ETV Bharat / bharat

'ವೆಜ್​​ ಬಿರಿಯಾನಿ ಭಾರತದ ರಾಷ್ಟ್ರೀಯ ಆಹಾರ': ಟ್ರಂಪ್​ ಟ್ವೀಟ್​​ಗೆ ಸ್ವಿಗ್ಗಿ ರೀ ಟ್ವೀಟ್​​​ - ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ ಎನ್ನುವ ಟ್ವೀಟ್​​

'ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ!' ಎನ್ನುವ ಡೊನಾಲ್ಡ್​​ ಟ್ರಂಪ್​​ ಅವರ ಟ್ವೀಟ್​​​, ಇದೀಗ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ಖಾತೆಗಳಿಂದ ಪ್ರತ್ಯುತ್ತರಗಳು ಬರುತ್ತಿವೆ. ಚುನಾವಣೆಯಲ್ಲಿ ಗೆದ್ದಿದ್ದರೆ, ವೆಜ್​ ಬಿರಿಯಾನಿ ಭಾರತದ ರಾಷ್ಟ್ರೀಯ ಆಹಾರವಾಗಿದೆ ಎಂದು ಸ್ವಿಗ್ಗಿ ಟ್ವೀಟ್​ ಮಾಡಿದೆ.

Swiggy uses veg biryani to take dig at Trump's claims of victory
''ವೆಜ್​​ ಬಿರಿಯಾನಿ ಭಾರತದ ರಾಷ್ಟ್ರೀಯ ಆಹಾರ''; ಟ್ರಂಪ್​ ಟ್ವೀಟ್​​ಗೆ ಸ್ವಿಗ್ಗಿ ರೀ ಟ್ವೀಟ್​​​
author img

By

Published : Nov 17, 2020, 7:44 AM IST

ಬೆಂಗಳೂರು: ಜನಪ್ರಿಯ ಆಹಾರ ವಿತರಣಾ ವೇದಿಕೆಯಾದ ಬೆಂಗಳೂರು ಮೂಲದ ಸ್ವಿಗ್ಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಟ್ವೀಟ್​​ಗೆ ಪ್ರತ್ಯುತ್ತರ ನೀಡಿದೆ.

ಟ್ವಿಟ್ಟರ್​​ನಲ್ಲಿ ಟ್ರಂಪ್​ಗೆ ಸ್ವಿಗ್ಗಿ ಉತ್ತರ ನೀಡಿದ್ದು, ಭಾರತೀಯ ಪಾಕಪದ್ಧತಿ ಅದರಲ್ಲೂ ವಿಶೇಷವಾಗಿ ಸಸ್ಯಾಹಾರಿ ಬಿರಿಯಾನಿ ಬಗ್ಗೆ ಚರ್ಚೆಯನ್ನು ನಡೆಸಿದೆ.

'ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ!' ಎನ್ನುವ ಡೊನಾಲ್ಡ್​​ ಟ್ರಂಪ್​​ ಅವರ ಟ್ವೀಟ್​​​, ಇದೀಗ ಚರ್ಚೆಗೆ ಒಳಪಟ್ಟಿದ್ದು, ವಿವಿಧ ಖಾತೆಗಳಿಂದ ಪ್ರತ್ಯುತ್ತರಗಳು ಬರುತ್ತಿವೆ. ಈ ಚರ್ಚೆಯಲ್ಲಿ ಸ್ವಿಗ್ಗಿ ಕೂಡ ತನ್ನ ಪಾತ್ರ ವಹಿಸಿದೆ. ಚುನಾವಣೆಯಲ್ಲಿ ಗೆದ್ದಿದ್ದರೆ, 'ವೆಜ್​​ ಬಿರಿಯಾನಿ ಭಾರತದ ರಾಷ್ಟ್ರೀಯ ಆಹಾರ'ವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ತರಕಾರಿ ಬಿರಿಯಾನಿಯನ್ನು ಭಾರತದ ಹೆಚ್ಚಿನ ಭಾಗದ ಜನರು 'ಬಿರಿಯಾನಿ' ಎಂದೇ ಪರಿಗಣಿಸುವುದಿಲ್ಲ. ಇದನ್ನು 'ಪುಲಾವ್' ಎಂದು ಕರೆಯಲು ಬಯಸುತ್ತಾರೆ. ಈ ವಿಷಯವು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​​ಗೆ ಒಳಗಾಗುತ್ತಿದ್ದು, ಇದೀಗ ಟ್ರಂಪ್​​ ಟ್ವೀಟ್​​ನ ಸರದಿಯಾಗಿದೆ.

ಅಂದಹಾಗೆ ಟ್ರಂಪ್​​ ಟ್ವೀಟ್​​ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಸ್ವಿಗ್ಗಿ ಟ್ವೀಟ್​​ ಮಾಡಿದ ಕೂಡಲೇ, ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.