ETV Bharat / bharat

ತೆಲಂಗಾಣದಲ್ಲಿ ಅಂತಿಮ ಪರೀಕ್ಷೆ ಇಲ್ಲದೇ 1-9 ತರಗತಿ ಮಕ್ಕಳಿಗೆ ತೇರ್ಗಡೆ ಭಾಗ್ಯ.. - ಪರೀಕ್ಷೆ ಇಲ್ಲದೇ ಮಕ್ಕಳು ಪಾಸ್​

2020-21ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿರುವ ಸಿಬಿಎಸ್‌ಇ, ಐಸಿಎಸ್‌ಇ ಅಂತಾರಾಷ್ಟ್ರೀಯ ಮಂಡಳಿಗಳು ಯಾವುದೇ ರೀತಿಯ ಶುಲ್ಕವನ್ನು ಹೆಚ್ಚಿಸದೆ ಮುಂದಿನ ಆದೇಶದವರೆಗೂ ಮಾಸಿಕ ಆಧಾರದ ಮೇಲೆ ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕೆಂದು ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿದೆ.

K Chandrasekhar Rao
ಕೆ ಚಂದ್ರಶೇಖರ್​ ರಾವ್
author img

By

Published : May 5, 2020, 7:52 PM IST

ತೆಲಂಗಾಣ /ಹೈದರಾಬಾದ್​ : ಅಂತಿಮ ಪರೀಕ್ಷೆ ಇಲ್ಲದೇ ಒಂದರಿಂದ ಒಂಭತ್ತನೇ ತರಗತಿಯ ಎಲ್ಲಾ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದಾಗಿ ತೆಲಂಗಾಣ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಲಾಕ್​ಡೌನ್​ ಕಾರಣದಿಂದಾಗಿ 2019-20ನೇ ಶೈಕ್ಷಣಿಕ ವರ್ಷದ 1-9ನೇ ತರಗತಿಯ ಮಕ್ಕಳಿಗೆ ಸಮ್ಮೇಟಿವ್ ಅಸೆಸ್ಮೆಂಟ್ (ಎಸ್‌ಎ-2) ಪರೀಕ್ಷೆಗಳನ್ನು ನಡೆಸದೆ ಎಲ್ಲಾ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಘೋಷಣೆ ಮಾಡಿದ್ದಾರೆ.

ಸರ್ಕಾರ ಕೊರೊನಾ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 2019-20ರ ಶೈಕ್ಷಣಿಕ ವರ್ಷದ ಸರ್ಕಾರಿ ಶಾಲೆಗಳು, ಅನುದಾನ ಮತ್ತು ಅನುದಾನ ರಹಿತ ಶಾಲೆಯ 1-9ನೇ ತರಗತಿಯ ಎಲ್ಲಾ ಮಕ್ಕಳ ಸಮ್ಮೇಟಿವ್ ಅಸೆಸ್ಮೆಂಟ್ ಪರೀಕ್ಷೆಗಳನ್ನು ರದ್ದುಗೊಳಿಸಿ ಅವರನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕೆಂದು ಆದೇಶ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.