ಸೂರತ್: ಲಾಕ್ಡೌನ್ ಅನೇಕ ಜನರ ಮೂಲ ಆದಾಯವನ್ನೇ ಕಸಿದುಕೊಂಡಿದೆ. ಕೊರೊನಾ ಭೀತಿ ಜನರನ್ನು ಗೃಹಬಂಧಿಯನ್ನಾಗಿಸಿದೆ. ಸದ್ಯ ಸೂರತ್ ಮೂಲದ ಎನ್ಜಿಒ ಒಂದು ಈ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರನ್ನು ಬೆಂಬಲಿಸಿ ಅವರಿಗೆ ಕೌಶಲ್ಯ-ತರಬೇತಿ ನೀಡಲು ಮುಂದಾಗಿದೆ.
ಪಡಿತರ ಮತ್ತು ಇತರ ಅಗತ್ಯ ವಸ್ತುಗಳ ಹೊರತಾಗಿ, ಲೈಂಗಿಕ ಕಾರ್ಯಕರ್ತೆರು ತಮ್ಮ ಜೀವನೋಪಾಯವನ್ನು ಗೌರವಯುತವಾಗಿ ಸಾಗಿಸುತ್ತಾರೆ ಎಂಬ ಭರವಸೆಯನ್ನು ಎನ್ಜಿಒ ನೀಡುತ್ತಿದೆ. ಬುಡಕಟ್ಟು ಮಹಿಳೆಯರ ಉನ್ನತಿ ಮತ್ತು ಸಬಲೀಕರಣಕ್ಕಾಗಿ ಒಂಬತ್ತು ವರ್ಷಗಳಿಂದ ಶ್ರಮಿಸುತ್ತಿರುವ ಶಕ್ತಿ ಫೌಂಡೇಶನ್, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದ ನಂತರ ಈ ಪ್ರಯತ್ನವನ್ನು ಕೈಗೊಂಡಿದೆ.
ಲಾಕ್ಡೌನ್ ಸಮಯದಲ್ಲಿ ನಾವು ಲೈಂಗಿಕ ಕಾರ್ಯಕರ್ತೆಯರಿಗೆ ಅಗತ್ಯ ಪಡಿತರವನ್ನು ನೀಡಿದೆವು, ಆದ್ರೆ ಅವು ಅಂದಿಗೆ ಸೀಮಿತವಾಗಿದ್ದವು. ಸದ್ಯ ಕೊರೊನಾ ಭೀತಿಯ ನಡುವೆ ಅವರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ನಾವು ಅವರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಮುಂದಾಗಿ, ಪ್ರಥಮವಾಗಿ 50 ಮಹಿಳೆಯರಿಗೆ ಖಾದಿ ಮಾಸ್ಕ್, ಬ್ಯಾಗ್ಸ್, ರೈನ್ ಕೋಟ್, ಕುರ್ತೀಸ್, ತಯಾರಿಸಲು ತರಬೇತಿ ನೀಡುತ್ತಿದ್ದೇವೆ ಎಂದು ಶಕ್ತಿ ಫೌಂಡೇಶನ್ ಸ್ಥಾಪಕಿ ಡಾ. ಸೋನಾಲ್ ರೊಚಾನಿ ತಿಳಿಸಿದರು.
ಪೌಂಡೇಷನ್ನಿನ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿರುವ ಲೈಂಗಿಕ ಕಾರ್ಯಕರ್ತೆಯರು, ಸಂಸ್ಥೆಯ ತಮ್ಮ ಜೀವನದಲ್ಲಿ ಒಂದು ತಿರುವು ಪಡೆಯಲು ಸಹಕಾರಿಯಾಗಿದೆ ಎಂದರು.
ನನ್ನ ಪತಿ ನನ್ನನ್ನು ಬೆಂಬಲಿಸದ ಕಾರಣ ಒತ್ತಾಯ ಪೂರ್ವಕವಾಗಿ ಈ ವೃತ್ತಿ ಮಾಡಬೇಕಾಯಿತು. ನನ್ನ ಮಕ್ಕಳು ಮತ್ತು ಕುಟುಂಬ ನಿರ್ವಹಣೆಗಾಗಿ ನಾನೊಬ್ಬಳೇ ದುಡಿಯಬೇಕಾಗಿದೆ. ಆದರೆ ಕೊರೊನಾ ಬಿಕ್ಕಟ್ಟು ನಮ್ಮನ್ನು ಕಾಡುತ್ತಿದೆ ಎಂದು ಕೌಶಲ್ಯ ತರಬೇತಿ ಪಡೆಯುತ್ತಿರುವರಲ್ಲಿ ಒಬ್ಬರು ಮಹಿಳೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆದಾಗ್ಯೂ, ಫೌಂಡೇಶನ್ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಬೆಂಬಲಕ್ಕೆ ನಿಂತಿದೆ. ಆದರೆ ನಾನು ನನ್ನ ಮೂಲ ವೃತ್ತಿಯನ್ನ ಬಿಡುತ್ತೇನೆ ಎಂಬ ನಂಬಿಕೆ ನನಗಿಲ್ಲ. ಕಾರಣ 7000-8000 ದಿಂದ ಕುಟುಂಬ ನಿರ್ವಹಣೆ ಕಷ್ಟ. ಅಲ್ಲದೆ ಮನೆ ಬಾಡಿ ಕಟ್ಟಬೇಕು, ಮುಖ್ಯವಾಗಿ ನನ್ನ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಬೇಕು ಎಂದರು.