ಕಾನ್ಪುರ( ಉತ್ತರಪ್ರದೇಶ): ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡ ಕೊರೊನಾ ಸೋಂಕಿತರು ಮತ್ತು ಶಂಕಿತರು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಮುಂದೆ ದರ್ಪ ಮೆರೆದಿದ್ದಾರೆ. ಔಷಧಗಳನ್ನು ತೆಗೆದುಕೊಳ್ಳಲು ನಿರಾಕರಿಸಿರುವುದು ಮಾತ್ರವಲ್ಲದೇ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
22 ಶಂಕಿತರಲ್ಲಿ ಆರು ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಶೋಕ್ ಶುಕ್ಲಾ ತಿಳಿಸಿದ್ದಾರೆ. ಈ ಎಲ್ಲಾ 22 ಮಂದಿಯನ್ನು ಮಂಗಳವಾರ ಮತ್ತು ಬುಧವಾರ ಕಾನ್ಪುರದ ಲಾಲಾ ಲಜಪತ್ ರೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾದ ಈ ಸೋಂಕಿತರು ಹಾಗೂ ಶಂಕಿತರು ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಅಲ್ಲಿಂದ ತೆಗೆದುಹಾಕುವಂತೆ ಅಧಿಕಾರಿಗಳನ್ನು ಪ್ರೇರೇಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಮಾತ್ನಲ್ಲಿ ಪಾಲ್ಗೊಂಡ ಸೋಂಕಿತರು ಮತ್ತು ಶಂಕಿತರು ಕೈಗಳ ಮೇಲೆ ಉಗುಳುತ್ತಾರಂತೆ. ಮೆಟ್ಟಿಲುಗಳ ಬದಿಯ ಹಿಡಿಗಳನ್ನು ಸ್ಪರ್ಶಿಸುತ್ತಾರೆ ಎಂದು ಆಸ್ಪತ್ರೆಯ ಹಿರಿಯ ವೈದ್ಯೆ ಆರತಿ ಲಾಲ್ಚಂದನಿ ಆರೋಪಿಸಿದ್ದಾರೆ.
ನಮ್ಮ ವೈದ್ಯಕೀಯ ಸಿಬ್ಬಂದಿಯು ಇಲ್ಲಿ ದಾಖಲಾದವರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನಿರತವಾಗಿದೆ. ಆಸ್ಪತ್ರೆಯಲ್ಲಿ ಉಗುಳುವುದು ಬೇಡವೆಂದು ಅವರಿಗೆ ತಿಳಿಸಿದ್ದೇವ. ಆದರೆ ಅವರು ನಮ್ಮ ಸೂಚನೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅವರು ವೈದ್ಯರೊಂದಿಗೆ ಸಹ ಕೆಟ್ಟದಾಗಿ ವರ್ತಿಸಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯ ನೀಡಿದ್ದರೂ ಸಹ, ಅವರು ಈ ರೀತಿ ದುರ್ವರ್ತನೆ ತೋರಿತ್ತಿದ್ದಾರೆ. ಸದ್ಯ ಪೊಲೀಸರ ಹಸ್ತಕ್ಷೇಪದಿಂದ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.