಲಯ
  • ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ವಿಡಿಯೋ ತುಣುಕಿನಲ್ಲಿ ಕಾಣಿಸಿಕೊಂಡ ಅಧಿಕಾರಿಯ  ಬಗ್ಗೆ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿದೆ

15:10 February 26

  • Visuals from violence-affected Johripur in North East Delhi; No fresh violence reported today; security personnel are deployed in the area pic.twitter.com/7IZzwTC44O

  • ಈಶಾನ್ಯ ದೆಹಲಿಯ ಜೋಹ್ರಿಪುರದದಲ್ಲಿ ಇಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

15:06 February 26

  • ಸಂತ್ರಸ್ತರಿಗೆ ತಕ್ಷಣದ ಸಹಾಯಕ್ಕಾಗಿ ಸಹಾಯವಾಣಿಗಳನ್ನು ಆರಂಭಿಸಲು  ಹೈಕೋರ್ಟ್ ನಿರ್ದೇಶಿಸಿದೆ.
  • ಗಾಯಗೊಂಡವರನ್ನು ಸುರಕ್ಷಿತವಾಗಿ ಸಾಗಿಸಲು ಖಾಸಗಿ ಆಂಬುಲೆನ್ಸ್ ಒದಗಿಸಬೇಕು.
  • ಮೂಲಭೂತ ಸೌಲಭ್ಯಗಳ ಜೊತೆಗೆ ಪುನರ್ವಸತಿಗಾಗಿ ಆಶ್ರಯವನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

15:04 February 26

  • ಈಶಾನ್ಯ ದೆಹಲಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಮೃತದೇಹ ಪತ್ತೆ: ಹೈಕೋರ್ಟ್ ಕಳವಳ
  • ಇದು ತುಂಬಾ ದುರದೃಷ್ಟಕರ ಸಂಗತಿ ಎಂದು ನ್ಯಾಯಾಲಯ ಹೇಳಿದೆ.
  • ಸಂತ್ರಸ್ತರನ್ನು ಮತ್ತು ಅವರ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ನ್ಯಾಯಾಲಯವು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತ  ಅಧಿಕಾರಿಗಳಿಗೆ ತಿಳಿಸಿದೆ.

15:00 February 26

  • ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರದಿಂದಾಗಿ 17  ಜನರು ಸಾವಿಗೀಡಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಸ್ಥಾಯಿ ವಕೀಲರು ತಿಳಿಸಿದರು.
  • ಈ ದೇಶದಲ್ಲಿ ಮತ್ತೊಂದು 1984 ರ ಘಟನೆ ನಡೆಯಲು (1984ರ ಸಿಖ್ ವಿರೋಧಿ ಗಲಭೆ)  ನಾವು ಬಿಡುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

14:58 February 26

  • ಜನರಲ್ಲಿ ಆತ್ಮವಿಶ್ವಾಸ ತುಂಬಲು ಸಿಎಂ ಮತ್ತು ಡಿಸಿಎಂ ಗಲಭೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
  • ಕಳೆದ 24 ಗಂಟೆಯಲ್ಲಿ ಓರ್ವ ಮೃತರಾಗಿದ್ದು,  22 ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್  ಆಸ್ಪತ್ರೆಯ ಅಧಿಕಾರಿ  ಮಾಹಿತಿ ನೀಡಿದ್ದಾರೆ.

14:55 February 26

  • ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ಸಂಬಂಧ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ ನೀಡಿದ್ದಾರೆ.
  • ಅವರ ಹೇಳಿಕೆ ದುರದೃಷ್ಟಕರ ಮತ್ತು ಖಂಡನೀಯ. ಇಂತಹ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿಯನ್ನು ಕಾಪಾಡಿಕೊಳ್ಳುವುದನ್ನು ಬಿಟ್ಟು ಈ ರೀತಿ ಹೇಳಿಕೆ  ನೀಡುತ್ತಿರುವುದು ಕೊಳಕು ರಾಜಕೀಯ ಎಂದಿದ್ದಾರೆ

14:05 February 26

  • ದೆಹಲಿ ಹಿಂಸಾಚಾರದಲ್ಲಿ ಬಲಿಯಾದವರಿಗೆ ಕಾಂಗ್ರೆಸ್​ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದೆ.

14:04 February 26

  • ಗುಪ್ತಚರ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರ ಮೃತದೇಹ ಈಶಾನ್ಯ ಜಿಲ್ಲೆಯ ಚಂದ್ ಬಾಗ್ ಪ್ರದೇಶದಲ್ಲಿ ಪತ್ತೆಯಾಗಿದೆ

13:48 February 26

  • ಪರಿಸ್ಥಿತಿಯ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಲಾಗಿದೆ. ಶಾಂತಿ ಸ್ಥಾಪಿಸಲು ದೆಹಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟ್​ ಮಾಡಿದ್ದಾರೆ.
  • ಶಾಂತಿ ಕಾಪಾಡಿಕೊಳ್ಳಬೇಕೆಂದು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡುತ್ತೇನೆ. ಕೆಲವು ಸಮಯದಲ್ಲಿ ಯಥಾಸ್ಥಿತಿಗೆ ದೆಹಲಿಯನ್ನು ತರಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

13:39 February 26

  • ಹಿಂಸಾಚಾರದಲ್ಲಿ ಪಾಲ್ಗೊಳ್ಳಬೇಡಿ, ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ದೆಹಲಿ ಜನರಿಗೆ ನಾನು ಮನವಿ ಮಾಡುತ್ತೇನೆ: ಪ್ರಯಾಂಕಾ ಗಾಂಧಿ ವಾದ್ರಾ

13:33 February 26

  • ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರ ವಿಫಲವಾಗಿದೆ. ಎರಡೂ ಸರ್ಕಾರಗಳ ವೈಫಲ್ಯವೇ ಈ ದೊಡ್ಡ ದುರಂತಕ್ಕೆ ಕಾರಣ: ಸೋನಿಯಾ ಗಾಂಧಿ.

13:31 February 26

  • ಮೆರವಣಿಗೆ ನಡೆಸಿ ಇಂದು ರಾಷ್ಟ್ರಪತಿಗೆ ಮನವಿ ಪತ್ರ ನೀಡಲು ಕಾಂಗ್ರೆಸ್​ ನಿರ್ಧಾರ ಮಾಡಿತ್ತು. ಆದರೆ, ರಾಷ್ಟಪತಿಗಳು ಲಭ್ಯವಾಗದ ಹಿನ್ನೆಲೆ ನಾಳೆ ಮೆರವಣಿಗೆ ಮಾಡಿ ರಾಷ್ಟ್ರಪತಿಗಳಿಗೆ ದೆಹಲಿ ಹಿಂಸಾಚಾರದ ಬಗ್ಗೆ ಪತ್ರ ನೀಡುತ್ತೇವೆ ಎಂದು ತಿಳಿಸಿದೆ.

13:23 February 26

  • ಹಿಂಸಾಚಾರದ ಹಿಂದೆ ಪಿತೂರಿ ಇದೆ, ದೆಹಲಿ ಚುನಾವಣೆಯ ಸಂದರ್ಭದಲ್ಲಿ ದೇಶವೂ ಇದನ್ನು ನೋಡಿದೆ. ಅನೇಕ ಬಿಜೆಪಿ ನಾಯಕರು ಭಯ ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುವ ಮೂಲಕ ಪ್ರಚೋದಿಸುವ ಟೀಕೆಗಳನ್ನು ಮಾಡಿದ್ದರು.
  • ದೆಹಲಿಯ ಪ್ರಸ್ತುತ ಪರಿಸ್ಥಿತಿಗೆ ಕೇಂದ್ರ ಮತ್ತು ಕೇಂದ್ರ ಗೃಹ ಸಚಿವರು ಕಾರಣ, ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು.

13:19 February 26

  • ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ  ದೆಹಲಿ ಹಿಂಸಾಚಾರದ ಬಗ್ಗೆ ಮಾಧ್ಯಮಗೋಷ್ಠಿ ನಡೆಸುತ್ತಿದ್ದಾರೆ

13:18 February 26

  • ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೇಂದ್ರ ಅರೆಸೈನಿಕ ಪಡೆಗಳು, ಪೊಲೀಸರು ವ್ಯಾಪಕ ಗಸ್ತು ತಿರುಗುತ್ತಿದ್ದಾರೆ. ಭರಂಪುರಿ ರಸ್ತೆ, ಪಿ.ಎಸ್.ಜಫ್ರಾಬಾದ್‌ನ ಘೋಂಡಾ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದು, ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾಗಿದ್ದಾರೆ.

13:15 February 26

  • ಈಶಾನ್ಯ ಜಿಲ್ಲೆ ಸಾಮಾನ್ಯ ಸ್ಥಿತಿಗೆ ಮರಳಿದೆ. ಹಿರಿಯ ಅಧಿಕಾರಿಗಳು ಅಲ್ಲಿ ಸುತ್ತುವರೆದಿದ್ದಾರೆ. ಹೆಚ್ಚುವರಿ ಪಡೆಗಳನ್ನು ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ತಿಳಿಸಿದ್ದಾರೆ.

13:13 February 26

  • ನ್ಯಾಯಾಲಯವು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ವಿಡಿಯೋ ತುಣುಕೊಂದನ್ನು ನ್ಯಾಯಾಲಯದಲ್ಲಿ ಪ್ರಸಾರ ಮಾಡಿದೆ.

13:06 February 26

  • ಹಿಂಸಾಚಾರದ ವಿಚಾರಣೆ ದೆಹಲಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ತುಂಬಾ ಅಹಿತಕರವಾಗಿದೆ ಎಂದು ನ್ಯಾಯಮೂರ್ತಿ ಮುರಳೀಧರ್  ಬೇಸರ ವ್ಯಕ್ತಪಡಿಸಿದ್ದಾರೆ.
  • ನಾವು ಹಲವಾರು ವಿಡಿಯೋಗಳನ್ನು ನೋಡಿದ್ದೇವೆ. ಕೆಲವು ನಾಯಕರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಇದು ಮಾಧ್ಯಮಗಳಲ್ಲೂ ಪ್ರಸಾರವಾಗಿದೆ ಎಂದಿದ್ದಾರೆ.

13:03 February 26

  • ದೆಹಲಿ ಹಿಂಸಾಚಾರದ ಬಗ್ಗೆ ಇನ್ನೇನು ಕೆಲ ಕ್ಷಣದಲ್ಲಿ ದೆಹಲಿ ಹೈಕೋರ್ಟ್​ ವಿಚಾರಣೆ ನಡೆಸಲಿದೆ.

12:58 February 26

  • ಘರ್ಷಣೆಯಲ್ಲಿ 150 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
  • ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಭದ್ರತೆ ಮೇಲಿನ ಕ್ಯಾಬಿನೆಟ್​ ಕಮಿಟಿ ಸಭೆ ಸೇರಿದೆ.
  • ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ಪೊಲೀಸರು ಗೋಕುಲ್‌ಪುರಿಯ ಭಾಗೀರಥಿ ವಿಹಾರದಲ್ಲಿ ಪ್ಲಾಗ್​ ಮಾರ್ಚ್​​ ನಡೆಸಿದ್ದಾರೆ.

12:54 February 26

  • ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಮತ್ತು ಸುರಕ್ಷಿತ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಿ ಎಂದು ದೆಹಲಿ ಹೈಕೋರ್ಟ್​ ಪೊಲೀಸರಿಗೆ ನಿರ್ದೇಶನ ನೀಡಿದೆ.
  • ಸುರಕ್ಷತೆ ಕೋರಿ ತುರ್ತು ಮನವಿಯ ಮೇರೆಗೆ ಮಧ್ಯರಾತ್ರಿ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರ ನಿವಾಸದಲ್ಲಿ ವಿಚಾರಣೆ ನಡೆಯಿತು. ಗಾಯಾಳುಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ವೈದ್ಯಕೀಯ ಆಸ್ಪತ್ರೆಗೆ ಸಾಗಿಸುವುದು. ಗಾಯಗೊಂಡವರ ಬಗ್ಗೆ ಮಾಹಿತಿ ಮತ್ತು ಅವರಿಗೆ ನೀಡಲಾಗುವ ಚಿಕಿತ್ಸೆ ಬಗ್ಗೆ ವರದಿ ನೀಡುವಂತೆ ಎಸ್.ಮುರಳೀಧರ್ ಮತ್ತು ಅನುಪ್ ಜೆ. ಭಂಭಾನಿ ಅವರ ನ್ಯಾಯಪೀಠ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ

12:44 February 26

  • ದೆಹಲಿ ಹಿಂಸಾಚಾರದ ವಿಷಯದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರು ಇಂದು ರಾಷ್ಟ್ರಪತಿ ಭವನದ ವರೆಗೆ ಮೆರವಣಿಗೆ ನಡೆಸಲಿದ್ದಾರೆ.
  • ​ ಪ್ರದೇಶದಲ್ಲಿ ಒಂದು ತಿಂಗಳವರೆಗೆ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಈ ಪ್ರದೇಶ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದು, ಹಿಂಸಾಚಾರದಲ್ಲಿ ಯಾರೇ ಭಾಗಿಯಾದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.

12:41 February 26

  • ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರು ದೆಹಲಿ ಹಿಂಸಾಚಾರದಲ್ಲಿ ಪೊಲೀಸರು ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದ್ದಾರೆ.

12:33 February 26

  • ಹಿಂಸಾಚಾರಕ್ಕೆ ಒಳಗಾಗಿ ಗಾಯಗೊಂಡವರ ಬಗ್ಗೆ ಮಾಹಿತಿ ಬೇಕಾದರೆ,  ಈ ಕೆಳಗಿನ ಪೊಲೀಸ್​ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಪೊಲೀಸರು ತಿಳಿಸಿದ್ದಾರೆ.

12:32 February 26

  • ಪ್ರತಿಭಟನೆಗಳು ಕೋಮು ಸಂಘರ್ಷಕ್ಕೆ ತಿರುಗಿದ್ದು, 20ಕ್ಕೂ ಹೆಚ್ಚು ಮಂದಿ ಈಗಾಗಲೇ ಬಲಿಯಾಗಿದ್ದಾರೆ.
  • ಘಟನೆ ಸಂಬಂಧ ಹಿಂಸಾಚಾರವನ್ನು ಪ್ರಚೋದಿಸುವ ಯಾವುದೇ ದೃಶ್ಯಗಳನ್ನು ಪ್ರಸಾರ ಮಾಡುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಖಾಸಗಿ ಟಿವಿ ಚಾನೆಲ್‌ಗಳಿಗೆ ಸಲಹೆ ನೀಡಿದೆ.

12:32 February 26

  • ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸೇನೆಯನ್ನು ರವಾನಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

12:26 February 26

ದೆಹಲಿ ಹಿಂಸಾಚಾರದ ಬಗ್ಗೆ ಕ್ಷಣಕ್ಷಣದ ಮಾಹಿತಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಗೃಹ ಸಚಿವ ಅಮಿತ್ ಶಾ ಸೈನ್ಯವನ್ನ ನಿಯೋಜಿಸಬೇಕು ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ಹಿಂಸಾಚಾರ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಅದರ ಪ್ರತಿಕ್ಷಣದ ಮಾಹಿತಿ ಇಲ್ಲಿದೆ. 

Last Updated : Feb 26, 2020, 6:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.