ETV Bharat / bharat

ಕೊರೊನಾ ಸಾವು - ಗುಣಮುಖದ ನಡುವಣ ಅನುಪಾತ ಶೇ 20:80.... ಆರೋಗ್ಯ ಸಚಿವಾಲಯದ ಮಾಹಿತಿ - ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌

ಲಾಕ್‌ಡೌನ್‌ ಜಾರಿಗೂ ಮುನ್ನ ಮೂರು ದಿನಗಳಲ್ಲಿ ಕೋವಿಡ್‌19 ಪ್ರಕರಣಗಳು ದ್ವಿಗುಣವಾಗುತ್ತಿದ್ದವು. ಆದ್ರೆ ಅಂಕಿ ಅಂಶಗಳ ಪ್ರಕಾರ ಇದೀಗ 6.2 ದಿನಗಳಿಗೆ ಬಂದು ನಿಂತಿದೆ. ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರು ಮತ್ತು ಮೃತರ ಅನುಪಾತ 80:20 ರಷ್ಟಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Lav Aggarawal
ಲಾವ್‌ ಅಗರ್‌ವಾಲ್‌
author img

By

Published : Apr 17, 2020, 5:44 PM IST

Updated : Apr 17, 2020, 6:07 PM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರು ಮತ್ತು ಮೃತರ ಅನುಪಾತ 80:20 ರಷ್ಟಿದಿದೆ. ಹಲವು ದೇಶಗಳಿಗೆ ಹೋಲಿಸಿದರೆ ಗುಣಮುಖರಾದವರ ಸಂಖ್ಯೆ ನಮ್ಮಲ್ಲೇ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ಗೆ ವ್ಯಾಕ್ಸಿನ್‌ ಕಂಡು ಹಿಡಿಯಲು ಎಲ್ಲ ರೀತಿಯ ಕ್ರಮಗಳ ಮೂಲಕ ಆದ್ಯತೆ ನೀಡಲಾಗುತ್ತಿದೆ. ಅಮೆರಿಕ ಮೂಲದ ಬೂಸ್ಟಿಂಗ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ಕನ್ವಲೆಸೆಂಟ್‌ ಪ್ಲಾಸ್ಮಾಥೆರೆಪಿ, ಮೊನೊಕ್ಲೋನಲ್ ಆ್ಯಂಟಿಬಾಡೀಸ್‌ ಪ್ರಯೋಗಿಸಲಾಗುತ್ತಿದೆ.

ಲಾಕ್‌ಡೌನ್‌ ಜಾರಿಗೂ ಮುನ್ನ ಮೂರು ದಿನಗಳಲ್ಲಿ ಕೋವಿಡ್‌19 ಪ್ರಕರಣಗಳು ದ್ವಿಗುಣವಾಗುತ್ತಿದ್ದವು. ಆದ್ರೆ ಅಂಕಿ ಅಂಶಗಳ ಪ್ರಕಾರ ಇದೀಗ 6.2 ದಿನಗಳಿಗೆ ಬಂದು ನಿಂತಿದೆ. ಸೋಂಕಿತರ ಪೈಕಿ ಶೇ.13.6 ಮಂದಿ ಗುಣಮುಖರಾಗಿದ್ದಾರೆ. 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳು ಸರಾಸರಿ ದ್ವಿಗುಣ ದರಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಈ ಪಟ್ಟಿಯಲ್ಲಿ ಕೇರಳ, ಉತ್ತರಾಖಂಡ್‌, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಲಡಾಖ್‌, ಪುದುಚೇರಿ, ದೆಹಲಿ, ಬಿಹಾರ, ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್‌, ಅಸ್ಸೋಂ, ತ್ರಿಪುರಾ ಸೇರಿದಂತೆ ಇತರ ರಾಜ್ಯಗಳಿವೆ ಎಂದು ಲಾವ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Last Updated : Apr 17, 2020, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.