ಚೆನ್ನೈ: ಮಧುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಪ್ರಸಿದ್ಧ ಜಲ್ಲಿಕಟ್ಟು- ಬುಲ್ ಟ್ಯಾಮಿಂಗ್ ಕ್ರೀಡೆಗೆ ಅಂತ್ಯ ಹಾಡಿದ್ದಾರೆ.
ಕೊನೆಯ ದಿನದ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಿಷೇಧಿಸಲಾಗಿದ್ದ ಈ ಕ್ರೀಡೆಯನ್ನು ಎಐಎಡಿಎಂಕೆ ಸರ್ಕಾರವು ಮರಳಿ ತಂದಿತು ಎಂದರು.
ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ಕ್ರೀಡೆ ಹಾಗೂ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯದವರೆಗೆ ಸಾಕ್ಷಿಯಾದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ತಮಿಳುನಾಡಿನ ಸುಗ್ಗಿಯ ಉತ್ಸವ ಪೊಂಗಲ್ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಲ್ಲಿ ಒಟ್ಟು 800 ಎತ್ತುಗಳು ಮತ್ತು 615 ಬುಲ್ ಟ್ಯಾಮರ್‌ಗಳು ಭಾಗವಹಿಸಿದ್ದವು.
ಬುಲ್ ಟ್ಯಾಮರ್‌ಗಳಿಗೆ ಬಹುಮಾನಗಳು-ನಿಗದಿತ ಸಮಯಕ್ಕೆ ಬುಲ್‌ನ ಗೂನು ಹಿಡಿದಿಟ್ಟುಕೊಳ್ಳುವುದಕ್ಕಾಗಿ- ಮತ್ತು ಬುಲ್ ಟ್ಯಾಮರ್‌ಗಳ ಹಿಡಿತವನ್ನು ಮೀರಿದ ಎತ್ತುಗಳ ಮಾಲೀಕರಿಗೆ ವಿತರಿಸಲಾಯಿತು.
ಬಹುಮಾನವಾಗಿ ಚಿನ್ನದ ನಾಣ್ಯಗಳು, ಪ್ಲಾಸ್ಟಿಕ್ ಕುರ್ಚಿಗಳು, ಪಾತ್ರೆಗಳು, ನಗದು ಮತ್ತು ಇತರ ವಸ್ತುಗಳನ್ನು ವಿತರಿಸಲಾಯಿತು. ಜೊತೆಗೆ ಅತ್ಯುತ್ತಮ ಬುಲ್ ಟ್ಯಾಮರ್ ಮತ್ತು ಅತ್ಯುತ್ತಮ ಬುಲ್ ಮಾಲೀಕರಿಗೆ ಕಾರನ್ನು ಬಹುಮಾನವಾಗಿ ನೀಡಲಾಯಿತು.