ETV Bharat / bharat

ಐಟಿ, ಜಿಎಸ್​ಟಿ ರಿಟರ್ನ್ಸ್​​ ಸಲ್ಲಿಕೆ ಅವಧಿ ವಿಸ್ತರಣೆ

author img

By

Published : Mar 24, 2020, 3:21 PM IST

Updated : Mar 24, 2020, 3:27 PM IST

ಕೊರೊನಾ ವೈರಸ್​ ಬಿಕ್ಕಟ್ಟಿನಿಂದ ಹೈರಾಣಾಗಿರುವ ನಾಗರಿಕರ ನೆರವಿಗೆ ನಿಂತಿರುವ ಕೇಂದ್ರ ಹಣಕಾಸು ಇಲಾಖೆ ಟಿಡಿಎಸ್​ ಮತ್ತು ಜಿಎಸ್​ಟಿ ರಿಟರ್ನ್ಸ್​​ ಫೈಲ್ ಮಾಡುವ ಕೊನೆಯ ದಿನಾಂಕಗಳನ್ನು ವಿಸ್ತರಣೆ ಮಾಡಿದೆ.

ನಿರ್ಮಲಾ ಸೀತಾರಾಮನ್
Nirmala Seetaraman

ಹೊಸದಿಲ್ಲಿ: ಹಣಕಾಸು ವರ್ಷ 2018-19 ರ ಸಾಲಿನ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆಯ ಅವಧಿಯನ್ನು ಜೂನ್ 30, 2020 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಮುಂಚೆ ಆದಾಯ ತೆರಿಗೆ ರಿಟರ್ನ್ಸ್​​​​ ಸಲ್ಲಿಕೆಯ ಕೊನೆಯ ದಿನಾಂಕ ಮಾ.31 ಆಗಿತ್ತು. ಹಾಗೆಯೇ ಮಾರ್ಚ್, ಏಪ್ರಿಲ್ ಮತ್ತು ಮೇ 2020 ರ ತಿಂಗಳುಗಳ ಜಿಎಸ್​ಟಿ ರಿಟರ್ನ್ಸ್​ ಫೈಲ್ ಮಾಡುವ ದಿನಾಂಕವನ್ನು ಜೂನ್ 30, 2020 ರವರೆಗೆ ವಿಸ್ತರಿಸಲಾಗಿದೆ. ತಡವಾಗಿ ಪಾವತಿಸಲಾಗುವ ಮೊತ್ತಕ್ಕೆ ವಿಧಿಸಲಾಗುತ್ತಿದ್ದ ಬಡ್ಡಿ ದರವನ್ನು ಶೇ.12 ರಿಂದ ಶೇ.9 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.

ದೇಶಾದ್ಯಂತ ಕೊರೊನಾ ವೈರಸ್​ನಿಂದಾಗಿ ಲಾಕ್​ಡೌನ್ ವಿಧಿಸಲಾಗಿರುವುದು, ಯಾವುದೇ ಕಚೇರಿಗಳು ಕಾರ್ಯನಿರ್ವಹಿಸದಿರುವುದು ಮತ್ತು ಜನತೆ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿರುವುದರಿಂದ ಟಿಡಿಎಸ್, ಜಿಎಸ್​ಟಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

Last Updated : Mar 24, 2020, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.