ETV Bharat / bharat

ನೌಕರಿಗೆ ಕುತ್ತು ತಂದ ಬರ್ತಡೇ ಪಾರ್ಟಿ: ಕೋವಿಡ್​ ನಿಯಮ ಉಲ್ಲಂಘಿಸಿದ ಕಾನ್ಸ್​​ಟೇಬಲ್ ಸಸ್ಪೆಂಡ್​ - ಹೈದರಾಬಾದ್​

ಕೀಸರಾ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾನ್ಸ್​​ಟೇಬಲ್ ಶಿವ ಕುಮಾರ್ ಹೈದರಾಬಾದ್‌ನ ಹೊರವಲಯದಲ್ಲಿರುವ (ಕೀಸರಾದಲ್ಲಿರುವ) ರೆಸಾರ್ಟ್‌ವೊಂದರಲ್ಲಿ ತಮ್ಮ ಬರ್ತಡೇ ಪಾರ್ಟಿ ಹಮ್ಮಿಕೊಂಡಿದ್ದರು. ಕೋವಿಡ್​​ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಕಾನ್ಸ್​​ಟೇಬಲ್​​ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

Telangana cop suspended as birthday party spreads COVID
ಕೋವಿಡ್​ ನಿಯಮ ಉಲ್ಲಂಘಿಸಿದ ತೆಲಂಗಾಣ ಕಾನ್ಸ್​​ಟೇಬಲ್ ಸೇವೆಯಿಂದ ಅಮಾನತು
author img

By

Published : Sep 18, 2020, 12:43 PM IST

ಹೈದರಾಬಾದ್: ಪೊಲೀಸ್​ ಕಾನ್ಸ್​​ಟೇಬಲ್​​ ಆಯೋಜಿಸಿದ್ದ ಬರ್ತಡೇ ಪಾರ್ಟಿಯು ಕೊರೊನಾ ಹರಡಲು ಕಾರಣವಾಗಿದೆ. ಕಾನ್ಸ್​​ಟೇಬಲ್ ಶಿವ ಕುಮಾರ್ ಕೋವಿಡ್​​ ನಿಯಮಗಳನ್ನು ಉಲ್ಲಂಘಿಸಿದ್ದು, ರಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಕಾನ್ಸ್​​ಟೇಬಲ್ ಅನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಇನ್ನಿಬ್ಬರು ಕಾನ್‌ಸ್ಟೆಬಲ್‌ಗಳಿಗೆ ಚಾರ್ಜ್ ಮೆಮೋ ನೀಡಿದ್ದರೆ, ಇನ್ಸ್‌ಪೆಕ್ಟರ್​​ಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಕೀಸರಾ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವ ಕುಮಾರ್ ಹೈದರಾಬಾದ್‌ನ ಹೊರವಲಯದಲ್ಲಿರುವ (ಕೀಸರಾದಲ್ಲಿರುವ) ರೆಸಾರ್ಟ್‌ವೊಂದರಲ್ಲಿ ತಮ್ಮ ಬರ್ತಡೇ ಪಾರ್ಟಿ ಹಮ್ಮಿಕೊಂಡಿದ್ದರು. ಈ ಸಂಭ್ರಮಕೂಟದಲ್ಲಿ ಭಾಗಿಯಾಗಿದ್ದ ಹೆಚ್ಚಿನವರು ಮದ್ಯ ಸೇವಿಸಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ತೆಗೆದ ಫೋಟೋವನ್ನು ಶಿವ ಕುಮಾರ್ ತಮ್ಮ ವಾಟ್ಸ್​ ಆ್ಯಪ್​ ಡಿಪಿಯಲ್ಲಿ ಹಾಕಿಕೊಂಡಿದ್ದು, ಇದರಿಂದ ಉನ್ನತ ಮಟ್ಟದ ಅಧಿಕಾರಿಗಳಿಗೆ ವಿಷಯ ತಿಳಿದುಬಂದಿದೆ.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಶಿವ ಕುಮಾರ್ ಮತ್ತು ಇತರೆ ಇಬ್ಬರು ಕಾನ್ಸ್​​ಟೇಬಲ್​​​ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಅಧಿಕಾರಿಗಳು ನಿರ್ದೇಶಿಸಿದ್ದು, ಶಿವ ಕುಮಾರ್ ಮತ್ತು ಇನ್ನೋರ್ವ ಕಾನ್ಸ್​​ಟೇಬಲ್​​​ ನವೀನ್​​ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಶಿವ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದ್ದು, ನವೀನ್ ಮತ್ತು ಇನ್ನೊಬ್ಬ ಕಾನ್ಸ್​​ಟೇಬಲ್​​​​ಗೆ ಚಾರ್ಜ್ ಮೆಮೋ ನೀಡಲಾಗಿದೆ.

ಪೊಲೀಸ್ ಆಯುಕ್ತರು, ಉಪ ಆಯುಕ್ತರಿಗೆ ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡ ಇತರರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಕಾನ್ಸ್​​ಟೇಬಲ್ ಶಿವ ಕುಮಾರ್ ಕೋವಿಡ್​​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹಿರಿಯಾಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಕೋವಿಡ್​ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಾರಂಭಗಳನ್ನು ಆಯೋಜಿಸದಿರುವಂತೆ ಪೊಲೀಸ್​ ಇಲಾಖೆಗೆ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.