ETV Bharat / bharat

ತಮಿಳುನಾಡಿನ ಮೊದಲ ಮಹಿಳಾ ಆ್ಯಂಬುಲೆನ್ಸ್ ಚಾಲಕಿ ವೀರಲಕ್ಷ್ಮಿ

ಇಬ್ಬರು ಮಕ್ಕಳ ತಾಯಿಯಾಗಿರುವ ವೀರಲಕ್ಷ್ಮಿ ತಮಿಳುನಾಡಿನ ಮೊದಲ ಮಹಿಳಾ 108 ಆ್ಯಂಬುಲೆನ್ಸ್​ ಚಾಲಕಿಯಗಿ ತಿರುವಳ್ಳೂರಿನ ಅವಾಡಿ ಸರ್ಕಾರಿ ಆಸ್ಪತ್ರೆಗೆ ಸೇರಿದ್ದಾರೆ. ಇವರು ಈ ಹಿಂದೆ ಪತಿಯೊಂದಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬ ಮತ್ತು ನೆರೆಹೊರೆಯವರ ಟೀಕೆಯ ಹೊರತಾಗಿಯೂ ವೀರಲಕ್ಷ್ಮಿ ಮುಂದುವರಿಯುತ್ತಿದ್ದಾರೆ.

ambulance driver
ambulance driver
author img

By

Published : Sep 26, 2020, 5:23 PM IST

Updated : Sep 26, 2020, 5:29 PM IST

ತಮಿಳುನಾಡು: ಮಹಿಳೆಯರು ಭಯವಿಲ್ಲದೇ ಮುಂದೆ ಬಂದರೆ ಯಾವುದೇ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದು ತಮಿಳುನಾಡಿನ ಮೊದಲ ಮಹಿಳಾ ಆ್ಯಂಬುಲೆನ್ಸ್​​ ಚಾಲಕಿ ಥೇನಿಯ ವೀರಲಕ್ಷ್ಮಿ ಹೇಳುತ್ತಾರೆ.

ಇಬ್ಬರು ಮಕ್ಕಳ ತಾಯಿಯಾಗಿರುವ ವೀರಲಕ್ಷ್ಮಿ ತಮಿಳುನಾಡಿನ ಮೊದಲ ಮಹಿಳಾ 108 ಆ್ಯಂಬುಲೆನ್ಸ್​​ ಚಾಲಕಿಯಾಗಿ ತಿರುವಳ್ಳೂರಿನ ಅವಾಡಿ ಸರ್ಕಾರಿ ಆಸ್ಪತ್ರೆಗೆ ಸೇರಿದ್ದಾರೆ.

ತನ್ನ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲಿಸಿದ ವೀರಲಕ್ಷ್ಮಿ ತನ್ನ ಪತಿಯೊಂದಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕೊರೊನಾ ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್​​​​​ ಚಾಲಕರು ಬೇಕಾಗಿರುವುದು ವೀರಲಕ್ಷ್ಮಿ ಅವರ ಗಮನಕ್ಕೆ ಬಂತು.

ಕೆಲಸದಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಲು ಬಯಸಿದ ವೀರಲಕ್ಷ್ಮಿ ಅರ್ಜಿ ಸಲ್ಲಿಸಿ, ಕೆಲಸ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು. ಸಾಕಷ್ಟು ನಿರೀಕ್ಷೆಗಳೊಂದಿಗೆ ಅವರು ತಮ್ಮ ಹೊಸ ಕೆಲಸವನ್ನು ಪ್ರಾರಂಭಿಸಲು ಹೊರಟಿದ್ದಾರೆ.

ಆ್ಯಂಬುಲೆನ್ಸ್​​​ ಚಾಲಕರ ಕೆಲಸ:

ಆ್ಯಂಬುಲೆನ್ಸ್​​ ಓಡಿಸುವುದು ಸುಲಭದ ಕೆಲಸವಲ್ಲ. ಗಾಯಗೊಂಡವರನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಲು ವಾಹನವನ್ನು ವೇಗವಾಗಿ ಓಡಿಸಬೇಕಾಗಿರುತ್ತದೆ. ಯಾವುದೇ ಹಿಂಜರಿಕೆಯಿಲ್ಲದೇ ರಕ್ತಸ್ರಾವವಾಗುತ್ತಿರುವ ಗಾಯಾಳುಗಳನ್ನು ರಕ್ಷಿಸಲು ಆ್ಯಂಬುಲೆನ್ಸ್ ಚಾಲಕರು ಸಿದ್ಧರಾಗಿರಬೇಕು.

ಆ್ಯಂಬುಲೆನ್ಸ್​​ ಚಾಲಕರು ಇದೇ ರೀತಿಯ ಹಲವಾರು ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಪುರುಷರು ಕೂಡಾ ಆ್ಯಂಬುಲೆನ್ಸ್​​ ಡ್ರೈವರ್ ಆಗಿ ಸೇರಲು ಹಿಂಜರಿಯುತ್ತಾರೆ. ಅಲ್ಲದೇ ಕೊರೊನಾದಂತಹ ಪರಿಸ್ಥಿತಿಯಲ್ಲಿ ಹೆಚ್ಚಿನವರು ಈ ಕಾರ್ಯದಿಂದ ತಪ್ಪಿಸುತ್ತಾರೆ. ಆದರೆ, ಸವಾಲುಗಳ ನಡುವೆಯೂ ಕೆಲಸ ಮಾಡಲು ನುನು ಸಿದ್ಧ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ವೀರಲಕ್ಷ್ಮಿ ಹೇಳುತ್ತಾರೆ.

ಕುಟುಂಬ ಮತ್ತು ನೆರೆಹೊರೆಯವರ ಖಂಡನೆ:

ಯಾವುದೇ ಮಹಿಳಾ ಚಾಲಕಿ ಇತರರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ವೀರಲಕ್ಷ್ಮಿಯೂ ಇದಕ್ಕೆ ಹೊರತಾಗಿಲ್ಲ. ಆಕೆ ಕೂಡ ಹಲವಾರು ಅಡೆತಡೆಗಳನ್ನು ನಿವಾರಿಸಬೇಕಾಯಿತು. ಆದರೆ, ಅವರ ಪತಿ ತಮ್ಮ ನಿರಂತರ ಬೆಂಬಲ ನೀಡಿದ್ದಾರೆ.

ವೀರಲಕ್ಷ್ಮಿ ಅವರು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುವಾಗ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಟೀಕಿಸುತ್ತಿದ್ದರು. ಇದೀಗ ಆ್ಯಂಬುಲೆನ್ಸ್​​ ಡ್ರೈವರ್ ಆಗಿರುವುದರಿಂದ ಟೀಕೆಗಳು ಅಧಿಕವಾಗಿವೆ. ಆದರೆ ಅದ್ಯಾವುದನ್ನೂ ಲೆಕ್ಕಿಸದ ವೀರಲಕ್ಷ್ಮಿ ಮುಂದುವರಿಯುತ್ತಿದ್ದಾರೆ.

Last Updated : Sep 26, 2020, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.