ಪುಣೆ : ಹೋದಲ್ಲಿ, ಬಂದಲ್ಲಿ, ಕುಂತಲ್ಲಿ-ನಿಂತಲ್ಲಿ, ಹಾಡೋವಾಗಲೂ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನಿಂದ ಹಿನ್ನೆಲೆ ಗಾಯಕ ಬಪ್ಪಿ ಲಹರಿ ಮಿಂಚ್ತಾಯಿರ್ತಾರೆ. ಊಲಾಲಾ ಉಲಾಲಾ ಅಂತಾ ಇವರ ಹಾಡಿದ ಇವರ ಧ್ವನಿ ಕೇಳದವರೇ ಇಲ್ವೇನೋ.. ಕೈಗೆ, ಬೆರಳಿಗೆ ಹಾಗೇ ಕೊರಳಿಗೆ ದಪ್ಪ ದಪ್ಪ ಬಂಗಾರದ ಆಭರಣ ಧರಿಸೋದರಲ್ಲಿ ಬಪ್ಪಿ ಫೇಮಸ್. ಆದರೆ, ಇವರನ್ನೇ ಮೀರಿಸಲು ಈಗ ಹೊಸ ಬಂಗಾರದ ಮನುಷ್ಯ ಹುಟ್ಕೊಂಡಿದ್ದಾನೆ.
ಬಂಗಾರ ಇಷ್ಟ, ಬಡವರ ಸೇವೆ ಮಾಡೋದು ಕೂಡ ಅಷ್ಟೇ ಸ್ಪಷ್ಟ!
ನಿನ್ನೆ ಮೊನ್ನೆವರೆಗೂ ಕೆಜಿಗಟ್ಟಲೇ ಮೈಮೇಲೆ ಬಂಗಾರ ಹಾಕುವ ಬಪ್ಪಿ ದಾ ಮೀರಿಸಲು ಯಾರಿಗೂ ಸಾಧ್ಯವಿರಲಿಲ್ಲ. ಆದರೆ, ಬಪ್ಪಿಗೆ ಮಹಾರಾಷ್ಟ್ರದ ಪುಣೆಯಲ್ಲೊಬ್ಬ ಗೋಲ್ಡ್‌ಮ್ಯಾನ್ ಪೈಪೋಟಿ ಒಡ್ಡುತ್ತಿದ್ದಾನೆ. ಪ್ರಶಾಂತ ಲಕ್ಷ್ಮಣ ಸಪ್ಕಾಲ್ ದೇಶದ ಮತ್ತೊಬ್ಬ ಬಂಗಾರದ ಮನುಷ್ಯ. ಮಧ್ಯವರ್ಗದ ಸಪ್ಕಾಲ್‌ಗೆ ಬಂಗಾರದ ಅಂದ್ರೇ ಬಾಲ್ಯದಿಂದಲೂ ಎಲ್ಲಿಲ್ಲದ ಮೋಹ. ಬಾಲ್ಯದಲ್ಲಿ ಕನಸು ಕಂಡು ಈಗ ಅದನ್ನ ನನಸಾಗಿಸಿಕೊಂಡಿದ್ದಾನೆ. ಸರಳವಾಗಿ ಬಡವರೊಂದಿಗೆ ಬೆರೆಯುವ ಮನುಷ್ಯ. ಎನ್‌ಜಿಒ ಕಟ್ಟಿಕೊಂಡು ಸಾಮಾಜದ ದೀನದಲಿತರ ಒಳಿತಿಗಾಗಿ ಕೆಲಸವನ್ನೂ ಮಾಡ್ತಿದ್ದಾನೆ. ವೃತ್ತಿಯಿಂದ ಕಟ್ಟಣ ನಿರ್ಮಾಣ ಕಂಪನಿ ಜತೆ ಹಣಕಾಸಿನ ವ್ಯವಹಾರ ನಡೆಸ್ತಿದ್ದಾನೆ. ಪದವಿವರೆಗೂ ಓದಿದ್ದು, ಈತ ಎಲ್ಲೇ ಹೋದರೂ ಬಂದರೂ ಹಿಂದೆಮುಂದೆ ಬಾಡಿಗಾರ್ಡ್ಸ್ ಇದ್ದೇ ಇರ್ತಾರೆ.
ಬಾಲ್ಯದಿಂದಲೇ ಪ್ರಶಾಂತ್ ಸಪ್ಕಾಲ್‌ಗೆ ಬಂಗಾರ ಅಂದ್ರೇ ಬಲು ಇಷ್ಟ!
'ಬಂಗಾರ ನನಗೆ ಅಚ್ಚುಮೆಚ್ಚು. ಬಾಲ್ಯದಿಂದ ಈವರೆಗೂ ಅದು ಮುಂದುವರೆದಿದೆ. ಸದಾ ಬಂಗಾರ ಹಾಕಿಕೊಂಡು ಆಕರ್ಷಕವಾಗಿರುವುದು ನನ್ನ ಹವ್ಯಾಸ' ಅಂತಾರೆ ಸಪ್ಕಾಲ್. ನಿತ್ಯ ಏನಿಲ್ಲವೆಂದ್ರೂ 5 ಕೆಜಿ ಆಭರಣ ಇವನ ಮೈಮೇಲಿರ್ತವೆ. ಗೋಲ್ಡನ್ ಸ್ಪೈಕ್ಸ್ ಸ್ಪೋರ್ಟ್ಸ್ ಶೂಗಳು, ಕೊರಳಿಗೆ ದಪ್ಪ ಬಂಗಾರದ ಚೈನು, ಕೈಯೊಳಗಿನ 10 ಬೆರಳಿಗೂ ರಿಂಗ್. ಸಾಲಿಡ್ ಗೋಲ್ಡ್ ವಾಚ್ ಜತೆಗೆ ಐಫೋನ್‌ಗೂ ಗೋಲ್ಡ್ ಕೇಸ್ ಇದೆ. ಇದು ಹುಚ್ಚ ಖಯಾಲಿ! ಅಂತಾ ನೀವೇನೋ ಅನ್ಕೋಬಹುದು. ಬಪ್ಪಿ ದಾಗೆ ಬಂಗಾರ ಹಾಕಿದ್ರೇ ಲಕ್ಕಿ ಅಂತೆ.
ಎಲ್ಲರೂ ನೋಡ್ತಾರೆ, ತಾನೊಬ್ಬ ಆಕರ್ಷಣೀಯ ವ್ಯಕ್ತಿ ಎಂಬ ಹೆಮ್ಮೆ!
ಸಪ್ಕಾಲ್ ಬಂಗಾರ ಹಾಕಿಕೊಳ್ಳಲು ಒಂದು ಕಾರಣವೂ ಇದೆ. 2018ರಲ್ಲಿ ಗೋಲ್ಡ್ ಚೈನ್ ಹಾಕಿ ಓಡಾಡಲು ಶುರು ಮಾಡಿದ್ನಂತೆ. ಕಾರ್ಯಕ್ರಮ, ಸಭೆ-ಸಮಾರಂಭ, ಆಮಂತ್ರಣ ಪಾರ್ಟಿ, ಮದುವೆ ಹೀಗೆ ಎಲ್ಲೇ ಹೋದರೂ ಆಕರ್ಷಿತ ವ್ಯಕ್ತಿಯಾಗಿ ಕಂಗೊಳಿಸುತ್ತಿದ್ದ. ಜನ ಕೂಡ ಬಂದು ಸೆಲ್ಫೀ ಕೂಡ ತೆಗೆಸಿಕೊಳ್ತಿದ್ರಂತೆ. ಎಲ್ಲರ ದೃಷ್ಟಿಯೂ ತನ್ನ ಮೇಲೆಯೇ ಬೀಳ್ತಾಯಿತ್ತಂತೆ. ಅಷ್ಟೇ ಅಲ್ಲ, ಬಂಗಾರದಿಂದಾಗಿ ರಾತ್ರೋರಾತ್ರಿ ಇಂಟರ್ನೆಂಟ್‌ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸಪ್ಕಾಲ್.
ಬಪ್ಪಿ ದಾ ಮೈಮೇಲೆ 17.67 ಲಕ್ಷ ಮೌಲ್ಯದ 754 ಗ್ರಾಂ ಆಭರಣಗಳು!
2014ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ 17.67 ಲಕ್ಷ ಮೌಲ್ಯದ 754 ಗ್ರಾಂ ಚಿನ್ನಾಭರಣ ತನ್ನ ಬಳಿ ಇವೆ. 1975ರಿಂದಲೂ ಆಭರಣಗಳನ್ನ ಸಂಗ್ರಹಿಸಿರುವೆ. ಇವು ಹೊಸ ಆಭರಣಗಳಲ್ಲ. ಹರೇ ಕೃಷ್ಣ-ಹರೇ ರಾಮ, ಗಣಪತಿ, ಸತ್ಯನಾರಾಯಣ ಹಾಗೂ ಹನುಮಂತ ದೇವರ ಪೆಂಡಾಟ್ಸ್. ಹರೇ ರಾಮ-ಹರೇ ಕೃಷ್ಣ ಚೈನ್ ತನಗೆ ತನ್ನ ತಾಯಿ ಗಿಫ್ಟ್ ಕೊಟ್ಟಿದ್ದು ಅಂತಾ ಖ್ಯಾತ ಹಿನ್ನೆಲೆ ಗಾಯಕ ಬಪ್ಪಿ ಲಹರಿ ಘೋಷಿಸಿಕೊಂಡಿದ್ದರು. ಹಾಲಿವುಡ್ ಫೇಮಸ್ ಸಿಂಗರ್ ಎಲ್ವಿಸ್ ಪ್ರೆಸ್‌ಲೇ ಈ ರೀತಿ ಬಂಗಾರ ಹಾಕಿಕೊಳ್ತಾರೆ. ಅವರ ದೊಡ್ಡ ಫಾಲೋವರ್ ನಾನು. ದೇವರ ಆಶೀರ್ವಾದದಿಂದ ನಾ ಸಕ್ಸಸ್ ಆದ್ಮೇಲೆ ಇಮೇಜ್ ಬದಲಿಸಿಕೊಳ್ಳುವೆ. ಎಷ್ಟೋ ಮಂದಿ ಇದನ್ನ ಶೋ ಆಫ್ ಅಂತಾರೆ. ಆದರೆ, ಬಂಗಾರ ನನ್ನ ಪಾಲಿಗೆ ಅದೃಷ್ಟ ಅಂತಾ 2016ರಲ್ಲಿ ಸಂದರ್ಶನವೊಂದರಲ್ಲಿ ಊಲಾಲಾ ಉಲಾಲಾ ಹಾಡಿನ ಖ್ಯಾತಿಯ ಬಪ್ಪಿ ಲಹರಿ ಹೇಳಿಕೊಂಡಿದ್ದರು. ಏನೇ ಇರಲಿ, ಬಂಗಾರ ತಕ್ಕಷ್ಟು ಇದ್ರೇ ತಪ್ಪೇನಲ್ಲ. ಹಾಗಂತಾ, ಜ್ಯುವೆಲರಿನೇ ಮೈಮೇಲೆ ಹಾಕಿಕೊಂಡು ಓಡಾಡಿದ್ರೇ ನೋಡೋರ ಕಣ್ಣು ಕುಕ್ಕದೇ ಇರಲ್ಲ.