ETV Bharat / bharat

ಇಂದಿನ ಚಿಂಗಮಾಸ ಪೂಜೆ ಬಳಿಕ ಶಬರಿಮಲೆ ದೇಗುಲ ಬಂದ್​ - ಕೇರಳ

ಐದು ದಿನಗಳ ವಿಶೇಷ ಮಾಸಿಕ ಪೂಜೆ ಇಂದು ಮುಕ್ತಾಯವಾಗಲಿದ್ದು, ಸಂಜೆ 7.30ರ ನಂತರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ.

Sabarimala temple
ಶಬರಿಮಲೆ ದೇಗುಲ
author img

By

Published : Aug 21, 2020, 1:32 PM IST

ಶಬರಿಮಲೆ (ಕೇರಳ): ವಿಶೇಷ ಮಾಸಿಕ ಪೂಜೆಯಾದ ಚಿಂಗಮಾಸ ಪೂಜೆಯ ಬಳಿಕ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಇಂದು ಸಂಜೆ ಮುಚ್ಚಲಾಗುತ್ತದೆ.

ಐದು ದಿನಗಳ ವಿಶೇಷ ಪೂಜೆಯ ನಿಮಿತ್ತ ಆಗಸ್​​ 16 ರಿಂದ ದೇಗುಲದ ಬಾಗಿಲು ತೆರೆಯಲಾಗಿತ್ತು. ಆದರೆ, ಕೋವಿಡ್​ ಹಿನ್ನೆಲೆ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಅರ್ಚಕರು ಮಾತ್ರ ಪೂಜೆ ನೆರವೇರಿಸುತ್ತಿದ್ದಾರೆ. ಚಿಂಗಮಾಸ ಪೂಜೆ ಇಂದು ಮುಕ್ತಾಯವಾಗಲಿದ್ದು, ಸಂಜೆ 7.30ರ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ.

ಓಣಮ್​ ಪ್ರಯುಕ್ತ ಆಗಸ್ಟ್ 29 ರಂದು ಸಂಜೆ 5 ಗಂಟೆಗೆ ಮತ್ತೆ ದೇವಾಲಯದ ಬಾಗಿಲು ತೆರೆಯಲಿದೆ. ಹಾಗೆಯೇ ಆಗಸ್ಟ್​ 30 ರಿಂದ ಸೆಪ್ಟೆಂಬರ್ 2 ರವರೆಗೆ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಗಳು ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.