ETV Bharat / bharat

ರಕ್ತಹೀನತೆ ಹೋಗಲಾಡಿಸಲು ಇಲ್ಲಿದೆ ಮಂತ್ರ: ಅನಿಮಿಯಾಗೆ ಕಬ್ಬಿಣದ ಬಾಣಲೆಯೇ ಮದ್ದು..!

ನಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಕಬ್ಬಿಣದ ಬಾಣಲೆಯಲ್ಲಿ ಅಡುಗೆ ಮಾಡುವ ಮೂಲಕ ನಿವಾರಿಸಬಹುದು ಎಂಬುದನ್ನು, ಜಾರ್ಖಂಡ್ ರಾಜ್ಯದ ಕೆಲ ಹಳ್ಳಿಗಳ ಜನರು ಕಂಡುಕೊಂಡಿದ್ದಾರೆ.

anemia
ಅನಿಮಿಯಾಗೆ ಕಬ್ಬಿಣದ ಬಾಣಲೆಯ ಮದ್ದು
author img

By

Published : Oct 3, 2020, 6:03 AM IST

ಜಾರ್ಖಂಡ್: ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಈ ರಕ್ತಹೀನತೆಯನ್ನು ಹೋಗಲಾಡಿಸಲು ಜಾರ್ಖಂಡ್ ರಾಜ್ಯದ ಕೆಲ ಗ್ರಾಮಸ್ಥರು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಅದೇ ಕಬ್ಬಿಣದ ಕಡಾಯಿ ಅಥವಾ ಬಾಣಲೆ. ಅರೇ ಕಬ್ಬಿಣದ ಕಡಾಯಿಗೂ ಹಾಗೂ ರಕ್ತಹೀನತೆ ಏನು ಸಂಬಂಧ ಎಂದು ನಿಮಗೆ ಅನ್ನಿಸ್ತಿರಬಹುದು.

ಕಬ್ಬಿಣದ ಕಡಾಯಿಗೂ ಹಾಗೂ ರಕ್ತಹೀನತೆಗೂ ಸಂಬಂಧವಿದೆ. ಈ ಬಗ್ಗೆ ಅರ್ಥ ಮಾಡಿಕೊಳ್ಳಲು ನಾವು ನಿಮ್ಮನ್ನು ರಾಂಚಿಯಿಂದ 70 ಕಿ.ಮೀ ದೂರದಲ್ಲಿರುವ ಬುಡಕಟ್ಟು ಪ್ರಾಬಲ್ಯದ ಖುಟಿ ಜಿಲ್ಲೆಯ ಟೊರ್ಪಾ ವಿಧಾನಸಭಾ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಕರೆದೊಯ್ಯುತ್ತೇವೆ. ಸುಸಜ್ಜಿತ ರಸ್ತೆಗಳಲ್ಲಿ ನಮ್ಮ ಕಾರು ವೇಗವಾಗಿ ಹೋಗಿ, ಅಲ್ಲಿಗೆ ಮುಟ್ಟಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ, ಸ್ವಲ್ಪ ದೂರದ ನಂತರ ಪ್ರಯಾಣವು ಸುಲಭವಾದದ್ದಲ್ಲ ಎಂದು ನಮಗೆ ಅರ್ಥವಾಯಿತು. ಗರ್ಭಿಣಿಯರು ಆಸ್ಪತ್ರೆಗೆ ಹೋಗುವಾಗ ಈ ರಸ್ತೆಯಲ್ಲಿ ಪ್ರಯಾಣಿಸುವುದು ಎಷ್ಟು ಕಷ್ಟ ಎಂಬುದು ನಮಗೆ ಅಲ್ಲಿ ಕಣ್ಮುಂದೆ ಬಂದಿತ್ತು.

ಅನಿಮಿಯಾಗೆ ಕಬ್ಬಿಣದ ಬಾಣಲೆಯ ಮದ್ದು

ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಅಜ್ಜನೊಬ್ಬನ ಭುಜದ ಮೇಲೆ ಭತ್ತದ ಹೊರೆಯನ್ನು ನೋಡಿದಾಗ, ಅಲ್ಲಿನ ಪ್ರತಿಯೊಂದು ಚಿತ್ರಣ ನಮ್ಮ ಮುಂದೆ ಹಾದು ಹೋಯಿತು. ಅದು ಏನೇ ಇರಲಿ, ನಾವು ಅಂತಿಮವಾಗಿ ಟೊರ್ಪಾದ ಉಕರಿಮರಿ ಪಂಚಾಯತ್‌ನ ಬುದ್ಧು ಗ್ರಾಮವನ್ನು ತಲುಪಿದಾಗ, ಆ ಗ್ರಾಮೀಣ ಮಹಿಳೆಯರ ಮುಖದಲ್ಲಿನ ನಗುವನ್ನು ನೋಡಿದ ಕೂಡಲೇ ನಮ್ಮ ಆಯಾಸವು ಮಾಯವಾಯಿತು.

ನಾವು ಅಲ್ಲಿಗೆ ಹೋದ ತಕ್ಷಣ ಅಲ್ಲಿನ ಮಹಿಳೆಯರು ರಕ್ತಹೀನತೆಯನ್ನು ಹೋಗಲಾಡಿಸಲು ಕಬ್ಬಿಣದ ಬಾಣಲೆಯ ಪಾತ್ರ ಏನು ಎಂಬ ಅಭಿಯಾನ ಶುರು ಮಾಡಿದ್ದರು. ಕಬ್ಬಿಣದ ಬಾಣಲೆಯಲ್ಲಿ ಪಾಲಕ್ ಸೊಪ್ಪನ್ನು ಬೇಯಿಸುತ್ತಾ ಈಟಿವಿ ಭಾರತದ ಜೊತೆ ಹಾಡನ್ನು ಹಾಡಿದರು. ಆಗ ಅವರ ಜೀವನದಲ್ಲಿ ಕಬ್ಬಿಣದ ಪಾತ್ರೆಯ ಏನಿದೆ ಮಹತ್ವ ನಮಗೆ ಅರ್ಥವಾಯಿತು. ನಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಕಬ್ಬಿಣದ ಬಾಣಲೆಯಲ್ಲಿ ಅಡುಗೆ ಮಾಡುವ ಮೂಲಕ ನಿವಾರಿಸಬಹುದು ಎಂಬುದು ಅಲ್ಲಿನ ಮಹಿಳೆಯರ ಮಾತಾಗಿತ್ತು.

ಇನ್ನು ಗ್ರಾಮಸ್ಥರಲ್ಲಿ ಈ ಪರಿಕಲ್ಪನೆಯನ್ನು ತಂದಿದ್ದು, ಟ್ರಾನ್ಸ್​​ಫಾರ್ಮ್​ ರೂರಲ್ ಇಂಡಿಯಾ ಎಂಬ ಎನ್‌ಜಿಒ. ಈ ಸಂಸ್ಥೆಯು ಗ್ರಾಮೀಣ ಮಹಿಳೆಯರಲ್ಲಿ, ಸಾಮಾಜಿಕ ಪ್ರಜ್ಞೆ ಹೊಂದಿರುವ ಒಬ್ಬರನ್ನು ಆಯ್ಕೆ ಮಾಡಿ ಪರಿವರ್ತನ ದೀದಿ ಎಂದು ಹೆಸರಿಟ್ಟಿದೆ. ಆ ಮಹಿಳೆಯರು ವಿವಿಧ ಹಳ್ಳಿಗಳಲ್ಲಿ ಸಂಚರಿಸಿ, ಅಭಿಯಾನ ಮಾಡುತ್ತಾರೆ. ರಕ್ತಹೀನತೆಯಂತಹ ಕಾಯಿಲೆ ಏಕೆ ಬರುತ್ತದೆ ಎಂದು ಗ್ರಾಮೀಣ ಮಹಿಳೆಯರಿಗೆ ವಿವರಿಸುತ್ತಾರೆ. ಈ ಕಾಯಿಲೆಯಿಂದ ಯಾವ ರೀತಿಯ ಹಾನಿ ಉಂಟಾಗುತ್ತದೆ. ಕಬ್ಬಿಣದ ಬಾಣಲೆಯಲ್ಲಿ ತರಕಾರಿಗಳನ್ನು ತಯಾರಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೇಗೆ ದೊಡ್ಡ ಪ್ರಮಾಣದಲ್ಲಿ ನಿವಾರಿಸಬಹುದು ಎಂಬ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ.

ರಕ್ತಹೀನತೆಯಿಂದ ಬಳಲುತ್ತಿರುವ ಅಲ್ಲಿನ ಅನೇಕ ಮಹಿಳೆಯರು ಕಬ್ಬಿಣದ ಬಾಣಲೆ ಅಥವಾ ಕಡಾಯಿಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಈ ಮೊದಲು ಈ ಮಹಿಳೆಯರು ಅಲ್ಯೂಮಿನಿಯಂ ಅಥವಾ ಮಣ್ಣಿನ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುತ್ತಿದ್ದರು. ಕಬ್ಬಿಣದ ಬಾಣಲೆಯಲ್ಲಿ ತರಕಾರಿಗಳನ್ನು ಬೇಯಿಸುವಾಗ, ಟೊಮ್ಯಾಟೊ, ನಿಂಬೆ ಅಥವಾ ಹುಣಸೆಹಣ್ಣು ಹಾಕುವುದರಿಂದ ಕಬ್ಬಿಣದ ಸವೆತ ಉಂಟಾಗುತ್ತದೆ, ಅದು ಒಂದೇ ತರಕಾರಿಯಲ್ಲಿ ಬೆರೆತು ರಕ್ತಕ್ಕೆ ರಕ್ತಹೀನತೆಯಂತಹ ರೋಗವನ್ನು ಹೋರಾಡಲು ಸಹಾಯ ಮಾಡುತ್ತದೆ ಎಂದು ಮಹಿಳೆಯರು ಅರ್ಥಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.