ETV Bharat / bharat

ವಿಶೇಷ ಅಂಕಣ: ನುಸುಳುವಿಕೆಗೆ ಚೀನಾ ಆಯ್ದುಕೊಂಡ ಸಮಯ ಆತಂಕಕಾರಿ! - china latest news updates

ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ತಾನೊಬ್ಬ ಸಮರ್ಥ ನಾಯಕ ಎಂದು ನಿರೂಪಿಸುವ ಯತ್ನದಲ್ಲಿ ಭಾರತದ ಜೊತೆಗೆ ಘರ್ಷಣೆಗಿಳಿಯಲು ಚೀನಾ ಲೈನ್ ಆಫ್ ಕಂಟ್ರೋಲ್ ಬಳಿ 4 ಸಾವಿರ ಯೋಧರನ್ನು ಹಾಗೂ ಭಾರಿ ಪ್ರಮಾಣದ ಶಸ್ತ್ರಾಸ್ತ್ರವನ್ನು ಶೇಖರಿಸಿಡಲಾರಂಭಿಸಿದೆ.

ನುಸುಳುವಿಕೆಗೆ ಚೀನಾ ಆಯ್ದುಕೊಂಡ ಸಮಯ ಆತಂಕಕಾರಿ
the-timing-of-chinese-incursions-is-worrisome-publish-time
author img

By

Published : May 31, 2020, 11:21 AM IST

ವಿಶೇಷ ಅಂಕಣ: ಭಾರತ ಹಾಗೂ ಚೀನಾ ನಡುವೆ ನಿಯಂತ್ರಣ ರೇಖೆ (ಎಲ್‍ಎಸಿ-ಲೈನ್ ಆಫ್ ಕಂಟ್ರೋಲ್) ಬಳಿ ಸೃಷ್ಟಿಯಾಗಿರುವ ಬಿಕ್ಕಟ್ಟು ಈಗ ನಾಲ್ಕನೇ ವಾರವನ್ನು ತಲುಪಿದೆ. ಮಾಧ್ಯಮ ವರದಿಗಳ ಪ್ರಕಾರ, ಚೀನಾ ನಾಲ್ಕು ಸಾವಿರ ಯೋಧರನ್ನು ಹಾಗೂ ಭಾರಿ ಶಸ್ತ್ರಾಸ್ತ್ರವನ್ನು ಅಲ್ಲಿ ಶೇಖರಿಸಿಡಲಾರಂಭಿಸಿದೆ. ಎರಡೂ ದೇಶಗಳ ಸೈನಿಕರ ನಡುವಣ ಹೊಡೆದಾಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಂತಹ ಅತ್ಯಂತ ವ್ಯವಸ್ಥಿತವಾಗಿ ನಡೆದ ನುಸುಳುವಿಕೆ, ಆಕ್ರಮಣ ಬೀಜಿಂಗ್‍ನಲ್ಲಿ ಅತ್ಯಂತ ಹಿರಿಯ ನಾಯಕರ ಸಮ್ಮತಿ ಇಲ್ಲದೆ ನಡೆದಿರುವ ಸಾಧ್ಯತೆ ಇಲ್ಲ. ವುಹಾನ್ ಹಾಗೂ ಮಹಾಬಲಿಪುರಂನಲ್ಲಿ ಎರಡೂ ದೇಶಗಳ ನಾಯಕರ ನಡುವೆ ನಡೆದ ಶೃಂಗಸಭೆಯಲ್ಲಿ ದ್ವಿಪಕ್ಷೀಯವಾಗಿ ಸಮ್ಮತಿಸಲಾದ ವಿಷಯಗಳು ಏನಾದವು? ಈಗ ಈ ಆಕ್ರಮಣ-ನುಸುಳುವಿಕೆ ನಡೆಯುತ್ತಿದೆ? ಇದರ ಹಿಂದೆ ಒಂದಿಷ್ಟು ಸಂಗತಿಗಳಿವೆ.

ಜಾಗತಿಕವಾಗಿ ತಾನು ಈಗ ಅನುಭವಿಸುತ್ತಿರುವ ಹಿನ್ನಡೆ, ದೋಷಾರೋಪವನ್ನು ಚೀನಾ ಹಿಂದೆಂದೂ ಎದುರಿಸಿರಲಿಲ್ಲ. ಅದರ ನಿಲುವು, ಸ್ಥಾನಮಾನ ಸಾರ್ವತ್ರಿಕವಾಗಿ ಈಗ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. 1918-20ರ ಅವಧಿಯಲ್ಲಿ ಮನುಕುಲವನ್ನು ಕಾಡಿದ ಸ್ಪಾನಿಶ್ ಫ್ಲೂ ಬಳಿಕ ವಿಶ್ವವನ್ನು ಕಾಡಿದ ಅತ್ಯಂತ ಮಾರಣಾಂತಿಕ ವೈರಸ್‍ನ ತವರು ಎಂಬ ಕುಖ್ಯಾತಿಗೆ ಚೀನಾ ಈಗ ಪಾತ್ರವಾಗಿದೆ. ವಿದೇಶಿ ಹೂಡಿಕೆದಾರರು ಹಾಗೂ ಉದ್ಯಮಗಳು ದೇಶ ತೊರೆಯುತ್ತಿವೆ. ಜಾಗತಿಕವಾಗಿ ಚೀನಾ ಒಂದು ಪೀಡಕ ರಾಷ್ಟ್ರ, ಇತರ ದೇಶಗಳ ಜೊತೆಗೆ ಅತ್ಯಂತ ಜಿಗುಟಾಗಿ ವ್ಯವಹರಿಸುವ ದೇಶ ಇತ್ಯಾದಿ ಭಾವನೆಗಳು ವಿಶ್ವಾದ್ಯಂತ ಹರಡುತ್ತಿದೆ.

ತನ್ನಲ್ಲಿರುವ ವಿಟೋ ಮತದ ಮೂಲಕ ಚೀನಾ, ವಿಶ್ವ ಭದ್ರತಾ ಮಂಡಳಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ವಿಶ್ವಾದ್ಯಂತ ಸೃಷ್ಟಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆಯಾಗದಂತೆ ತಡೆದಿದೆ. ಆದರೆ ಅದು, ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ (ಮೇ18-19), ಐರೋಪ್ಯ ಒಕ್ಕೂಟದ ನಿರ್ಣಯದ ಕರಡು ಪ್ರತಿ ಮೇಲಿನ ಸಭೆಯಲ್ಲಿ ಒಂದಿಷ್ಟು ಮೆದುವಾಗಲೇ ಬೇಕಾಯಿತು. ಈ ಕರಡು ನಿರ್ಣಯವನ್ನು ವಿಶ್ವದ 120ಕ್ಕೂ ಅಧಿಕ ದೇಶಗಳು ಬೆಂಬಲಿಸಿದವು. ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮುಂದೆ ಯಾವುದೇ ಆಯ್ಕೆಗಳಿರಲಿಲ್ಲ. ಬದಲಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಮಾತನಾಡಲೇ ಬೇಕಾಯಿತು. ಜೊತೆಗೆ ಕೋವಿಡ್ 19 ಮೇಲಣ ಸಂಶೋಧನೆಗೆ, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಬೇಕಾಯಿತು. ಜೊತೆಗೆ ಅವರು ಚೀನಾದ ಹಿಂದಿನ ಕಾರ್ಯತಂತ್ರವನ್ನೇ ಮುಂದುವರಿಸಿದರು. ಸಮಸ್ಯೆಯನ್ನು ಹಣಕಾಸು ನೆರವಿನ ಮೂಲಕ ಮುಚ್ಚಿಹಾಕುವ ತಂತ್ರವನ್ನೇ ಅವರು ಮುಂದುವರಿಸಿದರು. ಅವರು ಆಫ್ರಿಕಾ ದೇಶಗಳಲ್ಲಿ ಆರೋಗ್ಯ ಸೌಕರ್ಯ ಒದಗಿಸಲು 2 ಬಿಲಿಯನ್ ಅಮೇರಿಕನ್ ಡಾಲರ್ ನೆರವಿನ ಘೋಷಣೆ ಮಾಡಿದರು.

ಜಾಗತಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ, ಇಂದು ಚೀನಾ ಅಮೇರಿಕಾ ಜೊತೆಗೆ ಪೈಪೋಟಿಗೆ ಇಳಿದಿದೆ. ಅಮೇರಿಕಾ ತಂತ್ರಜ್ಞಾನದಲ್ಲಿ ಇತರ ದೇಶಗಳಿಂದ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಆರ್ಥಿಕ ಬೆಳವಣಿಗೆಯಲ್ಲಿ ಕೂಡಾ ಅದು ಮುನ್ನಡೆ ಸಾಧಿಸುತ್ತಿದೆ. ಈ ನಡುವೆ, ಚೀನಾದಲ್ಲಿ ಸಾರ್ವಜನಿಕರ ಮನಸ್ಥಿತಿ ವಿಷಮಿಸುತ್ತಿದೆ. ಅಲ್ಲಿನ ನಾಯಕತ್ವ ಒತ್ತಡದಲ್ಲಿದೆ. ಈ ನಡುವೆ, ಅಮೇರಿಕಾದ ಕಾಂಗ್ರೆಸ್, ಕೋವಿಡ್ 19ಕ್ಕೆ ಚೀನಾವನ್ನು ದೂಷಿಸಿ, ಆ ರಾಷ್ಟ್ರದಿಂದ ಕೆಲವು ಟ್ರಿಲಿಯನ್ ಡಾಲರ್ ಪರಿಹಾರವನ್ನು ಅಪೇಕ್ಷಿಸಿ, ಒಂದು ಗೊತ್ತುವಳಿ ಸ್ವೀಕರಿಸುವ ಸಿದ್ಧತೆ ನಡೆಸಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಈ ಸಂಬಂಧ ಅಮೇರಿಕಾವನ್ನು ಟೀಕಿಸಿದ್ದಾರೆ. "ಒಂದು ರಾಜಕೀಯ ವೈರಸ್ ಅಮೇರಿಕಾದಲ್ಲಿ ಹರಡುತ್ತಿದೆ. ಈ ವೈರಸ್ ಚೀನಾವದ ವಿರುದ್ಧ ಮಾನಹಾನಿ ಉಂಟು ಮಾಡಲು ಹಾಗೂ ಆಕ್ರಮಿಸಲು ಸದಾ ಯತ್ನಿಸುತ್ತಿರುತ್ತದೆ," ಎಂದು ಅವರು ಟೀಕಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಉಳಿದ ಯಾವುದಾದರು ದೇಶ, ಹೆಚ್ಚು ಸದ್ದು ಮಾಡದೆ, ಅಂತಾರಾಷ್ಟ್ರೀಯ ಸಮುದಾಯದ ಜೊತೆಗೆ ತನ್ನ ಸಂಬಂಧ ಸರಿಪಡಿಸಲು ಯತ್ನಿಸುತ್ತಿತ್ತು. ಆದರೆ ಚೀನಾ ಹಾಗೆ ಮಾಡುತ್ತಿಲ್ಲ. ಇದರ ಬದಲಿಗೆ, ಅದರು ದಕ್ಷಿಣಾ ಚೀನಾದಲ್ಲಿ ತನ್ನ ಆಕ್ರಮಣ ಶೀಲ ನೀತಿಯನ್ನು ಮುಂದುವರಿಸಿದೆ, ತೈವಾನ್ ವಿರುದ್ಧ ಗುಟುರು ಹಾಕುತ್ತಿದೆ, ಹಾಗೂ ಹಾಂಕಾಂಗ್‍ನ ಸ್ವಾಯತ್ತತೆಯನ್ನು ಮೊಟಕುಗೊಳಿಸಿದೆ. ಹೊಸ ಸುರಕ್ಷತಾ ಕಾನೂನಿನ ಮೂಲಕ, ಅದು ಹಾಂಕಾಂಗ್‍ನಲ್ಲಿ ಜನಾಭಿಪ್ರಾಯಕ್ಕೆ ಪೂರ್ಣವಿರಾಮ ಹಾಕಲು ಯತ್ನಿಸುತ್ತಿದೆ. ಅಮೇರಿಕಾದ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ಹಾಂಕಾಂಗ್‍ನ ವಾಸ್ತವ ಪರಿಸ್ಥಿತಿ, ಅದು ಸ್ವಾಯತ್ತ ಪ್ರದೇಶವಲ್ಲ ಎಂಬುದನ್ನು ಸೂಚಿಸುತ್ತಿದೆ ಎಂದು ತಿಳಿಸಿದ್ದಾರೆ. ಇದು ಅಮೇರಿಕಾ ಚೀನಾ ವಿರುದ್ಧ ನಿರ್ಬಂಧ ಹೇರುವಿಕೆಗೆ ವೇದಿಕೆಯನ್ನು ಸಜ್ಜಾಗಿಸಿದೆ.

ಇನ್ನು ಭಾರತ-ಚೀನಾ ನಡುವಣ ಬಿಕ್ಕಟ್ಟಿಗೆ ಸಂಬಂಧಿಸಿ, ಭಾರತ-ಚೀನಾ ನಡುವಣ ಗಡಿ ಈಗಾಗಲೆ ಘೋಷಿಸಲ್ಪಟ್ಟಿದೆ. ಆದರೂ ಪ್ರತಿವರ್ಷ 400 ರಿಂದ 500 ನುಸುಳುವಿಕೆ ಇಲ್ಲಿ ಸಂಭವಿಸುತ್ತದೆ. ಆದರೆ ಇದು ಕೂಡಲೇ ಪರಿಹರಿಸಲ್ಪಡುತ್ತದೆ. ಆದರೆ ಈ ನುಸುಳುವಿಕೆ ಸಮಸ್ಯೆ ಈಗ ಹೆಚ್ಚಾಗುತ್ತಿದ್ದು ಹಾಗೂ ಅವುಗಳನ್ನು ಪರಿಹರಿಸುವುದು ಹೆಚ್ಚಿನ ಕಠಿಣವಾಗುತ್ತಿದೆ. 2017ರಲಲ್ಲಿ ಡೊಕ್ಲಾಮ್ ನುಸುಳುವಿಕೆ ಸಮಸ್ಯೆ ಪರಿಹರಿಸಲು 72 ದಿನಗಳು ಬೇಕಾಯಿತು. ಈ ಬಾರಿಯ ನುಸುಳುವಿಕೆಗೂ ಹಿಂದಿನ ನುಸುಳುವಿಕೆಗೂ ಇರುವ ವ್ಯತ್ಯಾಸವೆಂದರೆ, ಈ ಬಾರಿಯ ನುಸುಳುವಿಕೆಯ ಸಮಯ, ಗಾತ್ರ, ನಿಯೋಜಿತಗೊಂಡ ಸೇನೆಯ ಗಾತ್ರ, ಹಾಗೂ ಅದರ ಹಿಂದಿನ ಕಾರಣ. ಈ ಬಾರಿ ಬಿಕ್ಕಟ್ಟು ನಾಲ್ಕು ಪ್ರದೇಶಗಳಲ್ಲಿ ವರದಿಯಾಗಿದೆ. ಅವುಗಳೆಂದರೆ ಗಾಲ್ವಾನ್ ಕಣಿವೆ ಪ್ರದೇಶದ ಮೂರು ಪ್ರದೇಶಗಳಲ್ಲಿ ಹಾಗೂ ನಾಲ್ಕನೇ ಪ್ರದೇಶ ಲಡಾಖ್‍ನ ಪಂಗೋಗ್ ಟೊಸೊ (ಕೆರೆ) ಪ್ರದೇಶದಲ್ಲಿ.

ಈ ಬಾರಿ ಭಾರತದ ಜೊತೆಗೆ ಘರ್ಷಣೆಗಿಳಿಯಲು ಚೀನಾಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ತಾನೊಬ್ಬ ಸಮರ್ಥ ನಾಯಕ ಎಂದು ನಿರೂಪಿಸುವ ಯತ್ನದಲ್ಲಿದ್ದಾರೆ. ಅವರ ನಾಯಕತ್ವ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಸುಕಾಗಿದೆ. ಎರಡನೆಯದಾಗಿ ಬೀಜಿಂಗ್ ಚೀನಾ ಕೇಂದ್ರೀಕೃತ ವಿಶ್ವ ವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಭಾರತ ಅಡ್ಡಿ ಎಂಬ ಭಾವನೆ ಅಲ್ಲಿನ ನಾಯಕರಲ್ಲಿದೆ. ಮೂರನೆಯದಾಗಿ ಭಾರತ ಕೋವಿಡ್ 19 ಬಿಕ್ಕಟ್ಟಿನಿಂದ ಭಾರತ ಬಸವಳಿದಿದೆ ಎಂದು ಚೀನಾ ಭಾವಿಸಿದೆ. ನಾಲ್ಕನೆಯದಾಗಿ, ಜಾಗತಿಕ ಟೀಕೆಗಳಿಂದ ತಾನು ವಿಚಲಿತಗೊಂಡಿಲ್ಲ ಎಂದು ಚೀನಾ ಎಲ್ಲರಿಗೂ ತೋರಿಸಬೇಕಿದೆ. ಐದನೆಯದಾಗಿ, ಅದು ತನ್ನ ವಿರುದ್ಧ ನಿಲ್ಲುವ ಎಲ್ಲಾ ದೇಶಗಳು ಅದಕ್ಕೆ ತಕ್ಕ ಬೆಲೆ ತೆರಬೇಕು ಎಂದು ತೋರಿಸಬೇಕಿದೆ. ಆರನೆಯದಾಗಿ, ಚೀನಾಕ್ಕೆ ಭಾರತವನ್ನು ಹಾಗೂ ವಿಶ್ವ ಸಮುದಾಯವನ್ನು ಪರೀಕ್ಷಿಸಬೇಕಿದೆ.

ಚೀನಾದ ಅಧ್ಯಕ್ಷ ಕ್ಸಿ ಅತ್ಯಂತ ಪ್ರತಿಫಲ ನೀಡಬಹುದಾದ ಆದರೆ ಅಷ್ಟೇ ಅಪಾಯಕಾರಿಯಾಗಬಹುದಾದ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಚೀನಾದ ಸ್ಥಳೀಯ ಭಾಷಾ ಮಾಧ್ಯಮಗಳು, ಭಾರತವನ್ನು ಆಕ್ರಮಣಕಾರಿ ಎಂದು ಬಣ್ಣಿಸುತ್ತಿವೆ ಹಾಗೂ ಅಲ್ಲಿನ ಸರಕಾರ ನೀಡುತ್ತಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತಿವೆ. ಮೇ 26ರಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಯ ವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಕ್ಸಿ ಅವರು ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ, ಯುದ್ಧಕ್ಕೆ ಅಗತ್ಯವಾದ ತಯಾರಿಯನ್ನು ಹೆಚ್ಚಿಸುವಂತೆ ಅಲ್ಲಿನ ಸೈನ್ಯಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ಅವರು ತಮ್ಮ ಆಕ್ರಮಣಶೀಲತೆಯನ್ನು ಪ್ರತಿಪಾದಿಸಿದ್ದಾರೆ. ಅದೃಷ್ಟವಶಾತ್, ದ್ವಿಪಕ್ಷೀಯ ಸೈನ್ಯದ ಮಾತುಕತೆ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ನಡುವಣ ಮಾತುಕತೆ ಹಾಗೂ ರಾಜಕೀಯ ನಾಯಕರ ನಡುವಣ ಮಾತುಕತೆಯ ಆಯ್ಕೆಗಳು ಎರಡೂ ದೇಶಗಳಿಗೆ ಮುಕ್ತವಾಗಿವೆ. ಈ ಎಲ್ಲಾ ಆಯ್ಕೆಗಳನ್ನು ಸಮಸ್ಯೆ ಬಗೆಹರಿಸಲು ಉಭಯ ದೇಶಗಳೂ ಈಗ ಬಳಸಲಾರಂಭಿಸಿವೆ. ಶಾಂತಿಯುತವಾಗಿ ಈ ಬಿಕ್ಕಟ್ಟು ಶಮನವಾಗುವ ಭರವಸೆ ಈಗ ವ್ಯಕ್ತವಾಗಿದೆ. ಆದರೆ ಭಾರತ ದೊಡ್ಡ ಸವಾಲಿನ ಬಿಕ್ಕಟ್ಟನ್ನು ಎದುರು ನೋಡುತ್ತಿದೆ ಎಂಬುದು ಗುಟ್ಟಿನ ಸಂಗತಿಯಲ್ಲ.

-ವಿಷ್ಣುಪ್ರಕಾಶ್, ನಿವೃತ್ತ ರಾಯಭಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.