ನೆಲ್ಲೂರು(ಆಂಧ್ರಪ್ರದೇಶ): ಸೃಜನಶೀಲತೆಯ ಜೊತೆಗೆ ಜ್ಞಾನ ಜಾಗೃತಗೊಳಿಸುವುದು ಶಿಕ್ಷಕರಿಗಿರುವ ಕಲೆ ಅನ್ನೋ ಮಾತು ಜನಜನಿತ. ಈ ಮಾತಿಗೆ ಉತ್ತಮ ಉದಾಹರಣೆ ಗ್ರಾಮೀಣ ಮಕ್ಕಳ ಸಂಶೋಧನಾ ಸಂಸ್ಥೆ.
ಆಂಧ್ರದ ನೆಲ್ಲೂರು ಜಿಲ್ಲೆಯ ಗಾಂಧಿ ಜನ ಸಂಘಂ ಗ್ರಾಮದಲ್ಲಿರುವ ಈ ಸಂಸ್ಥೆಯ ಘೋಷ ವಾಕ್ಯ ಕನಸೆಂದರೆ ನಿದ್ರಿಸುವಾಗ ಬರೋದಲ್ಲ. ಆ ಕನಸುಗಳು ಸಾಧಿಸುವವರೆಗೆ ನಿಮ್ಮನ್ನ ನಿದ್ರೆ ಮಾಡೋಕೆ ಬಿಡಲ್ಲ ಅನ್ನೋದು ಎಷ್ಟು ರೋಚಕ. ಇಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧಿಸಬೇಕಾದ್ರೆ ಸ್ವತಃ ತಾವೇ ಮಕ್ಕಳಾಗಿಬಿಡ್ತಾರೆ.
ಅವ್ರೂ ಕೂಡ ಮಕ್ಕಳಂತೆ ಆಲೋಚಿಸ್ತಾರೆ. ಕಷ್ಟದ ವಿಷಯಗಳಾದ ಜೀವಶಾಸ್ತ್ರ ಹಾಗೂ ಬಾಹ್ಯಾಕಾಶ ವಿಜ್ಞಾನವನ್ನು ತುಂಬಾ ಸರಳವಾಗಿ ಹೇಳಿಕೊಡ್ತಾರೆ. ಇಲ್ಲಿ ಕಲಿತಿರೋ ಮಕ್ಕಳು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಶಾಲೆಗಳನ್ನು ಅರ್ಧಕ್ಕೆ ಬಿಟ್ಟು ಹೋಗೋ ಸಾಧ್ಯತೆಗಳೂ ಕೂಡ ಹೆಚ್ಚಿತ್ತು.
ಈ ವೇಳೆ ಶಿಕ್ಷಕ ಸುಬ್ರಮಣ್ಯಂ ಆಸಕ್ತಿವಹಿಸಿ ಸುಮಾರು 10 ವರ್ಷಗಳಿಂದ ವಿಜ್ಞಾನವನ್ನು ಸರಳವಾಗಿ ಬೋಧಿಸ್ತಿದಾರೆ. ಇದರಿಂದಾಗಿ ಸುಮಾರು 10 ಶಾಲೆಗಳ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರ್ತಾರೆ. ಶಿಕ್ಷಕ ಸುಬ್ರಮಣ್ಯಂ ತಾವೇ ಸ್ವತಃ ಒಂದು ಮೈಕ್ರೋಸ್ಕೋಪ್ ಹಾಗೂ ಬಾಹ್ಯಾಕಾಶ ಕಾಯಗಳ ಮಾದರಿ ತಯಾರಿಸಿದ್ದಾರೆ.
ಈ ಮಾದರಿಗಳ ಮೂಲಕವೇ ಅವರು ಮಕ್ಕಳಿಗೆ ಸರಳವಾಗಿ ವಿವರಿಸ್ತಾರೆ. ಇದೆಲ್ಲಾ ನೋಡ್ತಿದ್ರೆ ಸರ್ಕಾರಿ ಶಾಲಾ ಶಿಕ್ಷಕರಾದ ಸುಬ್ರಮಣ್ಯಂ ಅವರ ಅಗಾಧ ಶ್ರಮದ ಅರಿವಾಗುತ್ತದೆ. ಬಡ ಕುಟುಂಬದಿಂದ ಬಂದ ಅವರ ಪ್ರತಿಭೆಗೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನ ಜನ ಕೊಂಡಾಡುತ್ತಿದ್ದಾರೆ.