ಚಂದ್ರಾಪುರ್(ಮಹಾರಾಷ್ಟ್ರ): ಚಂದ್ರಾಪುರ್ ಜಿಲ್ಲೆಯ ಘರ್ಚಂದ್ಪುರದಲ್ಲಿರುವ ಸಾವಿತ್ರಿ ಬಾಯಿ ಫುಲೆ ಜೂನಿಯರ್ ಕಾಲೇಜಿನ ಇಂಗ್ಲೀಷ್ ಶಿಕ್ಷಕ ಝಹೀರ್ ಸಯ್ಯದ್, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಾದ ದಿಢೀರ್ ಬೆಳವಣಿಗೆಯಿಂದ ಶಾಕ್ ಆಗಿದ್ದಾರೆ.
ರಾತ್ರಿ ಬೆಳಗಾಗೋದ್ರೊಳಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಅರಗಿಸಿಕೊಳ್ಳಲಾಗದ ಇವರು, ತನಗೆ ಒಂದು ದಿನ ರೆಸ್ಟ್ ಬೇಕು ಎಂದು ಪ್ರಾಂಶುಪಾಲರಿಗೆ ಪತ್ರ ಬರೆದು ರಜೆ ಕೇಳಿದ್ದಾರೆ. ಆದರೆ ಝಹೀರ್ ಸಯ್ಯದ್ ರಜಾ ಅರ್ಜಿಯನ್ನು ಪ್ರಾಂಶುಪಾಲರು ಸ್ವೀಕರಿಸಿಲ್ಲ.
ತಾನು ಸರ್ಕಾರ ರಚನೆಯಿಂದ ಅಚ್ಚರಿಗೊಂಡು ರಜೆ ಕೇಳಿದ್ದೇನೆ ಎಂದು ಝಹೀರ್ ಸಯ್ಯದ್ ಹೇಳಿಕೊಂಡಿದ್ದಾರೆ.