ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿಯ ಕಲಾಕೋಟ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆ ಓರ್ವ ಭಯೋತ್ಪಾದಕನ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.
ಕಲಾಕೋಟೆಯ ಪಂಜಾ ಮೆಹಾರಿ ಗ್ರಾಮದಲ್ಲಿ ಭದ್ರತಾ ಪಡೆ, ಪೊಲೀಸ್ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಉಗ್ರನ ಹೊಡೆದುರುಳಿಸಲಾಗಿದೆ.
ಎನ್ಕೌಂಟರ್ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರದೇಶ ಸುತ್ತುವರಿಯಲಾಗಿದೆ ಎಂದು ರಾಜೌರಿ ಹಾಗೂ ಪೊಂಚ್ನ ಡಿಐಜಿ ವಿವೇಕ್ ಗುಪ್ತಾ ತಿಳಿಸಿದ್ದಾರೆ.