ಗಾಂಧಿನಗರ(ಗುಜರಾತ್): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಂಟು ಆರೋಪ ವಿಚಾರದಲ್ಲಿ ಎನ್ಸಿಬಿ ತನಿಖೆ ಮುಂದುವರೆಸಿದ್ದು, ಗುಜರಾತ್ನ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್)ನ ಮೊರೆಹೋಗಿದೆ.
ತನಿಖೆಯ ಅಂಗವಾಗಿ ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಬಾಲಿವುಡ್ ತಾರೆಯರ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಗಳು ಸೇರಿದಂತೆ 85 ವಸ್ತುಗಳನ್ನು ಗುಜರಾತ್ ಎಫ್ಎಸ್ಎಲ್ಗೆ ಕಳುಸಹಿಸಲಾಗಿದೆ. ಇದರ ಜೊತೆಗೆ ಪರೀಕ್ಷೆಗಾಗಿ ಡ್ರಗ್ಸ್ನ 25 ಸ್ಯಾಂಪಲ್ಗಳನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ನಶೆ ಏರಿಸಲು ಸಜ್ಜಾಗಿದ್ದ ಖದೀಮರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ, ನಾಲ್ವರು ಅರೆಸ್ಟ್
ರಿಯಾ ಚಕ್ರವರ್ತಿ, ರಿಯಾ ಸಹೋದರ ಶೋಯಿಕ್ ಚಕ್ರವರ್ತಿ ಮಾತ್ರವಲ್ಲದೇ ಸಾರಾ ಅಲಿ ಖಾನ್, ಅರ್ಜುನ್ ರಾಂಪಾಲ್, ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ ಮತ್ತು ಅವರ ಸ್ನೇಹಿತರ ಮೊಬೈಲ್ ಫೋನ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.
ಎಫ್‌ಎಸ್‌ಎಲ್ ತನ್ನ ವರದಿಯನ್ನು ಸಲ್ಲಿಸಿದ ನಂತರವೇ ಸುಶಾಂತ್ ಸಿಂಗ್ ರಜಪೂತ್ ಸಾವು ಅಥವಾ ಮಾದಕ ವಸ್ತು ಜಾಲದ ವಿಚಾರವಾಗಿ ಮತ್ತಷ್ಟು ಕುತೂಹಲಕಾರಿ ವಿಚಾರಗಳು ಬಹಿರಂಗಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.
ಈಗಾಗಲೇ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಅವರನ್ನು ಎನ್ಸಿಬಿ ವಿಚಾರಣೆಗೆ ಒಳಪಡಿಸಿದೆ.