ETV Bharat / bharat

ಟೀಂ ಇಂಡಿಯಾ ಮಾಜಿ ಕ್ರಿಕೆಟರ್‌ ಶಿವರಾಮಕೃಷ್ಣನ್ ಬಿಜೆಪಿ ಸೇರ್ಪಡೆ

author img

By

Published : Dec 30, 2020, 12:51 PM IST

ಮಾಜಿ ಕ್ರಿಕೆಟಿಗ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಚೆನ್ನೈನಲ್ಲಿಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

tamil-nadu-former-indian-cricketer-laxman-sivaramakrishnan-joins-bharatiya-janata-party-in-chennai
ಟೀಂ ಇಂಡಿಯಾ ಮಾಜಿ ಕ್ರಿಕೆಟರ್‌ ಶಿವರಾಮಕೃಷ್ಣನ್ ಬಿಜೆಪಿ ಸೇರ್ಪಡೆ

ಚೆನ್ನೈ (ತಮಿಳುನಾಡು): ಟೀಂ ಇಂಡಿಯಾ ಮಾಜಿ ಆಟಗಾರ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಚೆನ್ನೈನಲ್ಲಿಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಶಿವರಾಮಕೃಷ್ಣನ್‌ ಕಮಲ ಮುಡಿದಿದ್ದಾರೆ.

ಈ ವೇಳೆ ಮಾತನಾಡಿದ ಸಿ.ಟಿ. ರವಿ, ಶಿವರಾಮಕೃಷ್ಣನ್‌ ದೊಡ್ಡ ನಾಯಕರು. ಅವರನ್ನು ಪಕ್ಷ ಗೌರವಿಸುತ್ತದೆ. ಅವರ ಶಕ್ತಿ ಏನೆಂಬುದು ನಮಗೆ ಗೊತ್ತಿದ್ದು, ದೇಶ ಹಾಗೂ ತಮಿಳುನಾಡಿನ ಹಿತಾಸಕ್ತಿಗಾಗಿ ಅವರು ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಎಡಗೈ ಬ್ಯಾಟ್ಸಮನ್‌ ಕಮ್‌ ಬೌಲರ್‌ ಆಗಿರುವ ಶಿವರಾಮಕೃಷ್ಣನ್‌ ಟೀಂ ಇಂಡಿಯಾ ಪರ 9 ಟೆಸ್ಟ್‌ ಪಂದ್ಯಗಳನ್ನು ಆಡಿ 130 ರನ್‌ ಗಳಿಸಿದ್ದಾರೆ. 76 ಫಸ್ಟ್‌ ಕ್ಲಾಸ್‌ ಪಂದ್ಯಗಳಿಂದ 1,802 ರನ್‌ ಗಳಿಸಿದ್ದಾರೆ. 1983 ಏಪ್ರಿಲ್‌ 28 ರಂದು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.