ಚೆನ್ನೈ(ತಮಿಳುನಾಡು): ರಾಜ್ಯದಲ್ಲಿ ಸುಧಾರಿತ ಉತ್ಪಾದನಾ ಹಬ್ (ಎಎಂಹೆಚ್‌ಬಿ) ಸ್ಥಾಪಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರದ ಹೂಡಿಕೆ ಉತ್ತೇಜನ ಸಂಸ್ಥೆಯಾದ 'ಗೈಡೆನ್ಸ್ ತಮಿಳುನಾಡು', ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಜೊತೆ ಸಹಭಾಗಿತ್ವ ಹೊಂದಿದೆ.
ಗೈಡೆನ್ಸ್ ತಮಿಳುನಾಡು ಸಂಸ್ಥೆಯು ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಹೂಡಿಕೆಗಳನ್ನು ಉತ್ತೇಜಿಸುತ್ತದೆ. ಮತ್ತು ರಾಜ್ಯದ ಉದ್ಯಮಗಳಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಅನ್ನು ಒದಗಿಸುತ್ತದೆ. ಇನ್ನು ಎಎಂಹೆಚ್‌ಬಿ ಸಹ ಸ್ಮಾರ್ಟ್ ಕಾರ್ಖಾನೆಗಳಿಗೆ ಸಹಾಯ ಮಾಡಲು ಕ್ಲೌಡ್ ಕಂಪ್ಯೂಟಿಂಗ್, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) ನಂತಹ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಗೈಡೆನ್ಸ್ ತಮಿಳುನಾಡಿನ ಎಂಡಿ ಮತ್ತು ಸಿಇಒ ನೀರಜ್ ಮಿತ್ತಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು "ವಿಶ್ವ ಆರ್ಥಿಕ ವೇದಿಕೆಯೊಂದಿಗಿನ ಈ ಸಹಭಾಗಿತ್ವವು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಜೊತೆಗೆ ಉನ್ನತ ತಂತ್ರಜ್ಞಾನದ ಉತ್ಪನ್ನಗಳನ್ನು ಕೊನೆಗೊಳಿಸಲು ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.