ETV Bharat / bharat

ಯಾವ ಕೆಲಸ ನಡೆಯುತ್ತಿದೆ ಎಂದು ಕೇಳಿದ್ದಕ್ಕೆ ಜೆಸಿಬಿಯಿಂದ ಹಲ್ಲೆ: ವಿಡಿಯೋ - Mangpeda Police

ಯಾವ ಕೆಲಸ ನಡೆಯುತ್ತಿದೆ ಎಂದು ಕೇಳಿದ ವ್ಯಕ್ತಿಯೊಬ್ಬರಿಗೆ ಭೂಮಿ ಅಗೆಯುವ ಯಂತ್ರದ ತೋಳಿನಿಂದ ಬಲವಾಗಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೀಗೆ ಹಲ್ಲೆ ಮಾಡಿದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.

Telangana: One held for hitting man on head with excavator machine arm
ಅಗೆಯುವ ಯಂತ್ರದಿಂದ ಹೊಡೆದ ಕಾರ್ಮಿಕ
author img

By

Published : Jul 8, 2020, 1:42 PM IST

ಮುಲುಗು (ತೆಲಂಗಾಣ): ಭೂಮಿ ಅಗೆಯುವ ಯಂತ್ರದಿಂದ ವ್ಯಕ್ತಿಯನ್ನು ಹೊಡೆದ ಪರಿಣಾಮ ಕಾರ್ಮಿಕನನ್ನು ಇಲ್ಲಿನ ಮಾಂಗ್‌ಪೆಡಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತೀವ್ರ ಗಾಯಗೊಂಡಿರುವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡ ಸಂತ್ರಸ್ತ ಸೂರಯ್ಯ ಅವರ ಮಗ ಮಂಗಳವಾರ ಮಧ್ಯಾಹ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸೂರಯ್ಯ ಕಾಮಗಾರಿ ಸ್ಥಳಕ್ಕೆ ಹೋದಾಗ ಮದ್ಯದ ಅಮಲಿನಲ್ಲಿದ್ದರು. ಇಲ್ಲಿ ಯಾವ ಕೆಲಸ ಮಾಡಲಾಗುತ್ತಿದೆ ಎಂದು ಅಗೆಯುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಹಿಮಾಚಲಂ ಎಂಬಾತನಿಗೆ ಕೇಳಿದ್ದಾರೆ.

ಘಟನೆ ನಡೆದ ಸ್ಥಳ

ಆ ಸಂದರ್ಭದಲ್ಲಿ ಕಾರ್ಮಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಕೋಪದಿಂದ ಹಿಮಾಚಲಂ ಯಂತ್ರದಿಂದ ಸೂರೈಯಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಸಬ್‌ ಇನ್ಸ್‌ಪೆಕ್ಟರ್ ವೆಂಕಟೇಶ್ವರ ರಾವ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.