ಹೈದರಾಬಾದ್: ಕೊರೊನಾ ಕರಿನೆರಳಿನ ನಡುವೆ ಭಾರತದ ಯುವ ರಾಜ್ಯ ತೆಲಂಗಾಣ ಇಂದು ತನ್ನ ಆರನೇ ವರ್ಷದ ಸಂಸ್ಥಾಪನಾ ದಿನವನ್ನು ಸರಳವಾಗಿ ಆಚರಿಸಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ರಾಜ್ಯ ಹುಟ್ಟು ಪಡೆದ ಈ ಸಂಭ್ರಮದ ದಿನವನ್ನು ಸರಳ ಆಚರಣೆಯೊಂದಿಗೆ ಸರ್ಕಾರ ಆಚರಿಸಿದೆ. ಹೀಗಾಗಿ ಆಡಂಬರ ಮತ್ತು ಸಂತೋಷ ಈ ದಿನ ಮರೆಯಾಗಿದೆ.
ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರದ ಹೃದಯಭಾಗದಲ್ಲಿರುವ ಅಸೆಂಬ್ಲಿ ಕಟ್ಟಡದ ಬಳಿಯಿರುವ ತೆಲಂಗಾಣ ಹುತಾತ್ಮರ ಸ್ಮಾರಕ ಗನ್ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ರಾಜ್ಯಕ್ಕಾಗಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು.
ಆಂಧ್ರ ಪ್ರದೇಶದಿಂದ ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದ ತೆಲಂಗಾಣ ಪ್ರಂತ್ಯದ ಜನರಿಗೆ 2014ರಲ್ಲಿಮ ಅಂತಿಮವಾಗಿ ಶುಭಸುದ್ದಿ ಸಿಕ್ಕಿತ್ತು. ನಿರಂತರ ಹೋರಾಟ ಹಾಗೂ ಸಾವಿರಕ್ಕೂ ಹೆಚ್ಚು ಮಂದಿಯ ಬಲಿದಾನದ ನಂತರ ಕಳೆದ 2014ರ ಜೂನ್ 2ರಂದು ಅಧಿಕೃತವಾಗಿ ತೆಲಂಗಾಣವನ್ನು ರಾಜ್ಯವನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಜೊತೆಗೆ ಹೈದರಾಬಾದ್ ನಗರವನ್ನು ಇದರ ರಾಜಧಾನಿಯಾಗಿ ಘೋಷಿಸಲಾಗಿತ್ತು. ಈ ದಿನವನ್ನು ಇಂದು ತೆಲಂಗಾಣ ಉದಯಿಸಿದ ದಿನ(ತೆಲಂಗಾಣ ರಾಜ್ಯ ಅವತರಣ ದಿನ)ವಾಗಿ ಆಚರಿಸಲಾಗುತ್ತಿದೆ.
ರಾಜ್ಯ ಉದಯಿಸಿದಾಗಿನಿಂದ ಟಿಆರ್ಎಸ್(ತೆಲಂಗಾಣ ರಾಷ್ಟ್ರಂ ಸಮಿತಿ) ಪಕ್ಷದ ಸ್ಥಾಪಕ ಹಾಗೂ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಸತತ ಎರಡನೇ ಅವಧಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಏಕೈಕ ಉದ್ದೇಶದಿಂದ ಪಕ್ಷ ಸ್ಥಾಪಿಸಿದ ಜನಪ್ರಿಯ ನಾಯಕ ಕೆಸಿಆರ್ ಆಗಿದ್ದು, ರಾಜ್ಯದಲ್ಲಿ ಇವರಿಗೆ ಭಾರಿ ಜನಬೆಂಬಲವಿದೆ. ಇಂದು ಸಿಎಂ ಕೆಸಿಆರ್, ರಾಜ್ಯತ್ವವನ್ನು ಸಾಧಿಸಿದ್ದಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮರಿಗೆ ವಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಶ್...
-
Greetings to the people of Telangana on their Statehood Day. People from this state are excelling in a wide range of sectors. This state is making valuable contributions to the growth trajectory of India. I pray for the progress and prosperity of the people of Telangana.
— Narendra Modi (@narendramodi) June 2, 2020 " class="align-text-top noRightClick twitterSection" data="
">Greetings to the people of Telangana on their Statehood Day. People from this state are excelling in a wide range of sectors. This state is making valuable contributions to the growth trajectory of India. I pray for the progress and prosperity of the people of Telangana.
— Narendra Modi (@narendramodi) June 2, 2020Greetings to the people of Telangana on their Statehood Day. People from this state are excelling in a wide range of sectors. This state is making valuable contributions to the growth trajectory of India. I pray for the progress and prosperity of the people of Telangana.
— Narendra Modi (@narendramodi) June 2, 2020
-
తెలంగాణ ప్రజలకు రాష్ట్రావతరణ దిన శుభాకాంక్షలు. ఈ రాష్ట్ర ప్రజలు ఎన్నో క్షేత్రాలో తమ ప్రతిభను చాటుతున్నారు. దేశ ప్రగతిలో ఈ రాష్ట్రం ఓ ముఖ్య భూమిక పోషిస్తోంది. తెలంగాణ ప్రజల అభ్యున్నతి మరియు శ్రేయస్సుకై నేను ప్రార్ధిస్తున్నాను.
— Narendra Modi (@narendramodi) June 2, 2020 " class="align-text-top noRightClick twitterSection" data="
">తెలంగాణ ప్రజలకు రాష్ట్రావతరణ దిన శుభాకాంక్షలు. ఈ రాష్ట్ర ప్రజలు ఎన్నో క్షేత్రాలో తమ ప్రతిభను చాటుతున్నారు. దేశ ప్రగతిలో ఈ రాష్ట్రం ఓ ముఖ్య భూమిక పోషిస్తోంది. తెలంగాణ ప్రజల అభ్యున్నతి మరియు శ్రేయస్సుకై నేను ప్రార్ధిస్తున్నాను.
— Narendra Modi (@narendramodi) June 2, 2020తెలంగాణ ప్రజలకు రాష్ట్రావతరణ దిన శుభాకాంక్షలు. ఈ రాష్ట్ర ప్రజలు ఎన్నో క్షేత్రాలో తమ ప్రతిభను చాటుతున్నారు. దేశ ప్రగతిలో ఈ రాష్ట్రం ఓ ముఖ్య భూమిక పోషిస్తోంది. తెలంగాణ ప్రజల అభ్యున్నతి మరియు శ్రేయస్సుకై నేను ప్రార్ధిస్తున్నాను.
— Narendra Modi (@narendramodi) June 2, 2020
ಇನ್ನೊಂದೆಡೆ ರಾಜ್ಯ ಉದಯಿಸಿದ ದಿನಕ್ಕಾಗಿ ತೆಲಂಗಾಣ ಜನತೆಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ದೇಶದ ಪ್ರಗತಿಯಲ್ಲಿ ರಾಜ್ಯದ ಜನತೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದ ಜನತೆಯ ಅಭಿವೃದ್ಧಿ ಹಾಗೂ ಶ್ರೇಯಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ನಮೋ ತಿಳಿಸಿದ್ದಾರೆ.