ETV Bharat / bharat

ಪೊಲೀಸರು ಸುತ್ತುವರಿದಾಗಲೇ ಯೋಗೇಂದ್ರ ಯಾದವ್‌ ಮೇಲೆ ಹಲ್ಲೆ, ಕುತ್ತಿಗೆ ಹಿಡಿದು ಕೆಳ ನೂಕಿದರು.. - ಸ್ವರಾಜ್ ಪಕ್ಷದ ಮುಖಂಡ ಯೋಗೇಂದ್ರ ಯಾದವ್

ಜೆಎನ್‌ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದನ್ನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಯೋಗೇಂದ್ರ ಯಾದವ್‌ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕೊರಳಿಗೆ ಹಾಕಿದ್ದ ಟವೆಲ್‌ ಹಿಡಿದು ನೂಕಿದ್ದಾರೆ. ಕೆಳಗೆ ಬಿದ್ದ ಯೋಗೇಂದ್ರ ಯಾದವ್ ಕಾಲ್ತುಳಿತಕ್ಕೊಳಗಾಗಿದ್ದಾರೆ.

swaraj-party-leader-yogendra-yadav-on-man-handling-in-jnu
ಸ್ವರಾಜ್ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್, ಕಾಲ್ತುಳಿತ..!
author img

By

Published : Jan 5, 2020, 11:57 PM IST

ನವದೆಹಲಿ: ದೆಹಲಿಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದನ್ನ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಸ್ವರಾಜ್ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಮೇಲೂ ಹಲ್ಲೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ್ದ ವೇಳೆ ಯೋಗೇಂದ್ರ ಯಾದವ್‌ ಮೇಲೆ ಪೊಲೀಸರೇ ಸುತ್ತುವರೆದಿದ್ದಾಗಲೇ ಹಲ್ಲೆ ನಡೆದಿದೆ. ಅವರ ಕೊರಳಲ್ಲಿ ಹಾಕಿದ್ದ ಟವೆಲ್ ಹಿಡಿದೆಳೆದು ಕೆಳಕ್ಕೆ ನೂಕಿದ್ದಾರೆ. ಕೆಳಕ್ಕೆ ಬಿದ್ದ ಯೋಗೇಂದ್ರ ಯಾದವ್‌ರು ಕಾಲ್ತುಳಿತಕ್ಕೊಳಗಾಗಿದ್ದಾರೆ.

ಮುಖವಾಡ ಧರಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು.ಇದರ ವಿರುದ್ದವಾಗಿ ಯೋಗೇಂದ್ರ ಯಾದವ್ ದೆಹಲಿಯ ಜೆಎನ್‌ಯುನಲ್ಲಿ ಪ್ರತಿಭಟಿಸುತ್ತಿದ್ದರು. ಈ ವೇಳೆ ಅವರನ್ನ ಪೊಲೀಸರು ಸುತ್ತುವರಿದರು. ಹಿಂದಕ್ಕೆ ಹೋಗಿ ಅಂತಾ ಅವರನ್ನ ಪೊಲೀಸರು ಹೇಳುತ್ತಿದ್ದರು.
ಪೊಲೀಸರೇ ಸುತ್ತುವರಿದಾಗಲೇ ಯೋಗೇಂದ್ರ ಯಾದವ್ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಅವರ ಕೊರಳಲ್ಲಿದ್ದ ಟವೆಲ್‌ ಹಿಡಿದೆಳೆದರಲ್ಲದೇ ಅವರನ್ನ ನೂಕಿದರು. ಇದರಿಂದಾಗಿ ಯೋಗೇಂದ್ರ ಯಾದವ್ ಕೆಳಕ್ಕೆ ಬಿದ್ದರು. ಆಗ ಯಾದವ್ ಕಾಲ್ತುಳಿತಕ್ಕೂ ಒಳಗಾಗಿದ್ದಾರೆ.

Intro:Body:

news

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.