ETV Bharat / bharat

ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರ ಬಂಧನ - ಜೆಎಂ ಸಂಘಟೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರ ಬಂಧನ

ಪುಲ್ವಾಮಾ ಜಿಲ್ಲೆಯ ಅವಂತಿಪೊರಾ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಜಮ್ಮು ಕಾಶ್ಮೀರ ಪೊಲೀಸರು, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್​ಪಿಎಫ್ ಪಡೆಗಳು ಜೆಎಂ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಬಂಧಿಸಿವೆ.

J&K: 4 JeM associates arrested in Awantipora
ನಾಲ್ವರು ಜೆಎಂ ಸಹಚರರ ಬಂಧನ
author img

By

Published : May 13, 2020, 10:14 AM IST

ಶ್ರೀನಗರ : ಜೈಶ್-ಎ-ಮೊಹಮ್ಮದ್ (ಜೆಎಂ) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಂತಿಪೋರಾ ಕ್ರಾಸಿಂಗ್ ಬಳಿ ನಾಕಾ ಬಂದಿ ಹಾಕಿ ತಪಾಸಣೆ ನಡೆಸುವ ವೇಳೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಶಬೀರ್ ಅಹ್ಮದ್ ಪಾರಿ, ಸಿರಾಜ್ ಅಹ್ಮದ್ ದರ್, ಶಫತ್ ಅಹ್ಮದ್ ಮೀರ್ ಮತ್ತು ಇಷ್ಫಾಕ್ ಅಹ್ಮದ್ ಷಾ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಉಗ್ರ ಸಂಘಟನೆಯ ಪೋಸ್ಟರ್​, ನಗದು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.