ETV Bharat / bharat

ಅಭಿವೃದ್ಧಿಗೆ ಗಮನಕೊಡದ ಎನ್​ಡಿಎ ಈಗ ಯಾವ ಮುಖ ಹೊತ್ತು ಮತ ಕೇಳುತ್ತೆ?: ತೇಜಸ್ವಿ ಪ್ರಶ್ನೆ - ತೇಜಸ್ವಿ ಯಾದವ್ ಹೇಳಿಕೆಗಳು

ಬಜೆಟ್​​ನಲ್ಲಿ ಕೇವಲ ಶೇ.60 ರಷ್ಟು ಖರ್ಚು ಮಾಡಿರುವ ಬಿಹಾರ ಸರ್ಕಾರ, ಎದುರಾಗಿರುವ ಈ ಚುನಾವಣಾ ಸಮಯದಲ್ಲಿ ಯಾವ ಆಧಾರದ ಮೇಲೆ ಮತ ಕೇಳಲು ಬರುತ್ತೆ ಎಂದು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.

Tejashwi Yadav slams Yogi, says unemployment, poverty matter for Bihar polls
ತೇಜಸ್ವಿ ಯಾದವ್
author img

By

Published : Oct 22, 2020, 7:44 PM IST

ಪಾಟ್ನಾ (ಬಿಹಾರ): ಬಿಹಾರದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು ಪರ - ವಿರೋಧ ಹೇಳಿಕೆಗಳು ತಾರಕಕ್ಕೇರಿವೆ. ಇಂದಿನ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಭಾಷಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತೇಜಸ್ವಿ, ಯಾರು ಯಾವ ರಾಜ್ಯದಿಂದ ಬರುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ರಾಜ್ಯದಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ನಿರುದ್ಯೋಗ, ಬಡತನ, ವಲಸೆಯಂತಹ ವಿಷಯಗಳು ಪ್ರಸ್ತುತ ಎಂದಿದ್ದಾರೆ.

ಬಿಹಾರ ಚುನಾವಣೆಗೆ ಬಿಜೆಪಿ ನೀಡಿದ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆಗೆ ಬಿಜೆಪಿಗೆ ಮುಖವಿಲ್ಲ. ಇಲ್ಲಿಯವರೆಗೂ ಬಿಹಾರಕ್ಕೆ ವಿಶೇಷ ಪ್ಯಾಕೇಜ್​ ನೀಡದ ಕೇಂದ್ರ ಹಣಕಾಸು ಸಚಿವರು ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

15 ವರ್ಷಗಳ ಕಾಲ ಆಡಳಿತ ನಡೆಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಜೆಟ್​ನಲ್ಲಿನ ನಿಬಂಧನೆಗಳು ಹಾಗೂ ಖರ್ಚು - ವೆಚ್ಚವನ್ನು ಹೇಗೆ ಸರಿದೂಗಿಸಬೇಕೆಂಬುದು ಸಹ ಅವರು ಅರಿತುಕೊಂಡಿಲ್ಲ ಎಂದು ಟೀಕೆ ಮಾಡಿದರು.

ಬಿಹಾರದ 2,11,761 ಕೋಟಿ ವಿತ್ತೀಯ ಬಜೆಟ್​​ನಲ್ಲಿ ಶೇ.40 ರಷ್ಟು ಹಣವನ್ನು ಎನ್​ಡಿಎ ಸರ್ಕಾರ ವೆಚ್ಚ ಮಾಡಿಲ್ಲ. ಸಾಲ, ಬೇಜವಾಬ್ದಾರಿತನ, ಭ್ರಷ್ಟಾಚಾರ, ಕಳಪೆ ನೀತಿಗಳು ಇದಕ್ಕೆ ಕಾರಣವಾಗಿದೆ. ವೆಚ್ಚ ಮಾಡದಿರುವ ಈ ಬೃಹತ್ ಹಣವನ್ನು ನಿತೀಶ್ ಕುಮಾರ್, ಸುಶೀಲ್ ಕುಮಾರ್ ಮೋದಿ ಅವರಂತೆಯೇ ಮತ ಬ್ಯಾಂಕ್ ಸೃಷಿಸಲು ಬಳಸದೇ ಹೊಸ ಅಭಿವೃದ್ಧಿ ಕೆಲಸಗಳಿಗಾಗಿ ಸುಲಭವಾಗಿ ನಾವು ಬಳಸಬಹುದು ಎಂದರು.

ಒಟ್ಟು ಬಜೆಟ್​​ನಲ್ಲಿ ಕೇವಲ ಶೇ.60 ರಷ್ಟು ಖರ್ಚು ಮಾಡಿರುವ ಬಿಹಾರ ಸರ್ಕಾರ, ಎದುರಾಗಿರುವ ಈ ಚುನಾವಣಾ ಸಮಯದಲ್ಲಿ ಯಾವ ಆಧಾರದ ಮೇಲೆ ಮತಗಳನ್ನು ಕೇಳಲು ಹೋಗುತ್ತಾರೆ ಎಂದು ರಾಜ್ಯದ ಶ್ರೇಯೋಭಿವೃದ್ಧಿಗೆ ಹಣ ಮಂಜೂರು ಮಾಡದ ಎನ್​ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.