ETV Bharat / bharat

ಕ್ರಿಕೆಟ್ ವಿಚಾರದಲ್ಲಿ ಜಗಳ... ಸ್ನೇಹಿತರ ನಡುವಿನ ಘರ್ಷಣೆಯಲ್ಲಿ ತಾಯಿ ಬಲಿ - ಮಕ್ಖಳು ಸ್ನೇಹಿತರ ಜಗಳಕ್ಕೆ ತಾಯಿ ಸಾವು

ಕ್ರಿಕೆಟ್ ಪಂದ್ಯದ ವಿಚಾರದಲ್ಲಿ ಸ್ನೇಹಿತರ ನಡುವೆ ಉಂಟಾದ ಘರ್ಷಣೆಯಲ್ಲಿ ಮಕ್ಕಳ ತಾಯಿಯೊಬ್ಬರು ಬಲಿಯಾಗಗಿದ್ದಾರೆ. ತಮಿಳುನಾಡಿನಲ್ಲಿ ಈ ಪ್ರಕರಣ ನಡೆದಿದೆ.

woman dies during fight over cricket match
ಕ್ರಿಕೆಟ್ ವಿಚಾರದಲ್ಲಿ ಮಕ್ಕಳು ಮತ್ತು ಸ್ನೇಹಿತರ ನಡುವೆ ಘರ್ಷಣೆ
author img

By

Published : May 19, 2020, 12:05 PM IST

ತಿರುಪ್ಪೂರು (ತಮಿಳುನಾಡು): ತನ್ನ ಮಕ್ಕಳು ಮತ್ತು ಅವರ ಸ್ನೇಹಿತರ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ನಡೆದ ಜಗಳದಲ್ಲಿ 35 ವರ್ಷದ ಮಹಿಳೆ ಸಾವಿಗೀಡಾಗಿದ್ದಾಳೆ.

ಕೆಟ್ ಪಂದ್ಯದ ಸ್ಥಳವನ್ನು ನಿರ್ಧರಿಸುವ ಜಗಳದಲ್ಲಿ ತಮಿಳ್​ ಸೆಲ್ವನ್ (18), ಸಂಪತ್ ಕುಮಾರ್ (18), ವರದರಾಜ್ (19) ಮತ್ತು ರಾಜ್‌ಕುಮಾರ್ (18) ಎಂಬ ಯುವಕರು ಮಹಿಳೆಯ ಮೂವರು ಮಕ್ಕಳಿಗೆ ಹೊಡೆದಿದ್ದರು ಎನ್ನಲಾಗ್ತಿದೆ. ಇದೇ ವಿಚಾರವಾಗಿ ಆ ಮಕ್ಕಳ ತಾಯಿ-ತಂದೆ ಹಲ್ಲೆ ನಡೆಸಿದ್ದ ನಾಲ್ವರು ಯುವಕರನ್ನು ಪ್ರಶ್ನಿಸಲು ಹೋಗಿದ್ದರು.

ಈ ವೇಳೆ ಮಹಿಳೆ ಮತ್ತು ನಾಲ್ವರು ಯುವಕರೊಂದಿಗೆ ತೀವ್ರ ಗಲಾಟೆ ಸಂಭವಿಸಿದ್ದು, ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಯುವಕರು ಆ ಮಕ್ಕಳ ತಾಯಿ ಮೇಲೆ ಕ್ರಿಕೆಟ್ ಬ್ಯಾಟ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಯುವಕರನ್ನು ಬಂದಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.