ETV Bharat / bharat

ತೆಲಂಗಾಣ ಮಳೆಯಾರ್ಭಟಕ್ಕೆ ಸಾವಿನ ಸಂಖ್ಯೆ 50ಕ್ಕೇರಿಕೆ... 6,000 ಕೋಟಿ ನಷ್ಟ! - ತೆಲಂಗಾಣ ಮಳೆಗೆ 6 ಸಾವಿರ ಕೋಟಿ ನಷ್ಟ

ವರುಣನ ಆರ್ಭಟಕ್ಕೆ ಮುತ್ತಿನ ನಗರಿ ಹೈದರಾಬಾದ್​ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Telangana Rain
Telangana Rain
author img

By

Published : Oct 15, 2020, 9:40 PM IST

ಹೈದರಾಬಾದ್​​: ತೆಲಂಗಾಣದಲ್ಲಿ ಸುರಿದ ಮಳೆಯ ಆರ್ಭಟಕ್ಕೆ ಇಲ್ಲಿಯವರೆಗೆ 50 ಜನರು ಸಾವನ್ನಪ್ಪಿದ್ದು, 6,000 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇಂದು ವಿವಿಧ ಜಿಲ್ಲೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮಹತ್ವದ ಸಭೆ ನಡೆಸಿದರು.

ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ 1,350 ಕೋಟಿ ರೂ. ತಕ್ಷಣ ಬಿಡುಗಡೆ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ. ಮಹಾಮಳೆಗೆ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇನ್ನು ಒಂದೇ ಕುಟುಂಬದ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೂರು ಮೃತದೇಹ ಹೊರತೆಗೆಯಲಾಗಿದ್ದು, ಐವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಕಳೆದ 117 ವರ್ಷಗಳಲ್ಲಿ ಸುರಿದ ಗರಿಷ್ಠ ಮಳೆ ಇದಾಗಿದ್ದು, ಗ್ರೇಟರ್​ ಹೈದರಾಬಾದ್​​ನಲ್ಲೇ ಕನಿಷ್ಠ 31ಜನರು ಸಾವನ್ನಪ್ಪಿದ್ದಾರೆ. ಕರ್ತವ್ಯದಲ್ಲಿದ್ದ ಪೋಸ್ಟ್​ಮ್ಯಾನ್​ ಕೂಡ ಮಹಾಮಳೆಗೆ ಬಲಿಯಾಗಿದ್ದಾನೆ.

ಈಗಾಗಲೇ 64 ಪರಿಹಾರ ಶಿಬಿರಗಳಲ್ಲಿ ಸುಮಾರು 44,000 ಜನರನ್ನ ಇರಿಸಲಾಗಿದ್ದು, 45,000 ಆಹಾರ ಪ್ಯಾಕೆಟ್​ ಒದಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ರೋಗ ಹರಡುವಿಕೆ, ಕೊರೊನಾ ವೈರಸ್​ ಸೋಂಕಿನ ಹೆಚ್ಚಳ ಹಾಗೂ ಶಿಥಿಲಗೊಂಡ ಕಟ್ಟಡಗಳ ಮರುನಿರ್ಮಾಣಕ್ಕಾಗಿ ಹಣ ರಿಲೀಸ್​ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.