ETV Bharat / bharat

ಅನುಮತಿ ಇಲ್ಲದೇ 'ಗೂಗಲ್ ಪೆೇ' ಹೇಗೆ ಕಾರ್ಯನಿರ್ವಹಿಸುತ್ತಿದೆ? ಆರ್‌ಬಿಐಗೆ ದೆಹಲಿ ಹೈಕೋರ್ಟ್​​ ಪ್ರಶ್ನೆ

ಜನಪ್ರಿಯ ಆನ್‌ಲೈನ್ ಪೇಮೆಂಟ್ ಆ್ಯಪ್ ಗೂಗಲ್ ಪೇ ವಿರುದ್ಧ ಕೇಳಿಬಂದ ದೂರಿನ ಸಂಬಂಧ ದೆಹಲಿ ಹೈಕೋರ್ಟ್​ ಆರ್‌ಬಿಐ ಹಾಗೂ ಗೂಗಲ್ ಇಂಡಿಯಾಗೆ ನೊಟೀಸ್ ಜಾರಿ ಮಾಡಿದೆ.

ಗೂಗಲ್ ಪೇ
author img

By

Published : Apr 10, 2019, 4:30 PM IST

Updated : Apr 10, 2019, 5:15 PM IST

ನವದೆಹಲಿ: ಹಣಕಾಸು ವ್ಯವಹಾರ ಸಂಬಂಧ ಸೂಕ್ತ ಅನುಮತಿ ಪಡೆಯದೇ ಆನ್‌ಲೈನ್ ಪೇಮೆಂಟ್ ಆ್ಯಪ್ 'ಗೂಗಲ್ ಪೇ' ದೇಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ದೆಹಲಿ ಹೈಕೋರ್ಟ್​ ಆರ್‌ಬಿಐ ಅನ್ನು ಪ್ರಶ್ನಿಸಿದೆ.

ಈ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾ.ಎ.ಜೆ ಭಾಂಬನಿ ನೇತೃತ್ವದ ಪೀಠ ಕೇಂದ್ರ ಬ್ಯಾಂಕ್‌ಗೆ ಈ ಪ್ರಶ್ನೆ ಕೇಳಿದೆ. ಅಭಿಜಿತ್ ಮಿಶ್ರಾ ಎಂಬವವರು ಸಲ್ಲಿಸಿದ ಅರ್ಜಿಯಲ್ಲಿ, ಈ ರೀತಿ ಹಣಕಾಸು ವ್ಯವಹಾರ ನಡೆಸುವುದಕ್ಕೆ ಆರ್‌ಬಿಐನಿಂದ 'ಗೂಗಲ್ ಪೇ' ಯಾವುದೇ ರೀತಿಯ ಅಧಿಕಾರ, ಅನುಮತಿ ಪಡೆದಿಲ್ಲ. ಈ ಬಗ್ಗೆ ದಾಖಲೆ ಒದಗಿಸಿದ ಅರ್ಜಿದಾರರು, ಮಾರ್ಚ್‌ 20, 2019 ರಂದು ಕೇಂದ್ರ ಬ್ಯಾಂಕ್ ಅಧಿಕೃತವಾಗಿ ಬಿಡುಗಡೆ ಮಾಡಿದ 'ಹಣಕಾಸು ವ್ಯವಹಾರಗಳ ನಿರ್ವಾಹಕರ ಪಟ್ಟಿ' ಒದಗಿಸಿದ್ದಾರೆ. ಈ ಪಟ್ಟಿಯಲ್ಲಿ ಗೂಗಲ್ ಪೇ ಹೆಸರಿಲ್ಲ. ಹಾಗಿದ್ದರೂ ಈ ಸಂಸ್ಥೆ ದೇಶದಲ್ಲಿ ಕೋಟ್ಯಂತರ ರೂಪಾಯಿ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದಾಗಿ ಅವರು ಅರ್ಜಿಯಲ್ಲಿ ದೂರಿದ್ದಾರೆ.

ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳ ಪೀಠ, ಸೂಕ್ತ ಕಾರಣ ಕೇಳಿ ಆರ್​​ಬಿಐ ಹಾಗೂ ಗೂಗಲ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.

Intro:Body:

ನವದೆಹಲಿ: ಹಣಕಾಸು ವ್ಯವಹಾರ ಸಂಬಂಧ ಸೂಕ್ತ ಅನುಮತಿ ಪಡೆಯದೆ ಆನ್‌ಲೈನ್ ಪೇಮೆಂಟ್ ಆ್ಯಪ್ ಗೂಗಲ್ ಪೇ ದೇಶದಲ್ಲಿ ಹೇಗೆ  ಕಾರ್ಯನಿರ್ವಹಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಆರ್‌ಬಿಐಯನ್ನು ಪ್ರಶ್ನಿಸಿದೆ.
ಈ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗು ನ್ಯಾ.ಎ.ಜೆ ಭಾಂಬನಿ ನೇತೃತ್ವದ ಪೀಠ ಕೇಂದ್ರ ಬ್ಯಾಂಕ್‌ಗೆ ಈ ಪ್ರಶ್ನೆ ಕೇಳಿದೆ. ಅಭಿಜಿತ್ ಮಿಶ್ರಾ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಈ ರೀತಿ ಹಣಕಾಸು ವ್ಯವಹಾರ ನಡೆಸುವುದಕ್ಕೆ ಆರ್‌ಬಿಐನಿಂದ ಗೂಗಲ್ ಪೇ ಯಾವುದೇ ರೀತಿಯ ಅಧಿಕಾರ, ಅನುಮತಿ ಪಡೆದಿಲ್ಲ. ಈ  ಬಗ್ಗೆ ದಾಖಲೆ ಒದಗಿಸಿದ ಅರ್ಜಿದಾರರು, ಮಾರ್ಚ್‌ 20, 2019 ರಂದು ಕೇಂದ್ರ ಬ್ಯಾಂಕ್ ಅಧಿಕೃತವಾಗಿ ಬಿಡುಗಡೆ ಮಾಡಿದ 'ಹಣಕಾಸು ವ್ಯವಹಾರಗಳ ನಿರ್ವಾಹಕರ ಪಟ್ಟಿ' ಒದಗಿಸಿದ್ದಾರೆ. ಈ ಪಟ್ಟಿಯಲ್ಲಿ ಗೂಗಲ್ ಪೇ ಹೆಸರಿಲ್ಲ. ಹಾಗಿದ್ದರೂ ಈ ಸಂಸ್ಥೆ ದೇಶದಲ್ಲಿ ಕೋಟ್ಯಂತರ ರೂಪಾಯಿ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದಾಗಿ ಅವರು ಅರ್ಜಿಯಲ್ಲಿ ದೂರಿದ್ದಾರೆ. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳ ಪೀಠ, ಸೂಕ್ತ ಕಾರಣ ಕೇಳಿ ಆರ್‌ ಬಿ ಐ ಹಾಗು ಗೂಗಲ್ ಇಂಡಿಯಾಗೆ ನೊಟೀಸ್ ಜಾರಿ ಮಾಡಿದೆ.       
 
Conclusion:
Last Updated : Apr 10, 2019, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.