ನಾಗಪಟ್ಟಣಂ(ತಮಿಳುನಾಡು): ಜಿಲ್ಲೆಯ ಕಡಂಪಡಿಯ ನಿವೃತ್ತ ವೈದ್ಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ರೋಗ ಲಕ್ಷಣವನ್ನು ಖುದ್ದು ತಾವೇ ಕಂಡುಕೊಂಡ ಬಳಿಕ ಏಪ್ರಿಲ್ 7ರಂದು ಪರೀಕ್ಷೆ ಮಾಡಿಸಿದ್ದರು. ಈಗ ಅವರಿಗೆ ಕೊರೊನಾ ಪಾಸಿಟ್ವ್ ಇರುವುದು ಪತ್ತೆಯಾಗಿದೆ. ಸದ್ಯ ಇವರು ಕ್ವಾರಂಟೈನ್ನಲ್ಲಿದ್ದು, ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಈ ಮೊದಲು ತಬ್ಲಿಘಿ ಜಮಾತ್ನಿಂದ ಹಿಂತಿರುಗಿದ್ದ 32 ಮಂದಿಯಯಲ್ಲಿ 11 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಇದಲ್ಲದೇ ಈಗ ನಾಗಪಟ್ಟಣಂ ಜಿಲ್ಲೆಯಲ್ಲಿ ನಿವೃತ್ತ ವೈದ್ಯರಲ್ಲೂ ಸೋಂಕು ಪತ್ತೆಯಾಗಿದೆ.