ನವದೆಹಲಿ: ತೆಲುಗು ದೇಶಂ ಪಾರ್ಟಿಯಲ್ಲಿ ಪಕ್ಷಾಂತರ ರಾಜಕಾರಣ ಮುಂದುವರೆದಿದ್ದು ಇದೀಗ ಪಕ್ಷದ ವಕ್ತಾರ ಲಂಕಾ ದಿನಕರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡುಗೆ ರಾಜೀನಾಮೆ ಪತ್ರ ಸಲ್ಲಿಸಿ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಲಂಕಾ ದಿನಕರ್ ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ.
ಟಿಡಿಪಿಗೆ ಮತ್ತೊಂದು ಆಘಾತ: ಬಿಜೆಪಿ ಸೇರಿದ ನಾಲ್ವರು ಸಂಸದರು
ಕೆಲ ದಿನಗಳ ಹಿಂದೆ ಟಿಡಿಪಿಯ ನಾಲ್ವರು ಸಂಸದರು ಬಿಜೆಪಿ ಸೇರ್ಪಡೆಯಾಗಿದ್ದರು. ಭಾರತೀಯ ಜನತಾ ಪಾರ್ಟಿ ತಮ್ಮ ಪಕ್ಷದ ಶಕ್ತಿ ಉಡುಗಿಸುವ ಕಾರ್ಯ ಮಾಡುತ್ತಿದೆ ಎಂದು ನಾಯ್ಡು ಕಿಡಿಕಾರಿದ್ದರು.