ETV Bharat / bharat

ಅತಿ ವೇಗದ ಮಾನವ ಕ್ಯಾಲ್ಕುಲೇಟರ್​ ಹೆಗ್ಗಳಿಕೆಗೆ ಪಾತ್ರನಾದ ಭಾರತದ ಭಾನು ಪ್ರಕಾಶ್​​​​ - ಹೈದರಾಬಾದ್

ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಗಣಿತ ವಿದ್ಯಾರ್ಥಿಯಾಗಿರುವ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೈದರಾಬಾದ್​ನ ನೀಲಕಂಠ ಭಾನು ಪ್ರಕಾಶ್ ಪಾತ್ರ
ಹೈದರಾಬಾದ್​ನ ನೀಲಕಂಠ ಭಾನು ಪ್ರಕಾಶ್ ಪಾತ್ರ
author img

By

Published : Aug 25, 2020, 8:06 AM IST

ಹೈದರಾಬಾದ್: ಇತ್ತೀಚೆಗೆ ಲಂಡನ್‌ನ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್‌ಒ)ನಲ್ಲಿ ನಡೆದ ಮಾನಸಿಕ ಲೆಕ್ಕಾಚಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪ್ರಥಮ ಬಾರಿಗೆ ಚಿನ್ನ ಗೆದ್ದ ಹೈದರಾಬಾದ್‌ನ 20 ವರ್ಷದ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಗಣಿತ (ಗೌರವ) ವಿದ್ಯಾರ್ಥಿಯಾಗಿರುವ ಇವರು, ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ವಿಶ್ವ ದಾಖಲೆಗಳನ್ನು ಮತ್ತು 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ನಾನು ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಕಾರಣಕ್ಕಾಗಿ 4 ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದೇನೆ. ನನ್ನ ಮೆದುಳು ಕ್ಯಾಲ್ಕುಲೇಟರ್​​ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ಈ ದಾಖಲೆಗಳನ್ನು ಮುರಿಯುವ ಸಾಹಸ ಸ್ಕಾಟ್ ಫ್ಲಾನ್ಸ್‌ಬರ್ಗ್ ಮತ್ತು ಶಕುಂತಲಾ ದೇವಿಯಂತಹ ಗಣಿತ ತಜ್ಞರ ಬಳಿ ಇತ್ತು. ಗಣಿತದ ವಿಷಯದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ " ಎಂದರು.

"ಆಗಸ್ಟ್ 15ರಂದು ನಡೆದ ಲಂಡನ್-2020ರ ಎಂಎಸ್ಒನಲ್ಲಿ ಭಾರತ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದೆ. ಮಾನಸಿಕ ಕೌಶಲ್ಯ ಮತ್ತು ಮನಸ್ಸಿನ ಕ್ರೀಡೆಗಳ ಆಟಗಳಿಗೆ ಎಂಎಸ್ಒ ಅತ್ಯಂತ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ಪ್ರತೀ ವರ್ಷ ಲಂಡನ್‌ನಲ್ಲಿ ಇದು ನಡೆಯುತ್ತದೆ. ಇದು ದೈಹಿಕ ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ಒಲಿಂಪಿಕ್ ಸ್ಪರ್ಧೆಗೆ ಸಮಾನವಾಗಿರುತ್ತದೆ " ಎಂದು ಅವರು ಹೇಳಿದರು.

ಸ್ಪರ್ಧೆಯಲ್ಲಿ ಯುಕೆ, ಜರ್ಮನಿ, ಯುಎಇ, ಫ್ರಾನ್ಸ್, ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ 13 ದೇಶಗಳಿಂದ 57 ವರ್ಷ ವಯಸ್ಸಿನ 30 ಮಂದಿ ಭಾಗವಹಿಸಿದ್ದರು.

ಎಂಎಸ್ಒಅನ್ನು ಮೊದಲ ಬಾರಿಗೆ 1998ರಲ್ಲಿ ನಡೆಸಲಾಯಿತು. ಭಾನಾ ಪ್ರಕಾಶ್ ಲೆಬನಾನ್​​ ಸ್ಪರ್ಧಿಗಿಂತ 65 ಪಾಯಿಂಟ್ ಮುಂದಿದ್ದರು. ಯುಎಇಯ ಒಬ್ಬರು ಮೂರನೇ ಸ್ಥಾನ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.