ನವದೆಹಲಿ: ಸ್ವಚ್ಛ ಸರ್ವೇಕ್ಷಣ್- 2020 ಪ್ರಶಸ್ತಿ ಘೋಷಣೆಯಾಗಿದ್ದು, ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ಮೈಸೂರಿಗೂ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಲಭ್ಯವಾಗಿದೆ.
ಮಧ್ಯ ಪ್ರದೇಶದ ಇಂದೋರ್ ನಗರಕ್ಕೆ ಭಾರತದ ಸ್ವಚ್ಛಂದ ನಗರ ಪ್ರಶಸ್ತಿ ಲಭ್ಯವಾಗಿದೆ. ಆದ್ರೆ ರಾಜ್ಯಕ್ಕೆ ಈ ಬಾರಿ ಯಾವುದೇ ಪ್ರಶಸ್ತಿ ಲಭ್ಯವಾಗಿಲ್ಲ ಎಂಬ ನಿರಾಸೆ ಮಾಡುವ ಹಾಗಿಲ್ಲ. ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಕೂಡಾ ಎರಡೂ ವಿಭಾಗಗಳಲ್ಲಿ ಸ್ವಚ್ಛ ಸರ್ವೇಕ್ಷಣ್- 2020 ಪ್ರಶಸ್ತಿ ಪಡೆದುಕೊಂಡಿದೆ.
ಬೆಂಗಳೂರು ದೇಶದ ಅತ್ಯುತ್ತಮ ಸ್ವಯಂ ಸುಸ್ಥಿರ ನಗರ!
ಕರ್ನಾಟಕ ರಾಜಧಾನಿ, ಉದ್ಯಾನ ನಗರಿ ಬೆಂಗಳೂರು, 40 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ 'ದೇಶದ ಅತ್ಯುತ್ತಮ ಸ್ವಯಂ ಸುಸ್ಥಿರ ನಗರ' ಎಂಬ ಹಿರಿಮೆಗೆ ಪಾತ್ರವಾಗಿದೆ.
ಮೈಸೂರು ಕೂಡಾ ಕ್ಲೀನ್ ಸಿಟಿ!
ಹೌದು, 3ರಿಂದ 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ರಾಜ್ಯದ ಅರಮನೆಗಳ ನಗರಿ ಮೈಸೂರು, ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಯಲ್ಲಿ ಕನ್ನಡನಾಡಿನ ಹೆಮ್ಮೆಯ ನಗರಿ ಮೈಸೂರು ಎಲ್ಲ ವಿಭಾಗಗಳಲ್ಲಿ ದೇಶದ ಸ್ವಚ್ಛಂದ ನಗರಿ ಪ್ರಶಸ್ತಿಯನ್ನು ಪಡೆದಿತ್ತು. ಆದರೆ, ಆ ಬಳಿಕ ಆ ಪ್ರಶಸ್ತಿ ಇಂದೋರ್ ನಗರದ ಪಾಲಾಗಿದೆ. ಆದ್ರೆ ಇದೀಗ 3ರಿಂದ 10 ಲಕ್ಷ ಜನಸಂಖ್ಯೆಗಳ ನಗರಗಳ ವಿಭಾಗದಲ್ಲಿ ಮತ್ತೆ ಮೈಸೂರು ಮೊದಲ ಸ್ಥಾನ ಪಡೆದಿದೆ.