ETV Bharat / bharat

ತೆರಿಗೆದಾತರು ರಾಷ್ಟ್ರ ನಿರ್ಮಾತೃಗಳು; ಹಣಕಾಸು ಸಚಿವೆ ನಿರ್ಮಲಾ - ಹಕ್ಕುಗಳ ಚಾರ್ಟರ್

ಶಾಸ್ತ್ರ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನ್ಯಾಯಾಂಗ ತಜ್ಞ ನಾನಿ ಪಾಲ್ಖಿವಾಲಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಆಸ್ಟ್ರೇಲಿಯಾ, ಯುಕೆ, ಯುಎಸ್​ ಮುಂತಾದ ಕೆಲವೇ ದೇಶಗಳು ತೆರಿಗೆದಾತರ ಹಕ್ಕುಗಳ ಚಾರ್ಟರ್​ ಹೊಂದಿವೆ. ತೆರಿಗೆದಾತರಿಗೆ ಹಕ್ಕುಗಳ ಚಾರ್ಟರ್​ ನೀಡುವುದು ರಾಷ್ಟ್ರದ ಹೊಣೆಗಾರಿಕೆಯೂ ಆಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಹೇಳಿದರು.

taxpayers-deserve-better-services
taxpayers-deserve-better-services
author img

By

Published : Aug 8, 2020, 9:19 PM IST

ನವದೆಹಲಿ: ತೆರಿಗೆದಾತರು ಭಾರತದ ರಾಷ್ಟ್ರ ನಿರ್ಮಾತೃಗಳಾಗಿದ್ದು, ಬರುವ ದಿನಗಳಲ್ಲಿ ಅವರ ಹಕ್ಕುಗಳನ್ನು ಕಾಪಾಡುವ ಸಲುವಾಗಿಯೇ ವಿಶೇಷ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತೆರಿಗೆದಾತರ ಅನುಕೂಲಕ್ಕಾಗಿ ತೆರಿಗೆ ಪಾವತಿಯ ಸರಳೀಕರಣ, ತೆರಿಗೆ ಪದ್ಧತಿಯಲ್ಲಿ ಪಾರದರ್ಶಕತೆ ಹಾಗೂ ತೆರಿಗೆ ವಿನಾಯಿತಿ ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

"ಭಾರತೀಯ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಅನುಕೂಲತೆಗಳನ್ನು ನೀಡುವ ಅಗತ್ಯವಿದೆ ಎಂದು ನಂಬಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದಲ್ಲಿರುವುದೇ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಭಾರತೀಯ ತೆರಿಗೆದಾತರಿಗಾಗಿಯೇ ವಿಶೇಷ ಹಕ್ಕುಗಳನ್ನು ನೀಡುವ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುವುದು." ಎಂದು ಹಣಕಾಸು ಸಚಿವೆ ಹೇಳಿದರು.

ಶಾಸ್ತ್ರ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನ್ಯಾಯಾಂಗ ತಜ್ಞ ನಾನಿ ಪಾಲ್ಖಿವಾಲಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಆಸ್ಟ್ರೇಲಿಯಾ, ಯುಕೆ, ಯುಎಸ್​ ಮುಂತಾದ ಕೆಲವೇ ದೇಶಗಳು ತೆರಿಗೆದಾತರ ಹಕ್ಕುಗಳ ಚಾರ್ಟರ್​ ಹೊಂದಿವೆ. ತೆರಿಗೆದಾತರಿಗೆ ಹಕ್ಕುಗಳ ಚಾರ್ಟರ್​ ನೀಡುವುದು ರಾಷ್ಟ್ರದ ಹೊಣೆಗಾರಿಕೆಯೂ ಆಗಿದೆ ಎಂದು ಅವರು ನುಡಿದರು.

ಬಜೆಟ್​ನಲ್ಲಿ ಈಗಾಗಲೇ ತೆರಿಗೆದಾತರ ಚಾರ್ಟರ್ ಘೋಷಿಸಲಾಗಿದೆ. ಈ ಚಾರ್ಟರ್​ಗೆ ಶೀಘ್ರ ಸಾಂವಿಧಾನಿಕ ಮಾನ್ಯತೆ ನೀಡುವ ಮೂಲಕ ತೆರಿಗೆ ಇಲಾಖೆಯಿಂದ ಅವರಿಗೆ ದೊರಕುವ ಸೇವೆಗಳು ಕಾಲಮಿತಿಯೊಳಗೆ ಸಿಗುವಂತೆ ನಿಯಮ ರೂಪಿಸಲಾಗುವುದು. ತೆರಿಗೆದಾತರು ರಾಷ್ಟ್ರ ನಿರ್ಮಾತೃಗಳೆಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ. ಸರ್ಕಾರಗಳ ಮೇಲೆ ಸರ್ಕಾರಗಳು ಬಂದರೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲು ಈ ತೆರಿಗೆದಾತರು ಕಟ್ಟುವ ತೆರಿಗೆಯಿಂದಲೇ ಸಾಧ್ಯವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತೆರಿಗೆದಾತರನ್ನು ಶ್ಲಾಘಿಸಿದರು.

ವರ್ಚುವಲ್​ ಸೆಷನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟಾಟಾ ಸನ್ಸ್​ ಕಂಪನಿ ಚೇರಮನ್ ಎನ್ ಚಂದ್ರಸೇಕರನ್, ರಾಷ್ಟ್ರೀಯ ಜ್ಯುಡಿಶಿಯಲ್ ಡೇಟಾ ಗ್ರಿಡ್ ಅಂಕಿ-ಅಂಶಗಳ ಪ್ರಕಾರ- ದೇಶದ ನ್ಯಾಯಾಲಯಗಳಲ್ಲಿ ಒಟ್ಟಾರೆ 3 ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹೈಕೋರ್ಟ್​ ಹಾಗೂ ಸುಪ್ರೀಂ ಕೋರ್ಟ್​ಗಳಲ್ಲೇ ಸುಮಾರು 45 ಲಕ್ಷ ಕೇಸ್ ಬಾಕಿ ಇವೆ. ಸಾಮಾನ್ಯವಾಗಿ ಪ್ರಕರಣವೊಂದು ಬಗೆಹರಿಯಬೇಕಾದರೆ 4 ರಿಂದ 5 ವರ್ಷಗಳು ಬೇಕಾಗುತ್ತವೆ. ಆದರೆ ಇಷ್ಟು ಅವಧಿಯಲ್ಲಿ ಪ್ರಕರಣ ಒಳಗೊಂಡಿರುವ ಆರ್ಥಿಕ ಮೌಲ್ಯದ ಪೈಕಿ ಶೇ 40 ರಷ್ಟು ಮೊತ್ತ ಖರ್ಚಾಗಿರುತ್ತದೆ. ಅಲ್ಲದೆ ಇದನ್ನು ಮಾನವ ದಿನಗಳಲ್ಲಿ ಲೆಕ್ಕ ಹಾಕಿದಲ್ಲಿ ಬಹುತೇಕ ನೂರಕ್ಕೆ ನೂರರಷ್ಟು ಪ್ರಕರಣದ ಮೌಲ್ಯ ಹಾಳಾಗಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.