ಮುಂಬೈ: ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಸಾಧ್ಯವಾದರೆ ತಡೆಯಿರಿ ಎಂದು ಪೊಲೀಸರಿಗೆ ಇ-ಮೇಲ್ ಮಾಡಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಪದೇ ಪದೇ ಮುಂಬೈ ಪೊಲೀಸರಿಗೆ ಈ ಬಾಲಕ- ಇ- ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಅಪ್ರಾಪ್ತನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ 16 ವರ್ಷದ ಬಾಲಕ ಡಿಸೆಂಬರ್ 4ರಂದು ಮುಂಬೈ ಪೊಲೀಸರಿಗೆ ಈ ರೀತಿ ಸುಳ್ಳು ಮಾಹಿತಿ ರವಾನಿಸಿದ್ದ ಎನ್ನಲಾಗ್ತಿದೆ.
ಮುಂದಿನ 2 ಗಂಟೆಗಳಲ್ಲಿ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಬಾಂಬ್ ಸ್ಫೋಟಿಸಲಿದೆ. ಸಾಧ್ಯವಾದರೆ ನಿಲ್ಲಿಸಿ" ಎಂದು ಇ-ಮೇಲ್ ಸಂದೇಶ ಕಳಿಸಿದ್ದ ಎಂದು ಪೊಲೀಸಸ್ ಅಧಿಕಾರಿಗಳು ತಿಳಿಸಿದ್ದಾರೆ.