ETV Bharat / bharat

ಕೋವಿಡ್​ ಅಬ್ಬರ: ಮತ್ತಷ್ಟು ದಿನ ತಾಜ್​​​ಮಹಲ್​ ನೋಡೋ ಭಾಗ್ಯವೂ ಬಂದ್

ಕಳೆದ ನಾಲ್ಕು ದಿನಗಳಲ್ಲಿ ಈ ಜಿಲ್ಲೆಯಲ್ಲಿ 55 ಹೊಸ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 71 ಕಂಟೇನ್ಮೆಂಟ್​ ಝೋನ್​ಗಳನ್ನ ಮಾಡಲಾಗಿದೆ.

ತಾಜ್​​​ಮಹಲ್
ತಾಜ್​​​ಮಹಲ್
author img

By

Published : Jul 6, 2020, 7:02 AM IST

ಆಗ್ರಾ (ಉತ್ತರ ಪ್ರದೇಶ): ಆಗ್ರಾದಲ್ಲಿನ ಕೋವಿಡ್​​​​ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಕೊರೊನಾ ನಿಯಂತ್ರಣ ದೃಷ್ಟಿಯಿಂದ, ಐತಿಹಾಸಿಕ ಸ್ಮಾರಕಗಳಾದ ತಾಜ್ ಮಹಲ್, ಆಗ್ರಾ ಕೋಟೆ, ಅಕ್ಬರ್ ಸಮಾಧಿ ಮತ್ತು ಇತರ ಪ್ರದೇಶಗಳನ್ನ 'ಬಫರ್ ವಲಯ' ಝೋನ್​ಗಳಾಗಿ ಅಲ್ಲಿನ ಜಿಲ್ಲಾಡಳಿತ ಗುರುತಿಸಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಇವುಗಳು ಮುಚ್ಚಲ್ಪಟ್ಟಿವೆ ಎಂದು ಆಗ್ರಾದ ಡಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಈ ಜಿಲ್ಲೆಯಲ್ಲಿ 55 ಹೊಸ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 71 ಕಂಟೇನ್ಮೆಂಟ್​ ಝೋನ್​ಗಳನ್ನ ಮಾಡಲಾಗಿದೆ. ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿದರೆ ಕೊರೊನಾ ವೈರಸ್​ ಮತ್ತಷ್ಟು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿವೆ.

ಈ ಹಿಂದೆ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಜುಲೈ 6 ರಿಂದ ಸಂಪೂರ್ಣ ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಸ್ಮಾರಕಗಳನ್ನು ಪುನಃ ತೆರೆಯಬಹುದಾಗಿದೆ ಎಂದು ಘೋಷಿಸಿದ್ದರು. ಆದರೆ, ಜಿಲ್ಲಾಡಳಿತ ಈಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದು, ಕೊರೊನಾ ಕಡಿಮೆ ಆಗುವವರೆಗೂ ತಾಜ್​ಮಹಲ್​ ದರ್ಶನವನ್ನ ರದ್ದುಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.