ETV Bharat / bharat

ತಮಿಳುನಾಡಿಗೆ ಜಗನ್ ಅವರಂತ ಸಿಎಂ ಅಗತ್ಯವಿದೆ : ಪುದುಚೇರಿ ಸಚಿವ - ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಹಿಂದುಳಿದ ವರ್ಗದ ಸಚಿವರಾಗಿರುವ ರಾವ್​ ಅವರು, ಆಂಧ್ರಪ್ರದೇಶದಲ್ಲಿ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿರುವುದು ಐತಿಹಾಸಿಕವಾಗಿದೆ. ಹೆಚ್ಚು ಮಹತ್ವವುಳ್ಳದಾಗಿದೆ..

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
Andhra CM Jagan Mohan Reddy
author img

By

Published : Dec 18, 2020, 8:28 AM IST

ಅಮರಾವತಿ : ತಮಿಳುನಾಡಿನ ಜನರಿಗೆ ಜಗನ್ ಮೋಹನ್ ರೆಡ್ಡಿ ಅವರಂತಹ ಮುಖ್ಯಮಂತ್ರಿ ಬೇಕು ಎಂದು ಪುದುಚೇರಿ ಮಲ್ಲಾಡಿ ಕೃಷ್ಣ ರಾವ್ ಹೇಳಿದ್ದಾರೆ.

ಅಮರಾವತಿಯಲ್ಲಿ 139 ಜಾತಿಗಳ 728 ನಾಯಕರು ನಿರ್ದೇಶಕ ಮತ್ತು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ತಮಿಳುನಾಡಿನ ಜನರಿಗೆ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ಮುಖ್ಯಮಂತ್ರಿ ಬೇಕು ಎಂದ ಸಚಿವರು, ಆಂಧ್ರಪ್ರದೇಶದಲ್ಲಿ 56 ಹಿಂದುಳಿದ ವರ್ಗಗಳ ನಿಗಮಗಳನ್ನು ರಚಿಸುವ ಜಗನ್​ ಅವರ ಕಾರ್ಯವನ್ನು ಶ್ಲಾಘಿಸಿದರು.

ಹಿಂದುಳಿದ ವರ್ಗದ ಸಚಿವರಾಗಿರುವ ರಾವ್​ ಅವರು, ಆಂಧ್ರಪ್ರದೇಶದಲ್ಲಿ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿರುವುದು ಐತಿಹಾಸಿಕವಾಗಿದೆ. ಹೆಚ್ಚು ಮಹತ್ವವುಳ್ಳದಾಗಿದೆ ಎಂದರು.

ಸಿಎಂ ಜಗನ್ ಅವರು ಬಿಸಿ ಸಮುದಾಯಕ್ಕೆ ಸೇವೆ ಸಲ್ಲಿಸಲು ನೀಡಿದ್ದ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಜಗನ್​ ಅವರು ಮುಖ್ಯಮಂತ್ರಿಯಾಗಿರುವವರೆಗೂ ನಾನು ರಾಜೀನಾಮೆ ನೀಡಲು ಮತ್ತು ಅವರ ಸರ್ಕಾರಕ್ಕಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.