ಹೈದರಾಬಾದ್: ಇಡೀ ದೇಶದಲ್ಲಿ ತಲ್ಲಣ ಉಂಟುಮಾಡಿದ್ದ ಹೈದರಾಬಾದ್ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಇವತ್ತು ಬೆಳಗ್ಗೆ ಎನ್‍ಕೌಂಟರ್ ಮಾಡಿದ್ದಾರೆ. ಈ ಆರೋಪಿಗಳ ಶವಗಳನ್ನು ಡಿ.9ರವರೆಗೆ ಸುರಕ್ಷಿತವಾಗಿಡುವಂತೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಡಿಸೆಂಬರ್ 9ರ ಸಂಜೆ 8 ಗಂಟೆವರೆಗೆ ಮೃತ ಆರೋಪಿಗಳ ಶವ ಸುರಕ್ಷಿತವಾಗಿಡುವಂತೆ ತೆಲಂಗಾಣ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಜತೆಗೆ ಆರೋಪಿಗಳ ಮೃತದೇಹಗಳನ್ನು ಯಾವುದೇ ಕಾರಣಕ್ಕೂ ಅವರ ಕುಟುಂಬಸ್ಥರಿಗೆ ನೀಡದಂತೆಯೂ ಆದೇಶದಲ್ಲಿ ತಿಳಿಸಿದೆ.
-
Telangana High Court has directed that the bodies of the four accused (in rape and murder of woman veterinarian), who were killed in the encounter today be preserved by the State till 08:00 pm on December 9. pic.twitter.com/SAeydG3kwZ
— ANI (@ANI) December 6, 2019 " class="align-text-top noRightClick twitterSection" data="
">Telangana High Court has directed that the bodies of the four accused (in rape and murder of woman veterinarian), who were killed in the encounter today be preserved by the State till 08:00 pm on December 9. pic.twitter.com/SAeydG3kwZ
— ANI (@ANI) December 6, 2019Telangana High Court has directed that the bodies of the four accused (in rape and murder of woman veterinarian), who were killed in the encounter today be preserved by the State till 08:00 pm on December 9. pic.twitter.com/SAeydG3kwZ
— ANI (@ANI) December 6, 2019
ಪಶುವೈದ್ಯೆ ಜಿಶಾ(ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಭೀಕರವಾಗಿ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ 3.30ರ ವೇಳೆ ಪೊಲೀಸರು ಶೂಟೌಟ್ ಮಾಡಿ ಹತ್ಯೆ ಮಾಡಿದ್ದರು. ಹೈದರಾಬಾದ್ ಪೊಲೀಸರ ಈ ಕಾರ್ಯಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿತ್ತು.